ಪತ್ರಿಕೆಗಳ ವಿರುದ್ಧ ಅಖಿಲೇಶ ಯಾದವ ಸಿಡಿಮಿಡಿ

0
23
loading...

ಲಖನೌ,ಜ,10-ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಸಯಪೈಯ್ ಉತ್ಸವ ಮುಗಿಯುತ್ತಿದ್ದಂತೆ ಪತ್ರಿಕೆಗಳಲ್ಲಿ ಉತ್ಸವದ ಬಗ್ಗೆ ವರದಿಗಳನ್ನು ಖಂಡಿಸಿದ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ ಯಾದವ ಅಪಾರ ಹಣ ವ್ಯಯವಾಗಿದೆ ಎಂದು ಟೀಕಿಸಿ ಲೇಖನಗಳನ್ನು ಬರೆದ ಪತ್ರಿಕೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಸಿದ್ದಾರೆ.  ಶುಕ್ರವಾರ ಬಾಲಿವುಡ್ ಏರ್ಪಡಿಸಿದ್ದ ಸಯಪೈಯ್ ಉತ್ಸವ ಬಡವರ ಹಾಗೂ ಬಡತನದ ರೇಖೆಗಿಂತ ಕೆಳಗಿರುವವರ ಸಲುವಾಗಿ ಏರ್ಪಡಿಸಲಾಗಿತ್ತು. ಅದು ದುಂದು ವೆಚ್ಚ ಅಲ್ಲವೆಂದು ಸಮರ್ಥಿಸಿಕೊಂಡರು.

ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು ಉತ್ಸವಕ್ಕಾಗಿ 1 ಕೋಟಿ ರೂಪಾಯಿ ಮೊತ್ತವನ್ನು ರಾಜ್ಯಸರಕಾರ ಮಂಜೂರು ಮಾಡಿತ್ತು. ಹಾಗೂ ಉತ್ಸವಕ್ಕಾಗಿ ರಾಜ್ಯಾದ್ಯಂತ ದೇಣಿಗೆಗಳನ್ನು ಸಂಗ್ರಹಿಸಲಾಗಿತ್ತು ಎಂದು ಹೇಳಿದ ಅವರು ಬೇರೆ ಯಾವುದೇ ಸರಕಾರ ಬಡವರಿಗಾಗಿ ಇಂಥ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದಿಯೇ ಎಂದು ಪ್ರಶ್ನಿಸಿದರು.  ಹಿಂದಿ ಪತ್ರಿಕೆಯೊಂದನ್ನು ಉಲ್ಲೇಖಿಸಿದ ಅವರು ಸಯಪೈಯ್ ಉತ್ಸವಕ್ಕಾಗಿ 300 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ ಎಂದು ಬರೆದುಕೊಂಡಿದೆ. ಆದರೆ ವಾಸ್ತವವಾಗಿ ಖರ್ಚು 10 ಕೋಟಿ ರೂ.ಗಳಷ್ಟು ಅಥವಾ ಅದಕ್ಕಿಂತ ಕಡಿಮೆ ಹಣವನ್ನು ವ್ಯಯಿಸಲಾಗಿದೆ ಎಂದು ಸಮರ್ಥಿಸಿಕೊಂಡರು.ಪತ್ರಿಕೆಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಅಖಿಲೇಶ್ ಯಾದವ ಸುಳ್ಳು ವರದಿಗಳನ್ನು ಬರೆಯುವ ಧೈರ್ಯ ಮಾಡಿದರೆ ಅಂಥವುಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.

ರಾಜ್ಯದಲ್ಲಿ ಚಲನಚಿತ್ರ ರಂಗದ ಚಟುವಟಿಕೆಗಳನ್ನು ಹೆಚ್ಚುವರಿ ಮಾಡಲು ಅನುಕೂಲವಾಗುವಂತೆ ಈ ಬಾಲಿವುಡ್ ನಟ ನಟಿಯರ ನೆರವಿನೊಂದಿಗೆ ಈ ಉತ್ಸವನ್ನು ಏರ್ಪಡಿಸಲಾಗಿತ್ತು ಎಂದು ಹೇಳಿದರು. ಸಲ್ಮಾನಖಾನ್ ಆಸ್ಪತ್ರೆಯಲ್ಲಿಯ ಮಕ್ಕಳನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದ್ದನ್ನು ಮಾತ್ರ ಯಾವ ಪತ್ರಿಕೆಯು ವರದಿ ಮಾಡಿಲ್ಲವೆಂದು ಕಿಡಿಕಾರಿದರು.

loading...

LEAVE A REPLY

Please enter your comment!
Please enter your name here