ಕರ್ನಾಟಕ ಸಾಹಿತ್ಯ ಪಂರಿಷಂತ ವಾರ್ಷಿಕೋತ್ಸವ ನಿಮಿತ್ಯ ಕಾರ್ಯಕ್ರಮಗಳು

0
14
loading...

ರಾಮದುರ್ಗ, ಜ. 12- ಕರ್ನಾಟಕ ಸಾಹಿತ್ಯ ಪರಿಷತ್ತು ತಾಲೂಕಾ

ಘಟಕ ಹಾಗೂ ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ ಗೊಡಚಿ ಇವರ

ಸಂಯುಕ್ತ ಆಶ್ರಯದಲ್ಲಿ, ಪರಿಷತ್ತಿನ ತಾಲೂಕು ಘಟಕದ ತೃತೀಯ

ವಾರ್ಷಿಕೋತ್ಸವದ ನಿಮಿತ್ಯ ಕಿರುಕೃತಿಗಳ ಲೋಕಾರ್ಪಣೆ, ಸನ್ಮಾನ

ಸಮಾರಂಭ, ಚಿಣ್ಣರಿಗಾಗಿ ಸ್ಪರ್ಧೆ ಹೀಗೆ ವಿವಿಧ ಕಾರ್ಯಕ್ರಮಗಳು

ಜರುಗಲಿವೆ.

ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು

ಸಮಾರಂಭದ ದಿವ್ಯ ಸಾನಿಧ್ಯ ವಹಿಸಲಿದ್ದು, ಶ್ರೀ ಸ್ವಾಮಿ ಸುವೃತಾನಂದ

ಸರಸ್ವತಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಕೆ.ಜೆ.ಪಿ.

ತಾಲೂಕಾ ಘಟಕದ ಅಧ್ಯಕ್ಷ ಸಂಗಯ್ಯ ಪಂಚಕಟ್ಟಿಮಠ ಚಿಣ್ಣರ

ಸ್ಪರ್ಧೆಗಳನ್ನು ಉದ್ಘಾಟಿಸಲಿದ್ದಾರೆ.

ಹಸಿರು ಕ್ರಾಂತಿ ದಿನಪತ್ರಿಕೆಯ ಸಂಸ್ಥಾಪಕರು ಹಾಗೂ ಕರ್ನಾಟಕ

ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಜಿಲ್ಲಾಧ್ಯಕ್ಷರಾದ ಕಲ್ಯಾಣರಾವ

ಮುಚಳಂಬಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಡಾ. ಎಸ್.ಎಲ್. ಕುಲಕರ್ಣಿ ಅವರ `ಬಂಗಾರದ ಬೇಟೆಳಿ ಹಾಗೂ

ಪಿ.ಎಲ್. ದೊಡಮನಿ ಅವರ ಲಿನಿಮ್ಮೊಂದಿಗೆ ನನ್ನ ಚಿಂತನೆಗಳುಳಿ

ಕೃತಿಗಳು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿವೆ. ಸಿರಿಗನ್ನಡ

ವೇದಿಕೆಯ ರಾಜ್ಯಾಧ್ಯಕ್ಷ ಎಂ.ಎಸ್. ವೆಂಕಟರಾಮಯ್ಯ ಸಿರಿಗನ್ನಡ

ವೇದಿಕೆ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂಗ್ರಾಮಸಿಂಹ ಉ.ಸಿಂಧೆ, ರಾಜೇಂದ್ರ,

ಬಿ.ಪಾಟೀಲ, ಬಿ.ವಾಯ್. ಇಳಗೇರ ಮುಂತಾದವರು ಆಗಮಿಸಲಿದ್ದಾರೆ.

loading...

LEAVE A REPLY

Please enter your comment!
Please enter your name here