ನೆನೆಗುದಿಗೆ ಬಿದ್ದಿರುವ ಬೆಳಗಾವಿ ನಗರ ಅಭಿವೃದ್ದಿ

0
22

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಅಭಿವೃದ್ದಿಗೆ ಅಧಿಕಾರಿಗಳ ಹಿಂದೇಟು

loading...

ಚೇತನ ಹೊಳೆಪ್ಪಗೋಳ

ಬೆಳಗಾವಿ,ಜ.4: ಎರಡನೇ ರಾಜಧಾನಿ ಪಟ್ಟ ಪಡೆದುಕೊಂಡಿರುವ ಬೆಳಗಾವಿ

ನಗರದಲ್ಲಿ ಸುಮಾರು 500ಕೋಟಿ ರೂ.ವೆಚ್ಚದಲ್ಲಿ ಸುವರ್ಣ ವಿಧಾನಸೌಧ

ನಿರ್ಮಾಣಗೊಂಡು ಎರಡು ಅಧಿವೇಶನಗಳೂ ನಡೆಸಿದರೂ, ನಗರದ ಸಮಸ್ಯೆಗಳು

ಮಾತ್ರ ನಿಂತ ನೀರಾಗಿವೆ.

ನಗರದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ವಿರಾಮ ಬಿದ್ದಂತಾಗಿದೆ. ಅಧಿವೇಶನದ

ಸಮಯದಲ್ಲಿ ಹದಗೆಟ್ಟ ರಸ್ತೆಗಳಿಗೆ ಸ್ವಲ್ಪ ಟಾರ್ ತುಂಬುವದನ್ನು ಬಿಟ್ಟರೇ ಯಾವುದೇ

ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. ನಗರ ಅಭಿವೃದ್ದಿಯ ಅನೇಕ ಯೋಜನೆಗಳು

ಕೇವಲ ಯೋಜನೆಗಳಾಗಿಯೇ ಉಳಿದಿವೆ. ನಗರದಲ್ಲಿ ನೆನೆಗುದಿಗೆ ಬಿದ್ದಿರುವ ರಿಂಗ್

ರಸ್ತೆ ನಿರ್ಮಾಣ, ಪೊಲೀಸ್ ಕಮಿಷ್ನ್ರೇಟ್ ಕಚೇರಿ ಆರಂಭ, ಒವರ್ ಬ್ರಿಜ್ಗಳ

ನಿರ್ಮಾಣದ ಬಗ್ಗೆ ಸರಕಾರ ಕ್ಯಾರೇ ಅನ್ನುತ್ತಿಲ್ಲ. ಕೇವಲ ಅಧಿವೇಶನ ಮಾಡಿ

ಸಾರ್ವಜನಿಕರ ಹಣ ಪೋಲು ಮಾಡುವದನ್ನು ಬಿಟ್ಟು ನೆನೆಗುದಿಗೆ ಬಿದ್ದಿರುವ

ಈ ಯೋಜನೆಗಳ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಬೇಕೆನ್ನುವದು

ನಗರವಾಸಿಗಳ ಆಗ್ರಹವಾಗಿದೆ.

