ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು ನವ ಮಾಧ್ಯಮ ಬಳಕೆಯಾಗಬೇಕು

0
69
loading...

ಧಾರವಾಡ : ಉತ್ತಮ ಆಡಳಿತ, ಜನರ ಸಹಭಾಗಿತ್ವ, ಮತದಾನ ಮೂಲಕ ರಾಜಕೀಯ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು ನವ ಮಾಧ್ಯಮ ಬಳಕೆಯಾಗಬೇಕು, ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು ಬದಲಾಗಿ ಜನರನ್ನು ವಂಚಿಸುವ ಮತ್ತೊಂದು ಸಾಧನವಾಗಬಾರದು ಎಂದು ತಲಿಂ ಸಂಶೋಧನಾ ಪ್ರತಿಷ್ಠಾನದ ಮಹಾನಿರ್ದೇಶಕ ಡಾ. ವಿನೋದ ಅಗರವಾಲ್ ಅಭಿಪ್ರಾಯಪಟ್ಟರು.

ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗವು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಯೋಗದಲ್ಲಿ ನವ ಮಾಧ್ಯಮ ಮತ್ತು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತ ಎರಡು ದಿನಗಳ ರಾಷ್ಟ್ತ್ರೀಯ ವಿಚಾರ ಸಂಕಿರಣ ಹಾಗೂ ರಾಜ್ಯಮಟ್ಟದ ಮಾಧ್ಯಮ ರೇನ್ಬೊ ಉತ್ಸವದಲ್ಲಿ ಶನಿವಾರದಂದು ಆಶಯ ಭಾಷಣ ಮಾಡಿದರು.

ಹೊಸ ಮಾಧ್ಯಮದ ಸುನಾಮಿ ಶಕ್ತಿ, ಭಾರತದಲ್ಲಿ ಅದರ ನಿರಂತರ ಮಾತುಕತೆ, ರಾಜಕೀಯ ವ್ಯವಸ್ಥೆ, ಸಾಂಸ್ಕ್ಕತಿಕ ಮೌಲ್ಯಗಳ ಮೇಲೆ ಪರಿಣಾಮ ಬೀರುತ್ತಿದ್ದು, ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನವ ಮಾಧ್ಯಮದ ಪರಿಣಾಮವನ್ನು   ವಿಶ್ಲೇಷಣೆಯ ಮೂಲಕ ತಿಳಿದುಕೊಳ್ಳಬೇಕಾಗಿದೆ.

ಭಾರತೀಯ ನಾಗರಿಕತೆಯ ಹಿನ್ನೊಟದಲ್ಲಿ ಹಲವಾರು ಧಾರ್ಮಿಕ ಮತ್ತು ರಾಜಕೀಯ ಬಾಹ್ಯ ಆಕ್ರಮಣ ಹಾಗೂ ಆಂತರಿಕವಾಗಿ ಹಲವಾರು ಸಿದ್ದಾಂತಗಳು ಸಾಂಸ್ಕ್ಕತಿಕ ಅಸ್ಥಿತ್ವದಲ್ಲಿ ಒಂದಾಗಿವೆ. ಆದರೆ ಇದೇ ಮಾತನ್ನು ಜಗತ್ತಿನ ಹಾಗೂ ಉಪಖಂಡದಲ್ಲಿ ತೀಕ್ಷವಾದ ಬಿರುಗಾಳಿಯಾಗಿರುವ ಹೊಸ ಮಾಧ್ಯಮಗಳ ಬಗ್ಗೆ ಹೇಳುವಂತಿಲ್ಲ ಎಂದರು.

ಜಾಗತಿಕ ಮಾರುಕಟ್ಟೆ ಶಕ್ತಿಗಳು ನವ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನ, ಸಂವಹನದ ಹೊಸತನದ ತೀವ್ರಗತಿ ಬೆಳವಣಿಗೆಗೆ ಕಾರಣವಾಗಿದ್ದು,  ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳು, ನವ ಮಾಧ್ಯಮದ ಮುಖ್ಯ ಭಾಗವಾಗಿವೆ. ನವಮಾಧ್ಯಮ ಆರ್ಥಿಕ ಜಾಗತೀಕರಣಕ್ಕೆ ಮೂರನೆಯ ದಿಕ್ಕಾಗಿದೆ ಎಂದರು.

ನವಮಾಧ್ಯಮ ಮತ್ತು ಜಾಗತಿಕ ದೃಷ್ಠಿಕೋನದಲ್ಲಿ ಪ್ರಜಾಪ್ರಭುತ್ವ ಕುರಿತು ಮಾತನಾಡಿದ ಡಾ.ಅಗರವಾಲ್,ಅಂತರಜಾಲ ಇಲ್ಲದೆ ಇದ್ದಲ್ಲಿ ಬರಾಕ್ ಓಬಾಮಾ ಅಮೇರಿಕೆ ಅಧ್ಯಕ್ಷನಾಗಲು ಸಾಧ್ಯವಿರಲಿಲ್ಲ. ಫ್ರೆಂಚ್ ದೇಶದಲ್ಲಿ 2012 ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಎಲ್ಲ ಪ್ರಚಾರಕ್ಕೆ  ಟ್ವಿಟ್ಟರ್ ಬಳಸಲಾಯಿತು. ಭಾರತದಲ್ಲಿ ಲಿಇಂಡಿಯಾ ಟುಡೆ ಆನ್ಲೈನ್, 2014ರ ಜ.3 ವರದಿ ಪ್ರಕಾರ, ಆಮ್ ಆದ್ಮಿ ಪಾರ್ಟಿ ವೆಬ್ಸೈಟ್ ಮಾಹಿತಿ,ಸದಸ್ಯತ್ವ ಹಾಗೂ ದೇಣಿಗೆ ನೀಡಲು ದೇಶ,ವಿದೇಶಗಳಲ್ಲಿನ ಜನರು ಸರ್ಚ ಮಾಡಿದ್ದಾರೆ. ಎಪಿಪಿ ವೆಬ್ಸೈಟ್ ಮತ್ತು ಪೇಸ್ಬುಕ್ ಭಾರತದಲ್ಲಿ ಅಧಿಕ ಸಂಖ್ಯೆಯ ಜನರನ್ನು ಹೊಂದಿದೆ ಎಂದು ಅವರು ಹೇಳಿದರು.

loading...

LEAVE A REPLY

Please enter your comment!
Please enter your name here