ನೂತನ ಶಿವಮಂದಿರ ಲೋಕಾರ್ಪಣೆ

0
33

 ಖಾನಾಪುರ (ಗ್ರಾಮೀಣ):13 ತಾಲೂಕಿನ ತೀರ್ಥಕ್ಷೇತ್ರ

ಹಬ್ಬನಹಟ್ಟಿ ಗ್ರಾಮದ ಮಲಪ್ರಭಾ ನದಿತಟದಲ್ಲಿರುವ

ಸ್ವಯಂಭೂ ಹಣುಮಾನ ದೇವಾಲಯದ ಆವರಣದಲ್ಲಿ

ನೂತನವಾಗಿ ನಿರ್ಮಿಸಿರುವ ಶಿವಾಲಯದ

ಲೋಕಾರ್ಪಣೆಯನ್ನು ಮಕರ ಸಂಕ್ರಾಂತಿಯ ಪ್ರಯುಕ್ತ

ಮಂಗಳವಾರ ಜ.14ರಂದು ಮುಂಜಾನೆ 11 ಗಂಟೆಗೆ

ಹಮ್ಮಿಕೊಳ್ಳಲಾಗಿದೆ. ಹಣುಮಾನ ದೇವಾಲಯದ ಬಳಿಯಿರುವ

ಮಲಪ್ರಭಾ ನದಿಗೆ ಘಾಟ ನಿರ್ಮಾಣ ಹಾಗೂ ಅಡುಗೆ ಮನೆ

ನಿರ್ಮಾಣ ಕಾಮಗಾರಿಗಳಿಗೂ ಈ ಸಂದರ್ಭದಲ್ಲಿ ಚಾಲನೆ

ನೀಡಲಾಗುವುದು. ಶಾಸಕ ಅರವಿಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೆಳಗಾವಿ ಗ್ರಾಮೀಣ ಶಾಸಕ ಸಂಜಯ

ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here