ರಿಂಗ್ ರೋಡ್ ನಿರ್ಮಾಣ: ರಿಂಗ್ ರೋಡ್ ನಿರ್ಮಾಣ ನಗರ ಜನತೆಯ

ಬಹುದಿನದ ಕನಸಾಗಿದೆ. ರಿಂಗ್ ರಸ್ತೆ ನಿರ್ಮಾಣದ ಬಗ್ಗೆ ಜನಪ್ರತಿನಿಧಿಗಳ ಬಳಿ

ಇಚ್ಛಾ ಶಕ್ತಿಯ ಕೊರತೆ ಪ್ರಮುಖ ಕಾರಣವಾಗಿದೆ. ಇನ್ನೇನೋ ಕಾಮಗಾರಿ

ಆರಂಭವಾಯಿತು ಎನ್ನುವ ರೀತಿಯಲ್ಲಿ ಸಭೆ ಮಾಡುವ ನಮ್ಮ ಜನಪ್ರತಿನಿಧಿಗಳು

ಮತ್ತು ಅಧಿಕಾರಿಗಳು ಸಭೆಯ ನಂತರ ಎಲ್ಲವನ್ನು ಮರೆತು ಬಿಡುತ್ತಾರೆ. ಕಳೆದ

2 ವರ್ಷಗಳಿಂದ ಅನೇಕ ಸಭೆಗಳನ್ನು ನಡೆಸಲಾಗಿದಿಯೇ ಹೊರತು ಈ

ಕಾಮಗಾರಿಯನ್ನು ಅನುಷ್ಠಾನ ಮಾಡುವ ಮಟ್ಟಕ್ಕೆ ಯಾವುದೇ ಜಿಲ್ಲೆಯ ಜನ

ಪ್ರತಿನಿಧಿಗಳಾಗಲಿ ಮತ್ತು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು

ಜನ ಆರೋಪ ಮಾಡುತ್ತಿದ್ದಾರೆ.

ನಗರ ಬೆಳೆದಂತೆ ಟ್ರಾಫಿಕ್ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ರಿಂಗ್ ರಸ್ತೆ ನಿರ್ಮಾಣ ಅತಿ ಅವಶ್ಯವಾಗಿದೆ.

ನಗರದಲ್ಲಿ ಭಾರಿ ವಾಹನಗಳ ಸಂಚಾರದಿಂದ ನಗರದ ರಸ್ತೆಗಳಲ್ಲಿ ಟ್ರಾಫಿಕ್

ಕಿರಿಕಿರಿಯನ್ನು ಸಾರ್ವಜನಿಕರು ಅನುಭವಿಸುತ್ತಿದ್ದಾರೆ. ರಿಂಗ್ ರಸ್ತೆ ನಿರ್ಮಾಣದಿಂದ

ನಗರದಲ್ಲಿ ಟ್ರಾಪಿಕ್ ಸಮಸ್ಯೆಗೆ ಕಡಿವಾಣ ಬಿಳುವದರಲ್ಲಿ ಸಂದೇಹವಿಲ್ಲ. ಶೀಘ್ರದಲ್ಲಿ

ಜನಪ್ರತಿನಿಧಿಗಳು ನಗರದ ಅಭಿವೃದ್ದಿಗೆ ತಮ್ಮ ಇಚ್ಛಾ ಶಕ್ತಿಯನ್ನು ಪ್ರದರ್ಶಿಸಿ ರಿಂಗ್

ರಸ್ತೆ ನಿರ್ಮಾಣ ಮಾಡಲಿ ಎಂಬುವದು ನಗರದ ಜನತೆಯ ಆಶಯ.

ಒವರ್ ಬ್ರಿಜ್ ನಿರ್ಮಾಣ : ನಗರದಲ್ಲಿ ರೇಲ್ವ ಒವರ್ ಬ್ರಿಜ್ಗಳ ನಿರ್ಮಾಣದಲ್ಲಿ

ಪಾಲಿಕೆ ಅನುಸರಿಸುತ್ತಿರುಳ ವಿಳಂಬ ನೀತಿಯಿಂದ ಜನತೆ ಮಾತ್ರ ಸಮಸ್ಯೆಯನ್ನು

ಅನುಭವಿಸುತ್ತದೆ. ನಗರದಲ್ಲಿ ದಿನನಿತ್ಯ ಸಂಚಿರಿಸುವ 10 ರಿಂದ 15 ರೇಲ್ವೆಗಳಿಂದಾಗಿ

ಒವರ್ ಬ್ರಿಜ್ ನಿರ್ಮಾಣವಾಗದೇ ಇರುವದರಿಂದ ಜನರು ದಿನನಿತ್ಯ ಪಡಬಾರದ

ಕಷ್ಟವನ್ನು ಪಡುತ್ತಿದ್ದಾರೆ. ಒಂದು ರೇಲ್ವೆ ಸಾಗಬೇಕೆಂದರೆ 10 ರಿಂದ 20 ನಿಮಿಷ್

ಗೇಟ್ಗಳ ಬಳಿ ಕಾಯಬೇಕು. ಗೇಟ್ ತೆಗೆದ ನಂತರ ಆಗುವ ಟ್ರಾಫಿಕ್ನಿಂದ

ಪಾರಾಗಲು 20 ನಿಮಿಷ್ಗಳ ಕಾಲ ಪರದಾಡಬೇಕು.

