ಆಧ್ಯಾತ್ಮದ ಅರಿವು ಅಗತ್ಯ : ಮೊಹರೆ

0
30

ಗೋಕಾಕ: 13. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ, ತಂದೆ ತಾಯಿಗಳೇ ಕಣ್ಣಿಗೆ ಕಾಣುವ ನಿಜವಾದ ದೇವರು ಎಂದು ಚುಟುಕು ಬ್ರಹ್ಮವೆಂದೇ ಖ್ಯಾತಿಯ ಟಿ.ಸಿ. ಮೊಹರೆ ಹೇಳಿದರು.

ಇಲ್ಲಿಯ ವಿದ್ಯಾನಗರದ ಶ್ರೀ ಶಿವಚಿದಂಬರೇಶ್ವರ ದೇವಸ್ಥಾನದಲ್ಲಿ ಗೋಕಾಕ ಸೇವಾದಳದ ವತಿಯಿಂದ ನಡೆದ ಮಾಸಿಕ ಸತ್ಸಂಗ ಕಾರ್ಯಕ್ರಮದ ಮಾತನಾಡಿ ತಂದೆ ತಾಯಿಯರ ಸೇವೆಯೇ ನಿಜವಾದ ಸೇವೆ, ಸತ್ಸಂಗದ ಮಹತ್ವ, ಸ್ನೇಹಿತರ ಪ್ರಾಮುಖ್ಯತೆ, ಆಧ್ಯಾತ್ಮದ ಅರಿವು ನಮಗೆ ಬೇಕು ಎಂದು ತಿಳಿಸಿದರು.

ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ರಾಷ್ಟ್ತ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ಲಿಹಣತೆ ಹಚ್ಚುತ್ತೇನೆ ನಾನೂಳಿ ಎಂಬ ಹಾಡನ್ನು ಹಾಡುವ ಮೂಲಕ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.

ಸತ್ಸಂಗವು ಚಿದಂಬರ ನಾಮ ಜಪ, ಅನುಭವವಾಣಿ ಹಾಗೂ ಜ್ಯೌತಿ ಬೆಳಗಿಸುವ ಮೂಲಕ ಪ್ರಾರಂಭಗೊಂಡಿತು.

ಕಾರ್ಯಕ್ರಮದಲ್ಲಿ ಸಚಿನ ಕುಲಕರ್ಣಿ, ಅನಂತ ಕುಲಕರ್ಣಿ, ಎಸ್.ಪಿ. ಕುಲಕರ್ಣಿ, ಶ್ರೀಪಾದ ಮಜಲಿ, ಆರ್.ಕೆ. ಕಟ್ಟಿ, ಅನಗಳ್, ಮಾಡಲಗಿ, ಗುರು ಪದಕಿ, ಶ್ರೀಧರ ದೇಸಾಯಿ, ಎಸ್.ಎಲ್. ಕುಲಕರ್ಣಿ, ದೀಕ್ಷಿತ ಹಾಗೂ ಹಲವಾರು ಭಕ್ತರು ಪಾಲ್ಗೊಂಡಿದ್ದರು.  ಎಸ್.ಪಿ. ಕುಲಕರ್ಣಿ ಸ್ವಾಗತಿಸಿದರು,ಅರವಿಂದ ಮಹಾಜನ ವಂದಿಸಿದರು.

 

loading...

LEAVE A REPLY

Please enter your comment!
Please enter your name here