ನೂತನ ವೆಬ್ಸೈಟ್ ಉದ್ಘಾಟನೆ

0
57
loading...

ಅಥಣಿ, ಜ 1: ನಗರದಲ್ಲಿ ನಡೆದ ರೋಟರಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಸಂಸ್ಥೆಯ ನೂತನ ವೆಬ್ಸೈಟ್ ಉದ್ಘಾಟಿಸಲಾಯಿತು.

ಗೋವಾ ರಾಜ್ಯದ ರೋಟರಿ ಸಂಸ್ಥೆಯ ಪ್ರಮುಖರಾದ ಜಾರ್ಸನ್ ಫರ್ನಾಂಡಿಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.  ವೆಬ್ಸೈಟ್ ಉದ್ಘಾಟಿಸಿ ಮಾತನಾಡಿದ ಅವರು, ಶಿರೋಟರಿ ಸಂಸ್ಥೆ ಜಗತ್ತಿನಲ್ಲಿಯೇ ಅತಿ ದೊಡ್ಡ ಸೇವಾ ಸಂಸ್ಥೆಯಾಗಿದ್ದು, ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಿಗಿಸಿಕೊಂಡಿದೆ. ರೋಟರಿ ಸಂಸ್ಥೆಯ ಎಲ್ಲಾ ಘಟಕಗಳು ತನ್ನ ವ್ಯಾಪ್ತಿಯ ಕ್ಷೇತ್ರಗಳಲ್ಲಿಯ ಬಡ, ಅಂಗವಿಕಲರ ಬಾಳಿಗೆ ಬೆಳಕಾಗಿ, ಅವರು ಸ್ವಾವಲಂಭಿ ಜೀವನ ನಡೆಸಲು ಬೇಕಾದ ಎಲ್ಲ ಅನುಕೂಲಗಳನ್ನು ಮಾಡುತ್ತಿವೆ. ಆ ನಿಟ್ಟಿನಲ್ಲಿ ಅಥಣಿ ರೋಟರಿ ಘಟಕ ಜಿಲ್ಲೆಯಲ್ಲಿಯೇ ಮುಂದಿದ್ದು, ಈಗ ತನ್ನ ಸ್ವಂತ ವೆಬ್ಸೈಟ್ ಹೊಂದುವುದರ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಯಿತುಷಿ ಎಂದು ಹೇಳಿದರು.

ಡಡಡಡ ಎಂಬ ನೂತನ ವೆಬ್ಸೈಟ್ ನಿರ್ಮಿಸಿಕೊಟ್ಟ ಅಥಣಿಯ ಸಾಪ್ಟ್ವೇರ್ ಇಂಜೀನೀಯರ್ ಬಸವರಾಜ ಕುಳಲಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ರೋಟರಿ ಅಥಣಿಯ ಸಂಸ್ಥಾಪಕ ಅಧ್ಯಕ್ಷರಾದ ಗಜಾನನ ಮಂಗಸೂಳಿ, ರೋಟರಿ ಯೋಜನಾ ಪ್ರಮುಖರಾದ ಡಾ. ಪಿ ಪಿ ಮಿರಜ, ಅಧ್ಯಕ್ಷರಾದ ಚಂದ್ರಶೇಖರ ಹತ್ತಿ, ಕಾರ್ಯದರ್ಶಿ ಪ್ರವೀಣ ಭಾಟೆ, ಅರುಣ ಯಲಗುದ್ರಿ, ಅಮೃತ ಮಹಾಜನ್ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here