ಮುಂದಿನ ಸಭೆ ಜ.6ಕ್ಕೆ :

0
14
loading...

ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ತುರ್ತು ಕಾರಣಗಳಿಂದ ದಿಗ್ವಿಜಯ್ಸಿಂಗ್ ದೆಹಲಿಗೆ ತೆರಳಿದ್ದು, ಇಂದು ನಡೆಯಬೇಕಿದ್ದ ರಾಜ್ಯ ಸಮನ್ವಯ ಸಮಿತಿ ಸಭೆಯನ್ನು ಜ.6ಕ್ಕೆ ನಿಗದಿಪಡಿಸಲಾಗಿದೆ ಎಂದರು.

ನಿನ್ನೆ ರಾತ್ರಿ ಸೋನಿಯಾಗಾಂಧಿಯವರಿಂದ ತಡವಾಗಿ ಸಂದೇಶ ಬಂದ ಕಾರಣ ಇಂದು ದಿಗ್ವಿಜಯ್ಸಿಂಗ್ ದೆಹಲಿಗೆ ವಾಪಸಾಗುತ್ತಿದ್ದಾರೆ. ಸಮನ್ವಯ ಸಮಿತಿ ಸಭೆ ಮಾತ್ರ ರದ್ದಾಗಿದೆ. ತಮ್ಮ ಅಧ್ಯಕ್ಷತೆಯಲ್ಲಿ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ತಾವು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ದಿಗ್ವಿಜಯ್ಸಿಂಗ್ ಅವರ ಜತೆ ಲೋಕಸಭೆ ಚುನಾವಣಾ ತಯಾರಿ, ನಿಗಮ ಮಂಡಳಿಗಳ ನೇಮಕಾತಿ ಕುರಿತು ಚರ್ಚೆ ನಡೆಸಿದ್ದೇವೆ. ನೇಮಕಾತಿ ಪ್ರಕ್ರಿಯೆಗಳನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಹೇಳಿದರು.

ಪಿಡಬ್ಲ್ಯೂಡಿ ಇಲಾಖೆಯ ಚಿಕ್ಕರಾಯಪ್ಪ ಅವರಿಗೆ ಬಡ್ತಿ ನೀಡಿರುವ ಬಗ್ಗೆ ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆ. ಆಡಳಿತಾತ್ಮಕ ವಿಷಯಗಳಲ್ಲಿ ತಾವು ಹಸ್ತಕ್ಷೇಪ ನಡೆಸುವುದಿಲ್ಲ ಎಂದರು.

ಸಂಪುಟ ವಿಸ್ತರಣೆ ಕುರಿತು ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ವಿನಯ್ ಕುಲಕರ್ಣಿ ಅವರ ಬೆಂಬಲಿಗರು ಸಚಿವ ಸ್ಥಾನಕ್ಕಾಗಿ ಒತ್ತಾಯಿಸುವುದು ತಪ್ಪಲ್ಲ ಎಂದು ಸ್ಪಷ್ಟಪಡಿಸಿದರು.

 

loading...

LEAVE A REPLY

Please enter your comment!
Please enter your name here