ಸಾಕ್ಷ್ಯ ಚಿತ್ರ ಪ್ರದರ್ಶನ

0
16
loading...

ಘಟಪ್ರಭಾ: 22. ಜಿ. ಪಂ. ಬೆಳಗಾವಿ ಹಾಗೂ ಶಿಂದಿಕುರಬೇಟ ಗ್ರಾ. ಪಂ. ವತಿಯಿಂದ ಆರೋಗ್ಯ ನೈರ್ಮಲ್ಯ ವಾಹಿನಿಯ ಸಾಕ್ಷ್ಯ ಚಿತ್ರ ಪ್ರದರ್ಶನದ ಮೂಲಕ ನೈರ್ಮಲ್ಯ ಕುರಿತು ಜಾಗ್ರತಾ ಕಾರ್ಯಕ್ರಮವು ಗ್ರಾಮದಲ್ಲಿ ಗುರುವಾರದಂದು ಜರುಗಿತು.

ಸರಕಾರದಿಂದ ರಾಷ್ಟ್ತ್ರೀಯ ಗ್ರಾಮೀಣ ಉದ್ಯೌಗ ಖಾತ್ರಿ ಯೋಜನೆಯಲ್ಲಿ ರೂ.4500 ಮತ್ತು ನಿರ್ಮಲ ಭಾರತ ಅಭಿಯಾನ ಯೋಜನೆಯಡಿಯಲ್ಲಿ ರೂ.4700 ಹೀಗೆ ಗ್ರಾಮ ಪಂಚಾಯತಿಯಿಂದ ಸಿಗುವ ಒಟ್ಟು 9200ರೂ ಗಳನ್ನು ಬಳಸಿ ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಂಡು ಗ್ರಾಮವನ್ನು ಯಾವ ರೀತಿ ಸ್ವಚ್ಛ ಹಾಗೂ ಆರೋಗ್ಯವಾಗಿರಿಸಬಹುದು ಎಂಬುದನ್ನು ಗ್ರಾಮಕ್ಕೆ ಆಗಮಿಸಿದ ನೈರ್ಮಲ್ಯ ವಾಹಿನಿ ವಾಹನದಲ್ಲಿ ಸಾಕ್ಷ್ಯ ಚಿತ್ರಗಳ ಮೂಲಕ ತೋರಿಸಿ ಜನರಿಗೆ ಅರಿವು ಮೂಡಿಸಲಾಯಿತು.

ಆರೋಗ್ಯ ವಾಹಿನಿಯ ಉಸ್ತುವಾರಿಯನ್ನು ಬಿ.ಎಸ್.ಡೊಳ್ಳಿನ ವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಉಮೇಶ ಮನಗೂಳಿ ಹಾಗೂ ಗ್ರಾ.ಪಂ ಸದಸ್ಯರು, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here