ಮುರಗೇಶ್ ವಿರುದ್ಧ ಪ್ರತಿಭಟನೆ

0
8
loading...

 

ಬೆಂಗಳೂರು, 20- ಕರ್ನಾಟಕ

ಮಾನವ ಹಕ್ಕುಗಳ ಆಯೋಗಕ್ಕೆ

ತಮಿಳುನಾಡು ಮೂಲದ

ನಿವೃತ್ತ ಮುಖ್ಯ ನ್ಯಾಯಮೂರ್ತಿ

ಡಿ.ಮುರುಗೇಶನ್ ಅವರ ನೇಮಕಾತಿ

ವಿರೋಧಿಸಿ ಪ್ರತಿಭಟನೆ ನಡೆಸಿದ

ಕರ್ನಾಟಕ ರಕ್ಷಣಾ ವೇದಿಕೆ

ಕಾರ್ಯಕರ್ತರು ಮಾನವ ಹಕ್ಕುಗಳ

ಆಯೋಗಕ್ಕೆ ನಮ್ಮ ರಾಜ್ಯದವರನ್ನೇ

ನೇಮಕ ಮಾಡುವಂತೆ

ಆಗ್ರಹಿಸಿದರು.ನಗರದ ಸ್ವಾತಂತ್ರ್ಯ

ಉದ್ಯಾನವನದಲ್ಲಿ ಕರವೇ ಅಧ್ಯಕ್ಷ

ಟಿ.ಎ.ನಾರಾಯಣಗೌಡ ಅವರ

ನೇತೃತ್ವದಲ್ಲಿ ಸಮಾವೇಶಗೊಂಡ

ಕಾರ್ಯಕರ್ತರು ಮಾನವ ಹಕ್ಕುಗಳ

ಆಯೋಗಕ್ಕೆ ರಾಜ್ಯದವರನ್ನೇ

ನೇಮಕ ಮಾಡಬೇಕು ಎಂದು

ಒತ್ತಾಯಿಸಿದರು.ಕರವೇ ಅಧ್ಯಕ್ಷ

ಟಿ.ಎ. ನಾರಾಯಣಗೌಡ

ಮಾತನಾಡಿ, ನಮ್ಮ ರಾಜ್ಯದವರನ್ನು

ಮಾನವ ಹಕ್ಕುಗಳ ಆಯೋಗಕ್ಕೆ

ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ

ನಮ್ಮ ರಾಜ್ಯದವರ ಸಮಸ್ಯೆಗಳ

ಅರಿವಿರುತ್ತದೆ. ಮತ್ತೆ ಪ್ರಾಂತೀಯ

ಭಾಷೆಯಲ್ಲಿ ಸಮಾಲೋಚನೆ

ನಡೆಸಲು ಸಹಕಾರಿಯಾಗುತ್ತದೆ.

ಅನ್ಯ ರಾಜ್ಯದವರನ್ನು

ನೇಮಿಸಿದರೆ ಭಾಷೆಯ ಸಮಸ್ಯೆಯಿಂದ

ಜನರ ಸಮಸ್ಯೆ ಅರ್ಥವಾಗುವುದಿಲ್ಲ.

ಹೀಗಾಗಿ ಮಾನವ ಹಕ್ಕುಗಳಿಗೆ

ಹೋರಾಟ ಮಾಡುವವರಿಗೆ ನೈಜ

ನ್ಯಾಯ ಸಿಗಲು ಸಾಧ್ಯವಾಗುವುದಿಲ್ಲ.

ಹಾಗಾಗಿ ನಮ್ಮ ರಾಜ್ಯದವರನ್ನೇ

ನೇಮಕ ಮಾಡಬೇಕು ಎಂದು

ಆಗ್ರಹಿಸಿದರು.ಲೋಕಾಯುಕ್ತಕ್ಕೆ

ಆಂಧ್ರ ಮೂಲದವರನ್ನು ನೇಮಕ

ಮಾಡಲಾಗಿದೆ. ಅದೇ ರೀತಿ

ಮಾನವ ಹಕ್ಕುಗಳ ಆಯೋಗದ

ಅಧ್ಯಕ್ಷರಾಗಿ ತಮಿಳುನಾಡಿನವರನ್ನು

ನೇಮಕ ಮಾಡಲಾಗಿದೆ. ಬಹುತೇಕ

ಮಾನವ ಹಕ್ಕುಗಳ ಆಯೋಗಕ್ಕೆ

ಮತ್ತು ಲೋಕಾಯುಕ್ತದ ಬಳಿ

ಹೋಗುವವರು ಜನಸಾಮಾನ್ಯರು.

ಇವರ ಸಮಸ್ಯೆ ಬಗೆಹರಿಯಲು

ಈ ರಾಜ್ಯದವರನ್ನೇ ನೇಮಕ

ಮಾಡುವುದು ಸೂಕ್ತ ಎಂದು

ಹೇಳಿದರು.

loading...

LEAVE A REPLY

Please enter your comment!
Please enter your name here