ದಿಂಡಲಕಟ್ಟೆ ಕೆರೆಯನ್ನು ಅಭಿವೃದ್ದಿ ಕಾಮಗಾರಿ ಪರೀಶೀಲನೆ

0
17
loading...

ಹಾನಗಲ್ಲ: ಮಹಾತ್ಮಾ ಗಾಂಧಿ ರಾಷ್ಟ್ತ್ರೀಯ ಉದ್ಯೌಗ ಖಾತ್ರಿ ಯೋಜನೆಯ ಅಡಿಯಲ್ಲಿ ನಿರ್ವಹಿಸಲಾಗುತ್ತಿರುವ ಹಾನಗಲ್ಲ ತಾಲೂಕಿನ ಶ್ಯಾಡಗುಪ್ಪಿ ಗ್ರಾಪಂ ವ್ಯಾಪ್ತಿಯಲ್ಲಿನ 18 ಎಕರೆ ವಿಸ್ತೀರ್ಣದ ದಿಂಡಲಕಟ್ಟೆ ಕೆರೆಯನ್ನು ಅಭಿವೃದ್ದಿ ಪಡಿಸುವ ಕಾಮಗಾರಿಯನ್ನು ಗ್ರಾಪಂ ಅಧ್ಯಕ್ಷೆ ಜಯಮ್ಮ ಎನ್. ಪಾಟೀಲ ಬುಧವಾರ ಪರೀಶೀಲಿಸಿದರು.

ಈ ಸಂದರ್ಭದಲ್ಲಿ ವಿವರ ನೀಡಿದ ಅಭಿವೃದ್ದಿ ಅಧಿಕಾರಿ ವೈ.ಬಿ.ತಳವಾರ ಹಾಗೂ ಗುಮಾಸ್ತ ಚಂದ್ರು ಹರಿಜನ ಅವರು ಕಳೆದ ಡಿ.4 ರಂದು ಆರಂಭಗೊಂಡ ಈ ಕಾಮಗಾರಿಯಲ್ಲಿ ಕೆರೆ ಹೂಳೆತ್ತುವುದು, ಏರಿ ಅಗಲೀಕರಣ, ಕಾಲುವೆ ದುರಸ್ತಿ, ತೂಬು ದುರಸ್ತಿ ಹಾಗೂ ಮತ್ತಿತರ ಕಾಮಗಾರಿಯನ್ನು 25 ಲಕ್ಷ ರೂ ವೆಚ್ಚದಲ್ಲಿ ನೆರವೇರಿಸಲಾಗುತ್ತಿದೆ. ಮೊದ ಮೊದಲು ಈ ಕಾಮಗಾರಿಯಲ್ಲಿ 46, 95, 100, 148, 183 ಜನ ಕಾರ್ಮಿಕರು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಹಾಯಕ ಅಭಿಯಂತರ ಯಶೋಧರ ವಿ. ವಿವರ ನೀಡಿ ಶ್ಯಾಡಗುಪ್ಪಿ, ಹೊಂಕಣ, ಯಳವಟ್ಟಿ, ಹುಲ್ಲತ್ತಿ ಹಾಗೂ ಮತ್ತಿತರ ಕಡೆಗಳಲ್ಲಿ ನಡೆದಿರುವ ಕೆರೆಹೂಳೆತ್ತುವುದು, ನಮ್ಮ ಹೊಲ, ನಮ್ಮ ರಸ್ತೆ ಯೋಜನೆಯ ಕಾಮಗಾರಿಗಳಲ್ಲಿ ಯಾವುದೇ ಯಂತ್ರಗಳನ್ನು ಬಳಸದೇ ಮಾನವ ಸಂಪನ್ಮೂಲವನ್ನು ಬಳಸಿ ಹಾಗೂ ಸರಕಾರದ ನಿಯಮಾವಳಿಗಳಿಗೆ ಅನುಸರಿಸಿ 100 ದಿನಗಳ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಯಶೋಧಾ ಆನವಟ್ಟಿ, ರೇಣುಕಾ ಅಗಸೀಬಾಗಿಲ, ಶಿವರುದ್ರಪ್ಪ, ಓಲೇಕಾರ, ಸಿದ್ದಪ್ಪ ತುರುಬಿಗುಡ್ಡ ಶಾಂತವ್ವ ಆನವಟ್ಟಿ ಮುಂತಾದವರು ಒಂದು ಕುಟುಂಬಕ್ಕೆ 100 ದಿನಗಳ ಉದ್ಯೌಗ ನೀಡುವ ಮಿತಿಯನ್ನು ನಿಗದಿಪಡಿಸಿದ್ದು ಇದನ್ನು ರದ್ದುಗೊಳಿಸಬೇಕು. ನಾವು ಕಾಫಿ ಸೀಮೆಗೆ ದುಡಿಯಲು ಹೋಗುವುದನ್ನು ಬಿಟ್ಟು ಇಲ್ಲಿಯೇ ಕೂಲಿ ಮಾಡಲು ಸಿದ್ದರಿದ್ದೇವೆ. 100 ದಿನಗಳ ಬಳಿಕ ಕೆಲಸ ಮಾಡಿದ ಬಳಿಕ ನಾವೆಲ್ಲಿ ಹೋಗಬೇಕು ಎನ್ನುವ ಪ್ರಶ್ನೆ ಮುಂದಿಟ್ಟು ಇದರ ಬಗ್ಗೆ ಸರಕಾರ ಗಮನಹರಿಸಿ ಈ ಮಿತಿಯನ್ನು ತೆಗೆಯಬೇಕೆಂದು ಒತ್ತಾಯಿಸಿದರು.

loading...

LEAVE A REPLY

Please enter your comment!
Please enter your name here