ಸರ್ವರು ವ್ಯಸನ ಮುಕ್ತರಾಗಬೇಕು : ಶ್ರೀಗಳು

0
20
loading...

ಜಮಖಂಡಿ 22: ಬಂಡಿಗಣಿ ಮಠದ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿರುವ ಭಕ್ತರು ಯಾರೂ  ದುಷ್ಚಟಗಳಿಗೆ ಒಳಗಾಗಬಾರದು. ಪರಸ್ತ್ತ್ರೀಯರನ್ನು ಕಣ್ಣೆತ್ತಿ ಕೂಡ ನೋಡಬಾರದು. ಸರ್ವರು ಇದನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬರಬೇಕು. ಅಂದಾಗ ಮಾತ್ರ ನಮ್ಮ ಮಠದ ಘನತೆ-ಗೌರವ ಉಳಿಯುತ್ತದೆ ಎಂದು ಕ್ಷೇತ್ರ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕ ಮಠದ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು. ಅವರು ನಗರದ ರಾಮತೀರ್ಥದಲ್ಲಿ ಪಾರಮಾರ್ಥಿಕ ಸಪ್ತಾಹದ ದಿವ್ಯ ಸಾನಿಧ್ಯ ವಹಿಸಿ ಮೇಲಿನಂತೆ ಮಾತನಾಡಿದರು. ಅವರು ಮುಂದುವರೆದು ಮಾತನಾಡುತ್ತಾ, ರಾಮಾಯಣ-ಮಹಾಭಾರತ ಧಾರ್ಮಿಕ ಗ್ರಂಥಗಳನ್ನು ಓದಿರಿ. ಅದನ್ನು ಅನುಸರಿಸಿಕೊಂಡು ನಡೆಯಿರಿ. ದೇವರು ಪ್ರತಿಯೊಬ್ಬರ ಹೃದಯದಲ್ಲಿದ್ದಾನೆ. ಜ್ಞಾನ, ಭಕ್ತಿ, ವೈರಾಗ್ಯದಿಂದ ಮಾತ್ರ ಅವನನ್ನು ಕಾಣಲು ಸಾಧ್ಯ. ಎಲ್ಲರೂ ಸತ್ಯ, ನ್ಯಾಯಕ್ಕಾಗಿ ಬದುಕಬೇಕು. ಇದು ಸತ್ಸಂಗದಿಂದ ಮಾತ್ರ ಸಾಧ್ಯ. ನೀತಿಯನ್ನು ಯಾರೂ ಬಿಡಬಾರದು. ಎಲ್ಲರೂ ಮನಸ್ಸನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಸಂಸಾರದಲ್ಲಿ ಸುಖ, ಶಾಂತಿ ನೆಮ್ಮದಿ ದೊರೆಯಬೇಕಾದರೆ, ಭಗವಂತನ ನಾಮಸ್ಮರಣೆ ಒಂದೇ ಸಾಕು ಎಂದು ಅವರು ಭಕ್ತರಿಗೆ ಕಿವಿಮಾತು ನೀಡಿದರು.ಮುಖ್ಯ ಅತಿಥಿಗಳಾಗಿ ಸ್ಥಳೀಯ ಬಿಎಲ್ಡಿ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಡಾ|| ಎಸ್.ಎಸ್.ಸುವರ್ಣಖಂಡಿ ಆಗಮಿಸಿದ್ದರು. ಇದಕ್ಕೂ ಪೂರ್ವದಲ್ಲಿ ಶಂಕರ ಪೂಜಾರಿ, ಚಿಮ್ಮಡ ಗ್ರಾ.ಪಂ. ಅಧ್ಯಕ್ಷ ಪ್ರಭು, ಅಥಣಿಯ ಸಾರವಾಡ, ಶಿರೋಳದ ಕುಲಕರ್ಣಿ ಹಾಗೂ ಗಿರಿಮಲ್ಲಪ್ಪ ರಬಕವಿ ಮಾತನಾಡಿ, ತಮ್ಮ ಅನುಭವವಾಣಿಯನ್ನು ತಿಳಿಸಿದರು.ಪ್ರಾರಂಭದಲ್ಲಿ ಗುರುಲಿಂಗಪ್ಪ ಮಹೇಶವಾಡಗಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು

loading...

LEAVE A REPLY

Please enter your comment!
Please enter your name here