ಜೈವಿಕ ಇಂಧನ ಉತ್ಪಾದನೆ ಮತ್ತು ಸಂಸ್ಕರಣೆ ವಿಷಯದ ತರಬೇತಿ ಕಾರ್ಯಕ್ರಮ

0
22
loading...

ಧಾರವಾಡ : ನಗರದ ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿ ವತಿಯಿಂದ ನರೇಂದ್ರ ಗ್ರಾಮದ ವಿದ್ಯಾರ್ಥಿಗಳಿಗಾಗಿ ಜೈವಿಕ ಇಂಧನ ಉತ್ಪಾದನೆ ಮತ್ತು ಸಂಸ್ಕರಣೆ ವಿಷಯದ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.

ಕೃಷಿ ವಿವಿ ಸಹ ವಿಸ್ತರಣಾ ನಿರ್ದೇಶಕ ಡಾ. ಎಸ್.ಟಿ. ನಾಯಕ ಮತ್ತು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ಬಿ.ಟಿ. ನಿಂಗನೂರ ಉದ್ಘಾಟಿಸಿ, ಜೈವಿಕ ಇಂಧನದ ಪ್ರಾಮುಖ್ಯತೆಯ ಕುರಿತು ತಿಳಿಸಿದರು.

ಕೃಷಿ ಅರಣ್ಯ ವಿಭಾಗದ ಪ್ರಧಾನ ವಿಜ್ಞಾನಿ ಡಾ. ಎಸ್.ಜೆ. ಪಾಟೀಲ, ಜೈವಿಕ ಇಂಧನದ ಪರಿಚಯ ಮಾಡಿ ಅದರ ಉತ್ಪಾದನೆ, ಸಂಸ್ಕರಣೆ ಹಾಗೂ ಮಾರುಕಟ್ಟೆ ಕುರಿತು ಮಾತನಾಡುತ್ತ, ಜೈವಿಕ ಇಂಧನದ ನೀತಿ ಮತ್ತು ಜೈವಿಕ ಇಂಧನ ಮಂಡಳಿಯ ವಿವಿಧ ಯೋಜನೆಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು.

ಕೃಷಿ ಅರಣ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹೆಚ್.ವಾಯ್. ಪಾಟೀಲ, ಜೈವಿಕ ಇಂಧನ ಭವಿಷ್ಯದ ಇಂಧನವಾಗಿದೆ ಎಂದು ಹೇಳುತ್ತ, ಎಣ್ಣೆ ಬೀಜ ಹೊಂದಿರುವ ಹೊಂಗೆ, ಬೇವು, ಹಿಪ್ಪೆ, ಸೀಮಾರೂಬಾ, ಸುರಹೊನ್ನೆ, ಅಮೂರ ಗಿಡಗಳನ್ನು ಬೆಳೆಸುವ ಕ್ರಮ ಹಾಗೂ ಅದರ ಉತ್ಪನ್ನಗಳ ಕಾಲ, ಎಣ್ಣೆ ತೆಗೆಯುವ ವಿಧಾನ, ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ವಿಜ್ಞಾನಿಗಳಾದ ಡಾ. ಸುನೀತಾ ಜೊಹರಿ, ಮಾಲವಿಕಾ ಮೊಕಾಶಿ, ಎಸ್.ಎಮ್. ಉತಳೇನವರ, ಶಶಿಧರ ಶಿರಗಂಭಿ, ಮಹಾಂತೇಶ ತೋರಗಲ್ಲ ಹಾಗೂ ಮೊದಲಾದವರು ಇದ್ದರು.

loading...

LEAVE A REPLY

Please enter your comment!
Please enter your name here