ದೇವರ ಮೇಲಿನ ವಿಶೇಷ ಪ್ರೀತಿಯೇ ಭಕ್ತಿ

0
20
loading...

ಘಟಪ್ರಭಾ : 13. ದೇವಾನು ದೇವತೆಗಳಲ್ಲಿರುವ ವಿಶೇಷ ಪ್ರೀತಿಯೇ ಭಕ್ತಿ ಎಂದು ಹುಣಶ್ಯಾಳ ಪಿಜಿಯ ಕೈವಲ್ಯಾಶ್ರಮದ ನಿಜಗುಣ ದೇವರು ಹೇಳಿದರು.

ಅವರು ಶನಿವಾರದಂದು ಸಮೀಪದ ಸುಕ್ಷೇತ್ರ ದುಫದಾಳ ಗ್ರಾಮದ ಗುಡ್ಡದಲ್ಲಿರುವ ಶ್ರೀ ಅರಣ್ಯ ಸಿದ್ದೇಶ್ವರ ಪಂಚಗ್ರಾಮ ಮಠದಲ್ಲಿ ಜರುಗಿದ 15ನೇ ಸತ್ಸಂಗ ಸಮ್ಮೇಳನದಲ್ಲಿ ಆಶೀರ್ವಚನ ನೀಡಿ ಪರಮಾತ್ಮನು ನಿರ್ಗುಣ ನಿರಾಕಾರ ಆದರೆ ಸದ್ಗುರು ಭಗವಂತನ ಸಾಕಾರ ರೂಪ ಆದ್ದರಿಂದ ಗುರುಗಳಲ್ಲಿ ವಿಶೇಷವಾದ ಶೃದ್ದೆಯನ್ನು ಇಟ್ಟು ಮಾನವ ಉದ್ದಾರವಾಗಬೇಕೆಂದರು.

ಈ ಸಂದರ್ಭದಲ್ಲಿ ಶ್ರೀ ತಪೋರತ್ನ ಚಿದಾನಂದೇಶ್ವರ ಮಹಾರಾಜರ ಮಹಾ ಕೀರಿಟ ಪೂಜೆ ಹಾಗೂ 64ನೇ ತೋಟ್ಟಿಲೋತ್ಸವ, ತುಲಾಭಾರ ಕಾರ್ಯಕ್ರಮ ವನ್ನು ಹಾಲಪ್ಪ ಕುಳ್ಳೌಳ್ಳಿ, ರಾಮಪ್ಪ ಇಂಗಳಗಾಂವ,ರಾಮಚಂದ್ರ ಕೋಡ್ಲಿ ಹಾಗೂ ಹಾರೋಗೇರಿ-ಹಿಡಕಲ್ ಭಕ್ತರಿಂದ ಇವರಿಂದ ಜರುಗಿತು.

ಶಿಸಿದ್ದರ ಜ್ಯೌತಿಷಿ ಪ್ರಶಸ್ತಿ ಪ್ರದಾನ : ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಅಮಸಿದ್ದ ಒಡೆಯರ,ಎಲ್.ಎಲ್.ಮಲ್ಲಾಪೂರ, ನಿಂಗಪ್ಪ ಬಿಳಗಿ,ಪುಂಡಲೀಕ ದೊಡಮನಿ ಇವರಿಗೆ ಶ್ರೀಗಳಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಂಬಾರಿ ಮೇಲೆ ಶ್ರೀ ಮದಗೊಂಡೇಶ್ವರ ಮಹಾರಾಜರ ಮೂರ್ತಿ ಮೆರವಣಿಗೆ, ಕುಂಭೋತ್ಸವ, ವಿವಿಧ ಶರ್ತುಗಳನ್ನು ಏರ್ಪಡಿಸಲಾಗಿತ್ತು. ಸತ್ಸಂಗ ಸಮ್ಮೇಳನದಲ್ಲಿ ಕೌಲಗುಡ್ಡದ ಸಿದ್ದಯೋಗಿ ಅಮರೇಶ್ವರ ಮಹಾರಾಜರು, ಮಹಾಂತೇಶ ಶಾಸ್ತ್ತ್ರಿಗಳು, ವಿದ್ಯಾನಂದ ಸ್ವಾಮಿಜಿ, ಶಿವಾನಂದ ಸ್ವಾಮಿಜಿ, ಖಾನಪ್ಪ ಒಡೆಯರ, ಬಸವಾನಂದ ಶರಣರು, ಮಲ್ಲಯ್ಯ ಸ್ವಾಮಿಜಿ, ಬಸವರಾಜ ಶರಣರು, ಶಾಂಭವಿ ಮಾತಾಜಿ, ರಾಜು ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು.

ಕಾರ್ಯಕ್ರಮವನ್ನು ಬಿ.ಎಲ್.ಘಂಟಿ ಸ್ವಾಗತಿಸಿದರು. ಎ.ಎ.ಹಳ್ಳೂರ ನಿರೂಪಿಸಿದರು. ಟಿ.ಎಸ್.ವಂಟಗೂಡಿ ವಂದಿಸಿದರು

loading...

LEAVE A REPLY

Please enter your comment!
Please enter your name here