ದೋಣಿ ದುರಂತ : 32 ಪ್ರಯಾಣಿಕರ ಜಲಸಮಾಧಿ

0
27
loading...

ಪೋರ್ಟ್ಬ್ಲೇರ್( ಅಂಡಮಾನ್

ನಿಕೋಬಾರ್), ಜ.26- ಪ್ರಯಾಣಿಕರನ್ನು

ಕರೆದೊಯ್ಯತ್ತಿದ್ದ ದೋಣಿ ಇದ್ದಕ್ಕೀದ್ದಂತೆ ಮಗಚಿ ಬಿದ್ದ

ಪರಿಣಾಮ 32 ಮಂದಿ ಪ್ರಯಾಣಿಕರು ಮೃತಪಟ್ಟು

3 ಮಂದಿ ಕಣ್ಮರೆಯಾಗಿರುವ ಘಟನೆ ಅಮಡಮಾನ್

ನಿಕೋಬಾರ್ ರಾಜಧಾನಿ ಪೋರ್ಟ್ಬ್ಲೇರ್ನಲ್ಲಿ

ಭಾನುವಾರ ಸಂಜೆ ನಡೆದಿದೆ.

ಘಟನೆಯಲ್ಲಿ 32 ಮಂದಿ ಪ್ರಯಾಣಿಕರು

ಸಾವನ್ನಪ್ಪಿದ್ದಾರೆ. ಇದರಲ್ಲಿ 3 ಮಂದಿ ನಾಪತ್ತೆಯಾಗಿದ್ದು

ಉಳಿದ 11 ಮಂದಿ ಪವಾಡ ಸದೃಶ ರೀತಿಯಲ್ಲಿ

ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತಪಟ್ಟ

ನತದೃಷ್ಟರು ತಮಿಳುನಾಡಿನ ಕಾಂಚೀಪುರಂ, ಮತ್ತು

ಮುಂಬೈಗೆ ಸೇರಿದವರೆಂದು ತಿಳಿದು ಬಂದಿದೆ.

ಭಾನುವಾರ ಮಧ್ಯಾಹ್ನ ಕಾಂಚೀಪುರಂನಿಂದ

ಹೊರಟ ಮರೀನಾ ದೋಣಿಯೂ ರೋಸ್ ಲಕ್ಷದ್ವೀಪ

ಮತ್ತು ಉತ್ತರ ಕೊಲ್ಲಿಯ ಬಳಿ ಸಂಚರಿಸುತ್ತಿದ್ದ ವೇಳೆ

ಇದ್ದಕ್ಕೀದ್ದಂತೆ ಮಗಚಿ ಬಿದ್ದತು. ದೋಣಿಯಲ್ಲಿ ಒಟ್ಟು

46 ಮಂದಿ ಪ್ರಯಾಣಿಸುತ್ತಿದ್ದಾರೆಂದು ಅಂಡಮಾನ್

ನಿಕೋಬಾರ್ನ ಉಪರಾಜ್ಯಪಾಲ ಎ.ಕೆ.ಸಿಂಗ್

ತಿಳಿಸಿದ್ದಾರೆ.

4 ಗಂಟೆಗೆ ಪ್ರಯಾಣಿಕರನ್ನು ಕರೆದೊಯ್ಯತ್ತಿದ್ದ

ದೋಣಿ ಮಗಚಿ ಬಿದ್ದತು. ಇದರ ಪರಿಣಾಮ 32

ಮಂದಿ ಜಲಸಮಾಧಿಯಾದರೆ 3 ಮಂದಿ ಪ್ರಯಾಣಿಕರು

ಕಣ್ಮರೆಯಾಗಿದ್ದಾರೆ. ಪ್ರಾಣಪಾಯದಿಂದ ಪಾರಾಗಿರುವ

11 ಮಂದಿಯನ್ನು ಪೋರ್ಟ್ಬ್ಲೇರ್ನಲ್ಲಿರುವ ಜಿ. ಬಿ.

ಪಂತ್ ಅಸ್ಪತ್ರೆಗೆ ದಾಖಲಿಸಲಾಗಿದೆ.

ಹೆಲಿಕಾಪ್ಟರ್ ಕಾರ್ಯಾಚಾರಣೆ :

ಮರೀನಾ ದೋಣಿ ಮಗಚಿ ಬೀಳುತ್ತಿದ್ದಂತೆ

ಪರಿಹಾರ ಕಾರ್ಯಾಕ್ಕೆ ಭಾರತೀಯ ವಾಯೂಸೇನೆಗೆ

ಸೇರಿದ ಹೆಲಿಕಾಪ್ಟರ್ ಮೂಲಕ ದೇಹಗಳನ್ನು

ಸಾಗಿಸಲಾಯಿತು. ನಡು ಸಮುದ್ರದಲ್ಲಿ ದೋಣಿ

ಬಿದ್ದ ಕಾರಣ ಬೇರೆ ಯಾವುದೇ ಪರ್ಯಾಯ ಮಾರ್ಗ

ಉಳಿದಿರಲಿಲ್ಲ. ಕಾಣೆಯಾದವರ ಬಗ್ಗೆ ಶೋಧ

ಕಾಯ್ ಮುಂದುವರೆದಿದೆ. ಮೃತರ ಕುಟುಂಬಗಳಿಗೆ

ತಲಾ ಒಂದು ಲಕ್ಷ ಪರಿಹಾರ ಘೋಷಿಸಲಾಗಿದೆ.

loading...

LEAVE A REPLY

Please enter your comment!
Please enter your name here