ವಿಶ್ವ ಏಡ್ಸ್ ಜಾಗೃತಿ ಜಾಥಾ

0
13
loading...

ಖಾನಾಪುರ : 28 ಆರೋಗ್ಯ ಇಲಾಖೆ, ಗ್ರಾಮ ಪಂಚಾಯತ,

ನೆಹರೂ ಸಂಯುಕ್ತ ಪಪೂ ಕಾಲೇಜ್ ಬೀಡಿ ಹಾಗೂ ಬೆಳಗಾವಿ ಪ್ರಾಂತೀಯ

ಸಮಾಜ ಸೇವಾ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಬೀಡಿ

ಗ್ರಾಮದಲ್ಲಿ ಇತ್ತೀಚೆಗೆ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಯಿತು. ಈ

ಸಂದರ್ಭದಲ್ಲಿ ಏರ್ಪಡಿಸಿದ್ದ ಜಾಗೃತಿ ಜಾಥಾ ಮತ್ತು ಸೈಕಲ್ ರ್ಯಾಲಿಯಲ್ಲಿ

ನೆಹರೂ ಪ್ರೌಢಶಾಲೆ ಮತ್ತು ರೂರಲ್ ಕೈಗಾರಿಕಾ ತರಬೇತಿ ಸಂಸ್ಥೆಯ

ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಳಿಕ ನಡೆದ ಕಾರ್ಯಕ್ರಮವನ್ನು ಬೀಡಿ ಪ್ರಾಥಮಿಕ ಆರೋಗ್ಯ

ಕೇಂದ್ರದ ವೈದ್ಯೆ ಡಾ.ಪೂಜಾ ಮೊಗಲೆ ಉದ್ಘಾಟಿಸಿದರು. ಕಾರ್ಯಕ್ರಮದ

ಅಧ್ಯಕ್ಷತೆಯನ್ನು ಜಾನ್ ಲೋಬೊ ವಹಿಸಿದ್ದರು. ನೆಹರೂ ಪ್ರೌಢಶಾಲೆಯ

ಮುಖ್ಯಾಧ್ಯಾಪಕ ವಿ.ಸಿ ಸಿಂಗದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬೀಡಿ ಗ್ರಾಮಸ್ಥರಾದ ಡಾ.ವೀರಭದ್ರ ಜವಳಿ, ಕೃಷಮೂರ್ತಿ, ಕೆ.ಹೆಚ್

ಲಕ್ಷ್ಮೀಕಾಂತ, ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು. ಎಂ ಬಿ

ಪೂಜೇರ ನಿರೂಪಿಸಿದರು. ನಾರಾಯಣ ಚಲವಾದಿ ವಂದಿಸಿದರು

loading...

LEAVE A REPLY

Please enter your comment!
Please enter your name here