ಬಸವಾದಿ ಪ್ರಮಥರ ತತ್ವಗಳೆ ಮಾರ್ಗದರ್ಶಿ : ಶಾಸಕಿ ಜೊಲ್ಲೆ

0
23
loading...

(ಹುಕ್ಕೇರಿ ಕಾರ್ಯಾಲಯದಿಂದ)

 ಹುಕ್ಕೇರಿ 6 : ಸಮಾಜದಲ್ಲಿ  ಪ್ರತಿ ವ್ಯಕ್ತಿ ಹಾಗೂ ಸರಕಾರಕ್ಕೆ  ಕೂಡ  12 ಶತಮಾನದ ಬಸವಾದಿ ಪ್ರಮಥರ ತತ್ವಗಳೆ ಮಾರ್ಗದರ್ಶಿಯಾಗಿವೆ ಯೆಂದು ಶಾಶಕಿ ಶಶಿಕಲಾ ಜೊಲ್ಲೆ ಹೇಳಿದರು.

ಅವರು  ತಾಲೂಕಿನ  ಬೆಳವಿ ಗ್ರಾಮದಲ್ಲಿ ಶ್ರೀ ಚರಂತೇಶ್ವರ ಮಠದ ನೂತನ ಕಟ್ಟಡದ ಪ್ರಾರಂಭೋತ್ಸವ ಹಾಗೂ ಆಧ್ಯಾತ್ಮ ಜಾಗೃತಿ ಅಂಗವಾಗಿ ಹಮ್ಮಿಕೊಂಡ ಬಸವ ಮಹಾದರ್ಶನ ಕಾವ್ಯ ಪ್ರವಚನದ ಮಹಾ ಮಂಗಲೋತ್ಸವದ ಅಂಗವಾಗಿ ಹಮ್ಮಿಕೊಂಡ  ಬಸವ ತತ್ವ ಸಮಾವೇಶದಲ್ಲಿ  ಮಾತನಾಡಿದರು ಶರಣ ವಚನಗಳನ್ನು ಪಾಲಿಸಿದ್ದಲ್ಲಿ  ಬದುಕಿನಲ್ಲಿ   ಸಹಕಾರತ್ವ  ಶಾಂತಿ ನೆಮ್ಮದಿಯಿಂದ  ಬದುಕು   ಸಾಗಿಸಲು ಸಹಕಾರಿಯೆಂದರು.

ಮಹಿಳೆಯರು ಇಂದಿನ ಸಮಾಜದಲ್ಲಿ  ಸ್ವಾಭಿಮಾನದಿಂದ ಬದುಕಲು  ವಚನ ಸಾಹಿತ್ಯವೆ ಮೂಲ ಕಾರಣವೆಂದ ಅವರು ಮಹಿಳೆಯರು ಕಾಯಕದಲ್ಲಿ ತಮ್ಮನ್ನು ಸಕ್ರಿಯಾಗಿ ತೊಡಗಿಸಿಕೊಂಡು ಕುಟುಂಬದ ನಿರ್ವಹಣೆಯಲ್ಲಿ ಶರಣ ನಡೆ ನುಡಿಗಳನ್ನು ಅಳವಡಿಸಿಕೊಂಡಲ್ಲಿ ಸ್ವಾರಸ್ಯಕರ ಜೀವನ ಸಾಗಿಸಲು ಸಾಧ್ಯವೆಂದರು.

ನಮ್ಮ ಕುಟುಂಬ ಶರಣರ ತತ್ವದಿಂದಲೆ ಏಳಿಗೆಯಾಗಿರುವದನ್ನು ಸ್ಮರಿಸಿಕೊಂಡರು. ರಾಜ್ಯೌತ್ಸವ ಪ್ರಶಸ್ತಿ ವಿಜೇತ ಬಸವರಾಜ ಬೆಂಗೇರಿ  ಮಾತನಾಡಿ ಜೀವದುದ್ದ್ಕೂ  ನಾಟಕದಲ್ಲಿ ಬಸವಣ್ಣವರ  ಪಾತ್ರ ಮಾಡಿದ  ಅನುಭವ  ಹಂಚಿಕೊಂಡರು.  ಹಾಸ್ಯಕಲಾವಿದ ನವಲಿಂಗ ಪಾಟೀಲ  ಅಧ್ಯಾತ್ಮ ಜೊತೆಗೆ ಹಾಸ್ಯ ನಂಟುಗಳನ್ನು  ವಚನದ ಮೂಲಕ ತಿಳಿಸಿದರು.

ಯಡೂರ ಯೋಗಾಶ್ರಮದ  ಚಿನ್ಮಯಾನಂದ ಸ್ವಾಮೀಜಿ ಮಾತನಾಡಿ ಜೀವನದಲ್ಲಿ  ಅಂತರಿಕ ಹಾಗೂ ಬಹಿರಂಗ ಶುದ್ದಿಗೆ  ವಚನ ಹಾಗೂ ಯೋಗ ಯುವಕರಿಗೆ ಅವಶ್ಯವಾಗಿದೆಯೆಂದರು.  ನಿಡಸೋಸಿಯ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಬಸವ ತತ್ವ ಸಮಾವೇಶವನ್ನು  ಉದ್ಘಾಟಿಸಿದರು.

ಬೆಳವಿಯ ಚರಂತೇಶ್ವರ ಮಠದ ಶ್ರೀ ಶರಣ ಬಸವ ದೇವರು ಮಾತನಾಡಿ  ತಾಯಂದಿರು ಮಕ್ಕಳಿಗೆ ಶಿವಶರಣರ ವಚನಗಳನ್ನು ಜೀವದಲ್ಲಿ ಮೈಗೂಡಿಸಿಕೊಳ್ಳುಂತೆ ಪ್ರೆರಣೆಯಾಗಬೇಕೆಂದರು.

ಚಿಕ್ಕೌಡಿ ಸಂಪಾದನ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು, ಮೃತ್ಯಂಜಯ ಮಹಾಸ್ವಾಮಿಗಳು, ಬಾಲ್ಕಿಯ ಶ್ರೀಗಳು,  ಬಿಜೆಪಿ ಜಿಲ್ಲಾ ಅದ್ಯಕ್ಷ  ಅಣ್ಣಾಸಾಹೇಬ ಜೊಲ್ಲೆ.  ಗುತ್ತಿಗೆದಾರ ಮಲ್ಲಪ್ಪಾ ಬಿಸಿರೊಟ್ಟಿ, ಸಂಜು  ದೇಸಾಯಿ, ಕೆಂಪಣ್ಣ ಉರಬನಟ್ಟಿ ಅಪರಾಯಿ, ಅಶೋಕ ಹಣಗಂಡಿ ಮತ್ತಿತರರು ಉಪಸ್ಥಿತರಿದ್ದರು.   ಹಿರಿಯರಾದ ಬಾಳಾಸಾಹೇಬ ನಾಯಿಕ ಸ್ವಾಗತಿಸಿದರು.

loading...

LEAVE A REPLY

Please enter your comment!
Please enter your name here