ರೇಲ್ವೆ ಒವರ್ ಬ್ರಿಜ್ ನಿರ್ಮಾಣಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ

ಎಂದು ಹೇಳುವದರಲ್ಲಿಯೇ ಪಾಲಿಕೆ ಅಧಿಕಾರಿಗಳು ಕಾಲ ಕಳೆಯುತ್ತಿದ್ದಾರೆ.

ಇನ್ನೂ ಜನ ಪ್ರತಿನಿಧಿಗಳು ಇದರ ಗೋಜಿಗೆ ಹೋಗದೇ ಯಾವಾಗ ಕಾಮಗಾರಿ

ಪ್ರಾರಂಭವಾದಾಗ ಅಡಿಗಲ್ಲು ಸಮಾರಂಭಕ್ಕೆ ಹೋದರೆ ಸುಮ್ಮನಾಯಿತು ಎಂದು

ತೆಪ್ಪಗೆ ಕುಳಿತುಕೊಂಡಿದ್ದಾರೆ.

ತ್ಯಾಜ್ಯ ಸಂಸ್ಕರಣ ಘಟಕ: ನಗರದಲ್ಲಿ ಎಲ್ಲ ಯೋಜನೆಗಳಂತೆ ಬಹಳ

ದಿನಗಳಿಂದ ಬಾಕಿ ಉಳಿದಿರುವ ಯೋಜನೆಗಳಲ್ಲಿ ತ್ಯಾಜ್ಯ ಸಂಸ್ಕರಣ ಘಟಕವು

ಒಂದಾಗಿದೆ. ಈ ಯೋಜನೆಯ ಅನುಷ್ಠಾನದಿಂದ ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ

ಬಹುತೇಕ ಅನಕೂಲವಾಗಿದೆ. ನಗರದಲ್ಲಿ ದಿನಕ್ಕೆ 140 ರಿಂದ 150 ಟನ್ಗಳಷ್ಟು

ತ್ಯಾಜ್ಯ ಸಂಸ್ಕರಣವಾಗುತ್ತಿದೆ. ಇದರಲ್ಲಿ ಸ್ವಲ್ಪ ಮಟ್ಟದ ತ್ಯಾಜ್ಯವನ್ನು ಗೊಬ್ಬರವನ್ನಾಗಿ

ಮಾರ್ಪಡಿಸಲಾಗುತ್ತಿದೆ. ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣವಾದರೆ

ನಗರದಲ್ಲಿ ಸಂಗ್ರವಾಗುವ ತ್ಯಾಜ್ಯದಿಂದ ವಿದ್ಯುತ್ ಮತ್ತು ಹೆಚ್ಚಿನ ಗೊಬ್ಬರವನ್ನು

ತಯಾರಿಸಬಹುದಾಗಿದೆ. ಈ ಯೋಜನೆಯಿಂದ ನಗರವನ್ನು ತ್ಯಾಜ್ಯಮುಕ್ತವನ್ನಾಗಿ

ಮಾಡಬಹುದಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ತೋರಿ

ಈ ಯೋಜನೆ ಅನುಷ್ಠಾನದ ಬಗ್ಗೆ ಗಮನಹರಿಸಲಿ.

‘foC� ie8B1 x2 ne-height:120%;color:black’>, ಹಿರಿಯ ನ್ಯಾಯವಾದಿ

 

ಖಾಡೆ, ಬಿ.ಎಲ್.ದೇಸಾಯಿ, ವಸ್ತ್ತ್ರದ ಶಿಕ್ಷಕರು,

ಅಣೆಪ್ಪನವರ, ದಿನೇಶಭಯ್ಯಾ ಶಶಿಕಾಂತ ಹಿರೇಮಠ,

ಶಿವು ಅಣೆಪ್ಪನವರ, ಗೊಬ್ಬಣ್ಣವರ, ಶ್ರೀಕಾಂತ ಹುಬ್ಬಳ್ಳಿ,

ಮುಂತಾದ ಗಣ್ಯರು ಮಹಿಳೆಯರು ಮತ್ತು ಚಿಕ್ಕಮಕ್ಕಳು

ಉಪಸ್ಥಿತರಿದ್ದರು.ಪೂಜೆ ಮಂಗಳಾರತಿ ನಂತರ

ಎಲ್ಲರಿಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಎಂದು ಶಿವು ಅಣೆಪ್ಪನವರ ಪತ್ರಿಕಾ ಪ್ರಕಟಣೆಗೆ

ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here