ಫೆ.1 ರಿಂದ ಕಲಾ ವೈಭವ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ

0
23
loading...

ವಿಜಾಪುರ,ಜ,29-ಜಿಲ್ಲಾ ಕೈಗಾರಿಕಾ

ಕೇಂದ್ರ, ಕೈಗಾರಿಕೆ ಮತ್ತು ವಾಣಿಜ್ಯ

ಇಲಾಖೆ ವತಿಯಿಂದ ನಗರದ ದರಬಾರ

ಹೈಸ್ಕೂಲ್ ಮೈದಾನದಲ್ಲಿ ಕಲಾವೈಭವ

ವಸ್ತು ಪ್ರದರ್ಶನ ಮತ್ತು ಮಾರಾಟ

ಮೇಳವನ್ನು ಫೆಬ್ರುವರಿ 1 ರಿಂದ 10ರ

ವರೆಗೆ ಆಯೋಜಿಸಲಾಗಿದೆ.

ಸ್ವಹಾಯ ಗುಂಪುಗಳು

ಕುಶಲಕರ್ಮಿಗಳು ಮತ್ತು ಇತರೆ

ಉದ್ಯಮಿದಾರರು ಉತ್ಪಾದಿಸಿದ

ವಸ್ತುಗಳನ್ನು ವಿಜಾಪುರದಲ್ಲಿ ಮಾತ್ರ

ಮಾರಾಟ ಮಾಡುವ ಬದಲು ಇಡೀ

ಕರ್ನಾಟಕ ರಾಜ್ಯದಲ್ಲಿ ಮಾರಾಟ

ಮಾಡುವ ಅವಕಾಶ ಕಲ್ಪಿಸುವ

ಉದ್ದೇಶದಿಂದ ಈ ಮೇಳವನ್ನು

ಏರ್ಪಡಿಸಲಾಗಿದೆ. ಮೇಳದಲ್ಲಿ ಸಣ್ಣ

ಕೈಗಾರಿಕೆಗಳು, ಅತಿ ಸಣ್ಣ ಕೈಗಾರಿಕೆಗಳು,

ಕುಶಲಕರ್ಮಿಗಳು, ಸ್ವಸಹಾಯ

ಸಂಘಗಳು, ಉತ್ಪಾದಿಸಿದ ಕರಕುಶಲ

ವಸ್ತುಗಳು, ಕೈಮಗ್ಗ ವಸ್ತುಗಳು,

ಗೃಹಲಂಕಾರ ವಸ್ತುಗಳು, ಜವಳಿ, ರೇಷ್ಮೆ

ಮತ್ತು ಖಾದಿ ವಸ್ತುಗಳು, ಸಿದ್ಧ

ಉಡುಪುಗಳು ಆಹಾರ ಪದಾರ್ಥಗಳು,

ಆರ್ಯುವೇದಿಕ ಓಷಧಿಗಳು, ಫ್ಯಾನ್ಸಿ

ಬ್ಯಾಗ್ಸ್, ಚರ್ಮದ ಉತ್ಪನ್ನಗಳು ಹೀಗೆ

ಉತ್ತಮ ಗುಣಮಟ್ಟದ ವಸ್ತುಗಳು

ಆಕರ್ಷಕ ಬೆಲೆಯಲ್ಲಿ ದೊರೆಯಲಿವೆ.

ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಹಾಗೂ

ಹೊರ ಜಿಲ್ಲೆಯಿಂದ ಘಟಕಗಳು

ಭಾಗವಹಿಸಲಿವೆ. ಸದರಿ ವಸ್ತು

ಪ್ರದರ್ಶನದಲ್ಲಿ 60 ರಿಂದ 70

ಮಳಿಗೆಗಳನ್ನು ನಿರ್ಮಿಸಲಾಗುತ್ತಿದ್ದು,

ವಸ್ತು ಪ್ರದರ್ಶನವು ಪ್ರತಿ ದಿನ ಮುಂಜಾನೆ

10 ಗಂಟೆಯಿಂದ ರಾತ್ರಿ 9 ಗಂಟೆವರೆಗೆ

ತೆರೆದಿರುತ್ತದೆ. ಸಾರ್ವಜನಿಕರು ಸದರಿ

ವಸ್ತು ಪ್ರದರ್ಶನ ಮತ್ತು ಮಾರಾಟ

ಮೇಳದ ಪ್ರಯೋಜನವನ್ನು

ಪಡೆದುಕೋಳ್ಳಲು ಜಿಲ್ಲಾ ಕೈಗಾರಿಕಾ

ಕೇಂದ್ರದ ಜಂಟಿ ನಿರ್ದೇಶಕ ವಿ.ಎಸ್.

ಹೊನಮಾನೆ ಪ್ರಕಟಣೆಯಲ್ಲಿ ಕೋರಿದ್ದಾರೆ.

loading...

LEAVE A REPLY

Please enter your comment!
Please enter your name here