ಚಿನ್ನ ಶುದ್ದೀಕರಿಸಿ ಕೊಡುವುದಾಗಿ ಹೇಳಿ ವಂಚನೆ

0
12

ವಿವಿಧೆಡೆ ನಾಲ್ಕು ಪ್ರಕರಣಗಳು ಪತ್ತೆ

loading...

ಖಾನಾಪುರ: 20. ತಾಲೂಕಿನಾದ್ಯಂತ

ಒಂಟಿ ಹೆಂಗಸರು ವಾಸಿಸುತ್ತಿರುವ

ಮನೆಗಳಿಗೆ ತೆರಳಿ ಮನೆಯಲ್ಲಿದ್ದ ಬೆಳ್ಳಿ

ಹಾಗೂ ಬಂಗಾರದ ಆಭರಣಗಳನ್ನು

ಶುದ್ದೀಕರಿಸಿ (ತೊಳೆದು)

ಕೊಡುವುದಾಗಿ ನಂಬಿಸಿ ಮಹಿಳೆಯರು

ನೀಡಿದ ಆಭರಣಗಳ ಸಮೇತ

ಪರಾರಿಯಾಗುತ್ತಿರುವ ವಂಚಕರ ಗುಂಪು

ತಾಲೂಕಿನ ಗ್ರಾಮೀಣ ಭಾಗದ ಜನರನ್ನೇ

ಹೆಚ್ಚಾಗಿ ಮೋಸ ಮಾಡುತ್ತಿರುವ ಪ್ರಕರಣ

ಇತ್ತೀಚಿನ ದಿನಗಳಲ್ಲಿ ತಾಲೂಕಿನ 4 ಕಡೆ

ಪತ್ತೆಯಾಗಿದೆ.

ಚಿನ್ನ ಶುದ್ದೀಕರಿಸಿ ಕೊಡುವುದಾಗಿ

ಮುಗ್ಧ ಮಹಿಳೆಯರನ್ನು ನಂಬಿಸಿ

ತಾಲೂಕಿನ ನೇರಸಾ ಗ್ರಾಮದಲ್ಲಿ 8ಗ್ರಾಂ,

ಇಟಗಿಯಲ್ಲಿ 15ಗ್ರಾಂ, ಕಿರ ಹಲಶಿಯಲ್ಲಿ

5 ಗ್ರಾಂ ಹಾಗೂ ಹಲಕರ್ಣಿಯಲ್ಲಿ

7ಗ್ರಾಂ ಚಿನ್ನವನ್ನು ಲಪಟಾಯಿಸಿರುವ

ವಂಚಕರು ಹಿಂದಿ ಭಂಷಇಂಂಂಳಿ್ನು

ಮಾತನಾಡುತ್ತಿದ್ದು, 25ರಿಂದ 40

ವಂಷಂಜ ವಯಸ್ಸಿನವರಾಗಿದ್ದಾರೆ ಎಂದು

ಪೊಲೀಸರು ತಿಳಿಸಿದ್ದಾರೆ.

ಇದೇ ಮಾದರಿಯಲ್ಲಿ ಮುಂಜಾನೆ

ವಾಕಿಂಗ್ ಮಾಡುತ್ತಿರುವ ಒಂಟಿ

ಮಹಿಳೆಯರು ಹಾಗೂ ವೃದ್ಧರನ್ನು

ಬೆದರಿಸುವ ಮೂಲಕ, ಬ್ಯಾಂಕ್ನಿಂದ ಹಣ

ಡ್ರಾ ಮಾಡಿಕೊಂಡು ಬರುತ್ತಿರುವ ಜನರ

ಲಕ್ಷ್ಯವನ್ನು ಬೇರೆಡೆ ಸೆಳೆಯುವ ಮೂಲಕ,

ಜನನಿಬಿಡ ಸ್ಥಳಗಳಲ್ಲಿ ಪಿಕ್ ಪಾಕೆಟ್

ಮಾಡಿ ಹಣ, ಚೈನ್ ಉಂಗುರಗಳನ್ನು

ಕದಿಯುವ ಮೂಲಕ ಸಾರ್ವಜನಿಕರಿಗೆ

ಮೋಸ ಮಾಡುತ್ತಿರುವ ಪ್ರಕರಣಗಳು

ಖಾನಾಪುರ ಹಾಗೂ ಸುತ್ತಮುತ್ತಲಿನ

ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ

ಮೇಲಿಂದ ಮೇಲೆ ನಡೆಯುತ್ತಿವೆ.

ಇದೇ ರೀತಿ ಗುರುತು ಪರಿಚಯ

ಇಲ್ಲದಿರುವ ವ್ಯಕ್ತಿಗಳಿಗೆ ಮನೆಯನ್ನು

ಬಾಡಿಗೆ ನೀಡುವುದರಿಂದ ಅವರು

ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ

ಮಾಹಿತಿಯಿಲ್ಲದೇ ಮೋಸ ಹೋಗುತ್ತಿರುವ

ಪ್ರಸಂಗಗಳು ನಡೆಯುತ್ತಿದ್ದು,

ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ

ಸಂಶಯಾಸ್ಪದ ಹಾಗೂ ಅನುಮಾನ

ಬರುವ ರೀತಿಯಲ್ಲಿ ವರ್ತಿಸುವವರ ಬಗ್ಗೆ,

ಬಂಗಾರ ಶುದ್ದೀಕರಣ ಮಾಡುತ್ತೇವೆ

ಎಂದು ಬಂದ ವ್ಯಕ್ತಿಗಳ ಬಗ್ಗೆ

ಸಾರ್ವಜನಿಕರು ನಂಬಿಕೆ ಇಡಬಾರದು

ಮತ್ತು ಈ ರೀತಿಯ ಪ್ರಸಂಗಗಳು

ಎದುರಾದರೆ ಕೂಡಲೇ ಬೆಳಗಾವಿಯ

ಪೊಲೀಸ್ ಕಂಟ್ರೌಲ್ ರೂಂ 0831

2405231, ಖಾನಾಪುರ ಸಿಪಿಐ

9480804033, ಪಿಎಸ್ಐ 9480804086,

9480804087, 9480804129 ಮೂಲಕ

ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here