ಅಸಹನೀಯ

0
21
loading...

ಎಚ್.ಡಿ ಕುಮಾರಸ್ವಾಮಿ ಅವರು ಒಂದು ಪ್ರಶ್ನೆ ಕೇಳಿದಾರೆ. ರಾಜ್ಯದಲ್ಲಿ ಇನ್ನೂ ಸಿದ್ದ ರಾಮಯ್ಯ ಸರಕಾರ ಇದೆಯೇ ಎಂದು. ಅಧಿಕಾರಕ್ಕೆ ಬಂದ ತಕ್ಷಣ ಎಂದೂ ಕಂಡರಿಯದ ಬದಲಾವಣೆ ತರುವದಾಗಿ ಘೋಷಿಸಿದ ಸಿದ್ದರಾಮಯ್ಯ ಎನ್ನೇನೂ ಮಾಡಿಲ್ಲ ಎಂಬುವದು ಗೋಚರಿಸುತ್ತಿದೆ.  ರಾಜ್ಯದಲ್ಲಿ ಕಬ್ಬು ಬೆಳಗಾರರ ಸಮಸ್ಯೆ ಅಂತ್ಯಗೊಂಡಿಲ್ಲ ರಾಜಧಾನಿಯಲ್ಲಿ ಯೇ ಮಲ ಹೊರುವವರು ಇನ್ನೂ ಅದೇ ಕೆಲಸದಲ್ಲಿ ಮುಂದುವರೆದಿದ್ದಾರೆ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು  ನೇಮಿಸುವದು ಆಗುತ್ತಿಲ್ಲೆ ಸಮಪರ್ಕ ವಿದ್ಯುತ್ ಪೂರೈಕೆ ರೈತರಿಗೆ ದೊರೆಯುತ್ತಿಲ್ಲ. ಬೆಂಬಲ ಬೆಲೆ ಕೈ ನಿಲುಕುತ್ತಿಲ್ಲ. ವಸತಿ ಯೋಜನೆಗಳು ಕಾರ್ಯಗತಗೊಳ್ಳುತ್ತಿಲ್ಲ ಅನೇಕ ಸಂಗತಿಗಳಲ್ಲಿ ಸರಕಾರ ಉತ್ಸುಕತೆಯಿಂದ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಎಂಬುವದು ಅತ್ಯಂತ ಸ್ಪಷ್ಟವಾಗಿದೆ. ರಾಜ್ಯದಲ್ಲಿ ಕೋಮುಗಲಭೆಗಳಿಗೆ  ಪ್ರಚೋದಿಸುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ಸರಕಾರ ವಿಫಲವಾಗುತ್ತಿದೆ. ಪೊಲೀಸ ಬಲವನ್ನು ಸರಿಯಾದ ದಿಕ್ಕಿನಲ್ಲಿ ಬಲಸಿಕೊಳ್ಳದೇ ಇರುವದ್ದರಿಂದ  ಮಲ್ಲಿಕಾರ್ಜುನ ಬಂಡೆಯವರತಂಹ ಪೊಲೀಸ್ ಅಧಿಕಾರಿಗಳು ತಮ್ಮ ಜೀವ ತೆರಬೇಕಾಗಿ ಬಂದಿದೆ. ಕರ್ನಾಟಕ ಸರಕಾರವನ್ನೇ ಹೀನಾಯವಾಗಿ ತೆಗಳುವ ಹಾಗೂ ಸಂದೇಹಾಸ್ಪದವಾಗಿ ಸಮಾಜ ವಿರೋಧಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ ವ್ಯಕ್ತಿಯ ವಿರುದ್ದ ತಕ್ಷಣ ಕ್ರಮ ತೆಗೆದುಕೊಳ್ಳಲು ಸಿದ್ದರಾಮಯ್ಯ ಸಮರ್ಥರಾಗುತ್ತಿಲ್ಲ. ಬೆಳಗಾವಿಯ ದಕ್ಷಿಣ ಭಾಗದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಕರ್ನಾಟಕದ ಶವ ಹೊರುತ್ತೇನೆ ನಾಲ್ವರು ಕನ್ನಡಿಗರನ್ನು ಸಾಯುತ್ತೇನೆ ಎಂದೆಲ್ಲ ಅಬ್ಬರಿಸುತ್ತಿದ್ದರೂ ಈ ಉದ್ಧಟತನದ ವರ್ತನೆಯ ಶಾಸಕನ ಸದಸ್ಯತ್ವ ರದ್ದು ಮಾಡಲು ಸರ್ವರು ಆಗ್ರಹಿಸುವತ್ತಿರುವಾಗ ಅದರತ್ತ ಗಮನವನ್ನೇ ನೀಡುತ್ತಿಲ್ಲ ಆತ  ಊಸರವಳ್ಳಿಯಂತೆ ಬಣ್ಣ ಬದಲಿಸುತ್ತ ಮಾತನಾಡಿ ಮತ್ತೆ ವಿಧಾನಸಭೆ ಕಲಾಪಗಳಲ್ಲಿ ಭಾಗವಹಿಸಿ ತನ್ನನ್ನು ಯಾರು ಏನು ಮಾಡುವವರು ಎಂಬಂತೆ ತಿರುಗಾಡುವ ಸಂಭಾಜಿ ಪಾಟೀಲ ಸಿದ್ದು ಸರಕಾರಕ್ಕೆ ಧೈರ್ಯವೇ ಇಲ್ಲ. ತನ್ನ ವಿರುದ್ದ ಯಾವ ಕ್ರಮವನ್ನು ತೆಗೆದುಕೊಳ್ಳಲಾರದು ಎಂದು ಬೆಳಗಾವಿಯಲ್ಲ ಗುಟೂರುತ್ತಿದ್ದಾನೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ ಸಂಭಾಜಿ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಕನ್ನಡ ಸಂಘಟನೆಗಳು ಅಕ್ಷರಶಃ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಯ ಕಚೇರಿಯ ಮೇಲೆ ಕಲ್ಲು ತೋರಾಟ ಮಾಡಿದಾಗ ಪೋಲಿಸ್ರು ಕನ್ನಡಿಗರನ್ನೇ ಬಂಧಿಸಿದರು ಹೊರತು ಸಂಭಾಜಿಯನ್ನ ಲಿಟಚ್ಳಿ ಮಾಡಿಲ್ಲ ಎಂಬುವದು ಸರಕಾರಕ್ಕೆ ಸವಾಲು ಅಲ್ವೇ

loading...

LEAVE A REPLY

Please enter your comment!
Please enter your name here