ಅಮೆರಿಕ ರಾಯಭಾರಿ ವಾಪಾಸಾತಿಗೆ ದೊಡ್ಡಣ್ಣನ ಸಹಮತ

0
21
loading...

ದೇವಯಾನಿ ಖೋಬ್ರಾಗಡೆ ಮೇಲೆ ಇನ್ನೂ ಕೆಲವು ಆರೋಪಗಳನ್ನು ಅಮೆರಿಕ

ಸರಕಾರ ಮಾಡಿದ್ದು ಅವುಗಳಲ್ಲಿ ಆಕೆ ತನ್ನ ಮನೆಯ ಕೆಲಸದಾಕೆ(ಭಾರತೀಯ ಸಂಜಾತ)

ಯನ್ನು ಸಿಕ್ಕಾಪಟ್ಟೆ ಪೀಡಿಸಿದ್ದಲ್ಲದೇ ವಾರಕ್ಕೆ 100 ತಾಸುಗಳಿಗೂ ಹೆಚ್ಚು ಕಾಲ ಆಕೆಯಿಂದ ಕೆಲಸ

ತೆಗೆದುಕೊಂಡಿದ್ದಾಳೆ, ಕಡಿಮೆ ವೇತನ ಕೊಟ್ಟದ್ದಾಳೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಕೇಳಿದಾಗ ದೇವಯಾನಿ ನಾನು ಹೀಗೆ ಮಾಡಿಲ್ಲ ಅದೆಲ್ಲ ಸುಳ್ಳು ಎಂದು ಹೇಳಿದ್ದರೂ

ಅಮೆರಿಕ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ಇದೆಲ್ಲವೂ ದೊತ್ತಿದ್ದರೂ ಒಪ್ಪಂದದ ಅಡಿಯಲ್ಲಿ ಪೆಡೆರಲ್ ಗ್ರ್ಯಾಂಡ್ ಜ್ಯೂರಿ ಆಕೆಯನ್ನು

ಬಿಡುಗಡೆ ಮಾಡಿ ಅಮೆರಿಕ ಬಿಟ್ಟು ತೆರಳುವಂತೆ ಸೂಚಿಸಿದೆ. ನಿನ್ನೆ ಭಾರತಕ್ಕೆ

ಬಂದ ಕೂಡಲೆ ವಿಮಾನ ನಿಲ್ದಾಣದಲ್ಲೆ ತಂದೆ ಹಾಗೂ ಸೋದರಿಯನ್ನು ಭೆಟ್ಟಿಯಾದ ಅವಳು

ಸಾರ್ವಜನಿಕರು ಹೋಗಲು ಸಾಧ್ಯವಿಲ್ಲದ ಮಾರ್ಗದಿಂದ ಹೊರಗೆ ಹೋದಳು. ತನ್ನ ತಂದೆ

ಉತ್ತಮ ಖೋಬ್ರಗಡೆ ಜೊತೆ ಮಾತನಾಡುತ್ತ ನಾನು ತಿರುಗಿ ಬಂದಿದ್ದೆನೆ ಎಂದು ಸಂತಸದಿಂದ

ಹೇಳಿಕೊಂಡಳು.

ದೇವಯಾನಿ ಭಾರತಕ್ಕೆ ಬಂದಿದ್ದರಿಂದ ಉಭಯ ರಾಷ್ಟ್ತ್ರಗಳ ಮದ್ಯದ ರಾಜತಾಂತ್ರಿಕ ಬಿಕ್ಕಟ್ಟು

ಒಂದು ಹಂತದ ವರೆಗೆ ಪರಿಹಾರವಾದಂತಾಗಿ ಎರಡು ರಾಷ್ಟ್ತ್ರಗಳು ನಿಟ್ಟುಸಿರು ಬಿಟ್ಟಿವೆ. ಆದಾಗಿಯೂ

ಭಾರತದಿಂದ ಓರ್ವ ಅಮೆರಿಕ ರಾಯಭಾರಿಯನ್ನು ತಿರುಗಿ ಕಳುಹಿಸಿಕೊಡುತ್ತಿರುವುದು ತುಂಬ

ವಿಷಾದನಿಯ ಸಂಗತಿಯೆಂದು ಅಭಿಪ್ರಾಯಪಟ್ಟಿದೆ.ಇತ್ತೀಚೆಗೆ ಅಮೇರಿಕದೊಂದಿನ ಬಾಂಧವ್ಯಗಳು

ವಿವಿಧ ಗಂಭೀರ ನೀತಿನಿಯಾಮಕ ವಿಷಯಗಳಿಂದಾಗಿ ಶೀತಲತೆಯತ್ತ ಸಾಗುತ್ತಿವೆ. ಅನೇಕ

ವ್ಯವಹಾರಿಕ ಸಂಬಂಧಗಳು ಕೆಟ್ಟುಹೋಗುತ್ತಿದ್ದು ಸುಧಾರಣೆಯಾಗದ ಸ್ಥಿತಿಯಲ್ಲಿವೆ.

ದೇವಯಾನಿಯ ವಕೀಲ ಅವಳ ಆಗಮನವನ್ನು ಸಮರ್ಥಿಸಿಕೊಂಡಿದ್ದಾರೆ. ಆಕೆ ಒಂದು ವೇಳೆ

ತಪ್ಪು ಮಾಡಿರಬಹುದು, ಅದು ಅಷ್ಟೊಂದು ಮಹತ್ವದಲ್ಲ ತನ್ನ ಕುಟುಂಬದ ನಿರ್ವಹಣೆಗಾಗಿ ಇನ್ನೂ

ಕೆಲವು ವರ್ಷ ಅಮೆರಿಕದಲ್ಲಿ ಕೆಲಸ ಮಾಡಲು ಬಯಸಿದ ದೇವಯಾನಿ ಈ ಗೊಂದಲದ ನಂತರ

ತಾನೂ ತಕ್ಷಣವೇ ಭಾರತಕ್ಕೆ ಮರಳಲು ಕೇಳಿದೆ. ಆದರೆ ಅವರು ನನ್ನನ್ನು ಕಳುಹಿಸಲು ಸಿದ್ಧರಿರಲಿಲ್ಲ.

 

loading...

LEAVE A REPLY

Please enter your comment!
Please enter your name here