ಅತಿರೇಕ

0
28
loading...

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಏರುತ್ತಲಿದ್ದು ಅಮಾಯಕರು ಈ ಕೌರ್ಯಕ್ಕೆ ಒಳಗಾಗುತ್ತಿದ್ದಾರೆ. 2012 ಡಿಸೆಂಬರ್ ತಿಂಗಳಲ್ಲಿ ದೇಶದ ರಾಜಧಾನಿ ದೆಹಲಿ ವೈದ್ಯಕೀಯ ವಿದ್ಯಾರ್ಥಿನೀಯ ಮೇಲೆ ಅತ್ಯಾಚಾರ ನಡೆದಾಗ ದೇಶದ ತುಂಬೆಲ್ಲ ಮಹಿಳಾ ಸಂಘಟನೆಗಳು ಕಾಮುಕರ ವಿರುದ್ಧ ಧ್ವನಿ ಎತ್ತಿದ್ದರು. ಜನರು ತಮ್ಮ ಆಕ್ರೌಶವನ್ನು ರಸ್ತೆಗಿಳಿದು ಪ್ರತಿಭಟನೆ, ಗಲಭೆ, ಹಿಂಸಾಚಾರಗಳನ್ನು ವ್ಯಕ್ತಪಡಿಸಿದರು. ಆ ಸಮಯದಲ್ಲಿ ದೇಶದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿಯನ್ನು ಬದುಕಿಸುವದಕ್ಕೌಸ್ಕರ ಸೂಕ್ತ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿತ್ತು. ಜನರು ಪೂಜೆ ಪುನಸ್ಕಾರ ನಡೆಸಿದ್ದರು. ಇಂಥದ್ದೇ ಕೃತ್ಯ ಪಶ್ಚಿಮ ಬಂಗಾಳ ಬಿರ್ಬುಮ ಜಿಲ್ಲೆಯ ತಾಂಡದ ಒಬ್ಬ ಮಹಿಳೆ ಜೊತೆಗೆ ದೆಹಲಿಯ ಗ್ಯಾಂಗ್ರೇಪನಂತೆ ಹೇಯ ಕೃತ್ಯ ನಡೆದಿದ್ದು ದೇಶ ತಲೆ ತಗ್ಗಿಸುವಂತೆ ಆಗಿದೆ. ಬುಡಕಟ್ಟು ಜನಾಂಗದ ಮಹಿಳೆಯೊರ್ವಳ ಪರ ಪುರಷನೊಂದಿಗೆ ಪ್ರೀತಿಯ ಬಲೆ ಬಿದ್ದಿದ್ದಳು ಆತಳಿಗೆ ಬುಡಕಟ್ಟು ಜನಾಂಗದ ಮುಖಂಡರು ಆತನ ಜೊತೆಗೆ ಇರುವ ಸಂಬಂಧ ಕಡೆದು ಹಾಕುವಂತೆ ಕಾಂಪಾ ಪಂಚಾಯಿತ ಆದೇಶ ಕೂಡಾ ಮಾಡಿತ್ತು. ಆದೇಶ ಹೊರತು ಈ ಪ್ರೇಮಿಗಳು ಒಬ್ಬರು ಇನ್ನೌಬ್ಬರ ಜೊತೆಗೆ ಆಗಾಗ ಸೇರುವದು ಹೆಚ್ಚಾದಾಗ ಕಾಂಪಾ ಜನಾಂಗದ ಮುಖಂಡರು 13 ಜನರಿಗೆ ಆಕೆಯ ಜೊತೆಗೆ ಅತ್ಯಾಚಾರ ಮಾಡುವಂತೆ  ಘನಘೋರ ಶಿಕ್ಷೆ ನೀಡಿದೆ. ದೇಶದಲ್ಲಿ ಪ್ರತಿನಿತ್ಯ ಯಾರಿಗೂ ತಿಳಿಯದಂತೆ ಹಲವಾರು ಸಂಖ್ಯೆಯಲ್ಲಿ ಮಹಿಳೆಯರು ಹಣವಂತರಿಂದ ಅತ್ಯಾಚಾರಕ್ಕೆ ಬಲಿಯಾಗುತ್ತಾರೆ. ಆ ಪ್ರಕರಣಗಳು ಪೊಲೀಸ್ ಠಾಣೆಯವರೆಗೂ ತಲುಪುವದಿಲ್ಲ. ಕುಟುಂಬಸ್ಥರು ಕೂಡಾ ಸಮಾಜದಲ್ಲಿ ಬಹಿರಂಗವಾಗುವದು ಬೇಡ ಎಂದು ಮಾನಕ್ಕೆ ಹೆದರಿ ಯಾರ ಮುಂದೆಯೋ ಬಾಯಿ ಬಿಡುವದಿಲ್ಲ. ದೇಶದಲ್ಲಿ ಆಡಳಿತವು ಓರ್ವ ಮಹಿಳೆಯ ಕೈಯಲ್ಲಿದೆ. ಪರೋಕ್ಷವಾಗಿ ಅವರೇ ದೇಶವನ್ನು ಆಳುತ್ತಿದ್ದಾರೆ. ಆದರೆ ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರದ ವಿರುದ್ದು ಏಕೆ ಕಠಿಣ ಕಾನೂನು ಜಾರಿಗೆ ತರುವಂತೆ ಅಂಗೀಕಾರ ಮಾಡಬಾರದು. ಪ್ರಚಲಿತ ದಿನಗಳಲ್ಲಿ ಆಗುತ್ತಿರುವ ಮಹಿಳಯರ ಮೇಲಿನ ದೌರ್ಜನ್ಯ ತಡೆಗೆ ದೇಶದಲ್ಲಿ ಕಠಿಣ ಕಾನೂನು ಜಾರಿಗೆ ಬಂದರೆ ಮಾತ್ರ ಇಂಥ ಕೃತ್ಯಗಳು ತಡೆಯಲು ಸಾಧ್ಯ. ಪೂರ್ವ ಭಾರತದಲ್ಲಿ ಹಾಗೂ ಬುಡುಕಟ್ಟು ಜನಾಂಗದಲ್ಲಿ ಇನ್ನೂ ನ್ಯಾಯ ನೀಡುವದೇ ಪಂಚಾಯಿತಿಗಳು ಆಗಿವೆ. ಈ ಪದ್ದತಿಯನ್ನು ತೊಲಗಿಸಬೇಕು. ಸುಭದ್ರವಾದ ಕಾನೂನು ಜಾರಿಗೆ ಮಾಡಿ ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ತಗ್ಗಿಸಬೇಕಾಗಿದೆ. ವಿಶ್ವಸಂಸ್ಥೆ ಮಾಡಿರುವ ಸಮಿಕ್ಷೆಯಲ್ಲಿ ಹೆಚ್ಚಾಗಿ ಅತ್ಯಾಚಾರಕ್ಕೆ ಒಳಗಾಗುವ ದೇಶಗಳ 10 ಪಟ್ಟಿಯಲ್ಲಿ ಭಾರತವು ಒಂದು ಎಂಬ ಸಂಗತಿ ಖೇದಕರವಾಗಿದೆ.

loading...

LEAVE A REPLY

Please enter your comment!
Please enter your name here