ಆಂಜನೇಯ ಸ್ವಾಮಿಯು ಅಗ್ನಿ ಸ್ವರೂಪದಲ್ಲಿ ಪ್ರತ್ಯಕ್ಷ

0
64
loading...

ವಿಚಿತ್ರ ಆದರೂ ಸತ್ಯಹೀಗೆ ನಡೆಯಲು ಸಾಧ್ಯವೇ?

ಗಂಗಾವತಿ: ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎನ್ನುವ ಗಾದೆ ಮಾತನ್ನು ನಾವು ನೀವೆಲ್ಲರೂ ಕೇಳಿದ್ದೇವೆ. ಆದರೆ ಮೂರ್ತಿ ಚಿಕ್ಕದಾದರೂ ಪ್ರಭಾವ ಹೆಚ್ಚಿನದು ಎನ್ನುವ ಗಾದೆ ಮಾತಿನಂತೆ. ದಿನಾಂಕ 27-12-2013 ರಂದು ಶುಕ್ರವಾರ ರಾತ್ರಿಯ ಸಮಯ 8 ಗಂಟೆ 19 ನಿಮಿಷಕ್ಕೆ ವಿರುಪಾಪುರ ನಗರದ 30ನೇ ವಾರ್ಡ ಗಂಗಾವತಿಯಲ್ಲಿರುವ  ಶ್ರೀ ಪ್ರಸನ್ನ ಆಂಜನೇಯ ಸ್ವಾಮಿಯ ಚಿಕ್ಕ ದೇವಸ್ಥಾನದ ಮೂರ್ತಿ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದನ್ವಯ ಹೋಮ ಮಾಡುವ ಸಂದರ್ಭದಲ್ಲಿ ಆಂಜನೇಯ ಸ್ವಾಮಿಯು ಅಗ್ನಿ ಸ್ವರೂಪದಲ್ಲಿ ಪ್ರತ್ಯಕ್ಷನಾಗಿ ಭಕ್ತಾಧಿಗಳಿಗೆ ದರ್ಶನ ನೀಡಿರುವುದು ವಿಚಿತ್ರವಾದರೂ ಸತ್ಯ. ಈ ಭಾಗದ ಭಕ್ತನೋರ್ವನ ಕನಸಿನಲ್ಲಿ ಸಾಕ್ಷಾತ್ ಆಂಜನೇಯ ಸ್ವಾಮಿಯು ಬಂದು ಶಿನಾನು ಹೋಮದ ಅಗ್ನಿಯಲ್ಲಿ ಪ್ರತ್ಯಕ್ಷನಾಗುವೆ, ನನ್ನ ಈ ಸ್ವರೂಪದ ಭಾವಚಿತ್ರವನ್ನು ಪೂಜಿಸಿದ ಭಕ್ತಾದಿಗಳಿಗೆ ಸಕಲ ಸಂಪತ್ತು ಕೊಟ್ಟು ಕಾಪಾಡುವೆಷಿ ಎಂದು ಹೇಳಿದ್ದಾನೆ ಎಂಬ ಮಾತನ್ನು ಕೇಳಿದಾಗ ಈ 21ನೇ ಶತಮಾನದಲ್ಲಿ ತಾಂತ್ರಿಕ, ವೈಜ್ಞಾನಿಕ ಯುಗದಲ್ಲಿ ಇಂತಹ ಪವಾಡಗಳು ನಡೆಯಲು ಸಾಧ್ಯವೇ? ಎಂಬ ಅನುಮಾನ ಮೂಡುವುದು ಸಹಜವಾಗಿದೆ. ಆದರೆ ಕಣ್ಣಾರೆ ಕಂಡ  ಭಕ್ತರು ಹೇಳುವಂತೆ ಆಂಜನೇಯ ಸ್ವಾಮಿಯು ಅಗ್ನಿಯಲ್ಲಿ ಕಂಡು ಬಂದಿದ್ದು ಸತ್ಯ ಇದು ದೇವರ ಮಹಿಮೆ ಅಲ್ಲದೇ ಮತ್ತೇನು ಅಲ್ಲ ಎಂದು ಅತ್ಯಂತ ಭಕ್ತಿ ಪರವಶತೆಯಿಂದ ಭಕ್ತಾದಿಗಳು ದೇವಸ್ಥಾನದ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು ಹೇಳಿದ್ದಾರೆ. ಆಂಜನೇಯ ಸ್ವಾಮಿ ಅಗ್ನಿಯಲ್ಲಿ ಪ್ರತ್ಯಕ್ಷವಾದ  ಛಾಯಚಿತ್ರವನ್ನು ಸೆರೆಹಿಡಿಯಲಾಗಿದೆ.

loading...

LEAVE A REPLY

Please enter your comment!
Please enter your name here