ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ : ವಿರೇಶ ಪಾಟೀಲ

0
39
loading...

ಉಳ್ಳಾಗಡ್ಡಿ-ಖಾನಾಪೂರ : 29. ಅಂತರಾತ್ಮದಲ್ಲಿನ ದಿವ್ಯ ಶಕ್ತಿಯಿಂದ ಎನ್ನೆಲ್ಲ ಸಾಧನೆ ಸಾಧ್ಯ ಜಗತ್ತಿನಲ್ಲಿ ಮನುಷ್ಯನಲ್ಲಿರುವ ದಿವ್ಯ ಶಕ್ತಿಯಾದ ಆತ್ಮವಿಶ್ವಾಸದಿಂದ, ಶ್ರಧ್ದೆಯಿಂದ ಸಕಲವೂ ಸಿದ್ದಿಸುವುದು.ಎಂದು ವಿರೇಶ ಪಾಟೀಲ ಹೆಳಿದರು ಅವರು ಸಮೀಪದ ಹೆಬ್ಬಾಳ ಗ್ರಾಮದ ಎಲ್.ಖೆ.ಖೋತ ನವೋದಯ ಪ್ರತಿಷ್ಠಾನದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸ್ಮಾರ್ಟ ಕ್ಲಾಸ್ ಹಾಗೂ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ ಶಿಶಕ್ತಿಯೇ ಜೀವನ  ದೌರ್ಬಲ್ಯವೇ ಮರಣಷಿ ಎಂಬತೆ ಸಾಧನೆಗೆ ಶಕ್ತಿ ಸಹಕರಿಸುವು ಆದಿಸೆಯಲ್ಲಿ ವಿದ್ಯಾರ್ಥಿಗಳೆ ಸಾಧಕರಾಗಿ ಸಾಧಕರೆಲ್ಲ ಇತಿಹಾಸ ರಚಿಸಿಲ್ಲ ತಮ್ಮನ್ನು ತಾವು ನಂಬದವರೆ ಇತಿಹಾಸ ರಚಿಸಿದ್ದಾರೆ ಎಂದ ಅವರು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳಲ್ಲೊಂದಾದ ಮನುಷ್ಯನಲ್ಲಿರು ಅಗೋಚರವಾದ ಶಕ್ತಿಯಿಂದ ಎಲ್ಲವೂ ಸಾಧ್ಯ ಎಂದರು.

ದಿವ್ಯ ಸಾನಿದ್ಯ ವಹಿಸಿದ್ದ ನಿಡಸೋಸಿಯ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಆಶಿರ್ವಚನ ನೀಡುತ್ತ ಹಳ್ಳಿಯ ಜನರೆ ದಿಲಿಯಲ್ಲಿ ನೆಲೆಸದೆ ಹಳ್ಳಿಗರ ಬಾಳನ್ನು ಬೆಳಗಿಸಿ ಹಳ್ಳಿಯ ವಿದ್ಯಾರ್ಥಿಗಳಿಗೆ ನಗರ ಪ್ರದೇಶದ ನೂತನ ತಂತ್ರಜ್ಞಾನದ ಸೌಲಭ್ಯಗಳನ್ನು ನೀಡುತ್ತಿರುವ ಈ ಶ್ರೀ ಎಲ್.ಖೆ.ಖೋತ ನವೋದಯ ಪ್ರತಿಷ್ಠಾನದ ಪ್ರಾಥಮಿಕ  ಹಾಗೂ ಪ್ರೌಢಶಾಲೆಗಳ ಕಾರ್ಯ ಸ್ತುತ್ಯಾರ್ಹ ಎಂದ ಅವರು ವಿದ್ಯಾರ್ಥಿಗಳು ಆತ್ಮಸ್ಥರ್ಯದೊಂದಿಗೆ ಮುನ್ನುಗಿ. ಸಮಾಜಕ್ಕೆ ದೇಶಕ್ಕೆ ಬೇಕಾಗಿರುವ ಉತ್ತಮ ಕೊಡುಗೆಗಳಾದ ಸದೃಡರಾದ ವಿದ್ಯಾರ್ಥಿ-ಯುವಕರು ತಮ್ಮಲ್ಲಿರುವ ಪ್ರತಿಭೆಗಳಿಂದ ಜಗತ್ತನೆ ಬೆರಗುಗೊಳಿಸುವ ಕಾರ್ಯ ಮಾಡಿ ಎಂದರು. ವೇದಿಕೆಯಲ್ಲಿದ್ದ ಇನ್ನೊರ್ವ ಶ್ರೀಗಳಾದ ಹುಬ್ಬಳ್ಳಿಯ ಶ್ರೀ ಚನ್ನವೀರ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ ಪೂರ್ವಕ್ಕೆ ರೋಗ. ಪಶ್ಚಿಮಕ್ಕೆ ರೋಗ. ಉತ್ತರಕ್ಕೆ ಯೋಗ. ದಕ್ಷಿಣಕ್ಕೆ ಭೋಗ ಎಂದು ಮಹಾತ್ಮರು ಹೇಳಿದ್ದಾರೆ ಆ ದಿಸೆಯಲ್ಲಿ ಜೀವನದಲ್ಲಿ ವೇದ ಉಪನಿಷತ್ತು.ಆಧ್ಯಾತ್ಮಿಕ ಜ್ಞಾನ ಅಗತ್ಯ ಮನುಷ್ಯ ಬಾಹ್ಯ ಸೌಂದರ್ಯಕ್ಕೆ ಮಹತ್ವ ನೀಡದೇ ಅಂತರಾತ್ಮದಲ್ಲಿನ ಸೌಂದರ್ಯಕ್ಕೆ ಮಹತ್ವ ನೀಡುವಂತೆ ಕರೆಯಿತ್ತ ಅವರು ವಿದ್ಯಾರ್ಥಿಗಳಲ್ಲಿ ಪಾಲಕರು ಶಿಕ್ಷಕರು ನೈತಿಕ ಮೌಲ್ಯಗಳನ್ನು ಬೆಳೆಸುವಂತೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿರೇಶ ಗ ಪಾಟೀಲ. ಮಾತನಾಡಿ ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬಿ.ಎಲ್.ಖೋತ. ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್.ಎಸ್.ಕೊಣ್ಣುರಿ.

