ಲಿಂಗ ಪೂಜೆಯಿಂದ ಆರೋಗ್ಯ ವೃದ್ದಿ

0
44
loading...

ಕುಂದಗೋಳ : ಲಿಂಗ ಪೂಜೆ ಮನುಷ್ಯನ ಆರೋಗ್ಯ ಕಾಪಾಡುತ್ತದೆ, ಲಿಂಗವನ್ನು ಎಡಗೈಲ್ಲಿ ಹಿಡಿದು ಪೂಜೆ ಮಾಡುವುದು ಎಂದರೆ ನಮ್ಮ ಶರೀರದ ಮುಖ್ಯ ಅಂಗ ಹೃದಯದ ಹತ್ತಿರ ತರುವುದು ಮತ್ತು ಕಣ್ಣಿನ ಗುಡ್ಡೆಗಳು ಕಪ್ಪು ಹಾಗೆ ಲಿಂಗವು ಕಪ್ಪು ಇವರಡರ ಸಮಾಗಮದಿಂದ ಹೃದಯ ವೈಶಾಲ್ಯತೆ ಜೊತೆಗೆ ಹೃದಯಘಾತ, ಪಾರ್ಶವಾಯು ರೋಗಗಳಿಂದ ದೂರವಾಗಲು ಲಿಂಗಪೂಜೆಯಿಂದ ಸಾದ್ಯ ಎಂದು ಸಂಶಿಯ ಬೃಮ್ಮಾನಂದ ಮಠದ ಗುರುಸಿದ್ದೇಶ್ವರ ಸ್ವಾಮೀಜಿ ಮಠ ಹೇಳಿದರು.

ಲಿಂಗ ಪೂಜೆ ಮನುಷ್ಯನ ಜೀವನಕ್ಕೆ ನೈಜತೆ ದೊರಕಿಸಿ ಕೊಡುವುದು ಲಿಂಗ ಮದ್ಯಂ ಜಗತ್ ಸರ್ವಂ ಎಂದು ಪಟ್ಟಣದ ಬಸವಣ್ಣಜ್ಜನವರ ಕಲ್ಯಾಣಪುರ ಆಶ್ರಯದಲ್ಲಿ ಈಶ್ವರಪ್ಪ ಗಂಗಾಯಿ ಅವರ ಮನೆಯಲ್ಲಿ ಇತ್ತಿಚಿಗೆ ನಡೆದ ಬಸವಣ್ಣನ ನಡೆ ಮನೆಯ ಕಡೆ ಮತ್ತು ಲಿಂಗ ದಿಕ್ಷೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.

ಕಲ್ಯಾಣಪುರದ ಶ್ರೀಗಳಾದ ಬಸಯ್ಯಜ್ಜನವರು ಬಸವಣ್ಣನ ತತ್ವ ಚಿಂತನೆಗಳನ್ನ ಪ್ರತಿ ಮನೆ-ಮನೆಗೆ ತಲುಪಿಸುವ ಇಂತಹ ಕಾರ್ಯಕ್ರಮದಲ್ಲಿ ಲಿಂಗದಿಕ್ಷೆಯು ನಡೆಯುತ್ತಿರುವುದು ಅದಕ್ಕೆ ಭಕ್ತರ ಇಚ್ಚಾಸಕ್ತಿಯಿಂದ ನಡೆಯುತ್ತಿರುವ ಕಾರ್ಯಕ್ರಮವು  ನಿಜವಾಗಿಯೂ ತನ್ನ ಮಹತ್ವ ಕಾಣುತ್ತದೆ ಎಂದು ಹೇಳಿದರು.

42 ಜನರಿಗೆ ಕಲ್ಯಾಣಪುರದಿಂದ ಲಿಂಗ ಮತ್ತು ಲಿಂಗ ಧರಿಸಲು ಬಟ್ಟೆಯನ್ನು ನಿಡಿದರು. ಈ ಸಂದರ್ಭದಲ್ಲಿ ಶೇಖಣ್ಣ ಭಂಡಿವಾಡ ಮಾತನಾಡಿ, ಕಲ್ಯಾಣಪುರ ಕಾರ್ಯಕ್ರಮದಿಂದ ಈಶಣ್ಣನವರ ಮನೆ ಕೂಡಲ ಸಂಗಮದ ಶರಣರ ಸಭೆಯಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಐ.ಎಸ್.ಗಂಗಾಯಿ, ಬಸವರಾಜ ಗಂಗಾಯಿ, ಅಣ್ಣಪ್ಪ ಹೈಬತ್ತಿ, ಟಾಕಣ್ಣ ಭಂಡಿವಾಡ, ನಿಂಗಪ್ಪ ಗಂಗಾಯಿ, ಉಮೇಶ ಬೀಡನಾಳ, ಅಜ್ಜಿ ಭಂಡಿವಾಡ, ಚಂದ್ರು ಒಣಕುದರಿ, ಇನ್ನೂ ಸುಮಾರು ನೂರಾರು ಜನರು ಪಾಲ್ಗೊಂಡಿದ್ದರು.

ಮೃತ್ಯುಂಜಯ ಜಡಿಮಠ ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here