ನಿರ್ದೇಶಕರಾದ ಮಹೇಶ ಕಾಡಗಿ. ಗ್ರಾಮ ಪಂಚಾಯತನ ಅಧ್ಯಕ್ಷೆ ಶ್ರೀಮತಿ ಸುವರ್ಣಾ ತೋಳಿ. ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಎನ್. ಎಚ್.ಪತ್ತಾರ.ಸ್ವಾಗತಿಸಿದರು ಪಿ.ಡಿ.ಹೆಳವಿ. ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಸಿ.ವ್ಹಿ.ತಳವಾರ.ವಂದಿಸಿದರು.

ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿದ ಕವನ :-ಹೆಬ್ಬಾಳ ಗ್ರಾಮದಲ್ಲಿ ನಡೆದ ಸ್ನೇಹ ಸಮ್ಮೆಳನ ಕಾರ್ಯಕ್ರಮ ಬಹುತೇಕ ವಿವಿಧ ವಿಶೇಷತೆಗಳಿಂದ ಕೂಡಿತ್ತು ಆ ಕಾರ್ಯಕ್ರಮದಲ್ಲಿ ಎಲ್ಲರನ್ನು ಮುಗ್ದರನ್ನಾಗಿಸಿದ್ದ ಕವಿತೆಯ ಸಾಲುಗಳು ಇಲ್ಲಿವೆ. ಎಲ್ಲೌ   ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ  ಗುಡಿಯೋಳಗೆ ಇಲ್ಲೆ ಇರುವ  ಪ್ರೀತಿ ಸ್ನೇಹಗಳ   ಗುರುತಿಸದಾದೆನು ನಮ್ಮೊಳಗೆ ಎಲ್ಲಿದೆ ನಂದನ ಎಲ್ಲಿದೆ    ಬಂಧನೆಲ್ಲಾ ಇರುವುದು ನಮ್ಮೊಳಗೆ ಒಳಗಿನ ತಿಳಿಯನು   ಕಲಕದೆ ಇದ್ದರೆ ಅಮೃತದ  ಸವಿಯಿದೆ ನಾಲಿಗೆಗೆ……| ಎಂಬ  ರಾಷ್ಟ್ತ್ರಕವಿ ಜಿ.ಎಸ್. ಶಿವರುದ್ರಪ್ಪನವರ   ಕವನವನ್ನು ಶ್ರೀಮತಿ ಅಡಕೆಯವರು   ಪ್ರಸ್ತುತಪಡಿಸುವ ಮೂಲಕ ಜಿ.ಎಸ್.ಎಸ್.ರ ನೆನಪಿನ ಬುತ್ತಿ ಬಿಚ್ಚಿದರು.

loading...

LEAVE A REPLY

Please enter your comment!
Please enter your name here