ಬರದ ನಾಡಿನ ಭರವಸೆಯ ಬೆಳಕು ಮುಂಡರಗಿಯ ಚೇತನ್ ಸೊಲಗಿ

0
37
loading...

 

ಮುಂಡರಗಿ ಫೆ.2 ರಂದು ಗದಗ ನಗರದ ಜಿಲ್ಲಾ ವಾಣಿಜ್ಯ ಸಭಾ ಭವನದಲ್ಲಿ ಲಿಸಾಪ್ಟ್ ಜಗತ್ತಿನಲ್ಲಿಳಿ ಕೃತಿ ಲೋಕಾರ್ಪಣೆ ನಿಮಿತ್ಯ ಈ ಲೇಖನ)

ಪ್ರತಿಭೆ ಯಾರ ಸ್ವತ್ತೂ ಅಲ್ಲ, ಅದಕ್ಕೆ ಹಿರಿಕಿರಿಯರೆಂಬ ಬೇಧ-ಭಾವ ಮೊದಲೇ ಇಲ್ಲ. ಮನತುಂಬಿ ಕರೆದರೆ ಕತೆ, ಕವನ, ಕವಿತೆ, ನಾಟಕಗಳು ತಮ್ಮಿಂದ ತಾವಾಗಿಯೇ ಮೂಡಿ ಬರುತ್ತವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಜಿಲ್ಲೆಯ ಮುಂಡರಗಿ ಪಟ್ಟಣದ ಯುವ ಪ್ರತಿಭೆ ಚೇತನ್ ಸೊಲಗಿ.

30-01-1994 ರಂದು ಕಲಾವತಿ, ಡಾ.ನಿಂಗು ಸೊಲಗಿಯವರ ಹಿರಿಯ ಮಗನಾಗಿ ಪಂಚತಂತ್ರ ಕತೆಗಳ ಕೃತಿಕಾರ ದುರ್ಗಸಿಂಹನ ಕರ್ಮಭೂಮಿಯಾದ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಜನಿಸಿದ ಇವರು, ಇದೀಗ ಮುಂಡರಗಿಯಲ್ಲಿ ವಾಸವಾಗಿದ್ದು, ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದಲ್ಲಿ ಪದವಿ ಹಂತದಲ್ಲಿ ಪತ್ರಿಕೋದ್ಯಮವನ್ನು ಮುಖ್ಯ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸುತಿದ್ದಾರೆ. ಬಾಲ್ಯದಿಂದಲೂ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲವಾಗಿ ತೊಡಗಿಕೊಂಡು ಬಂದ ಚೇತನ ಸೊಲಗಿ, ಜನಪದ ಗೀತೆಹಾಡುಗಾರಿಯೊಂದಿಗೆ ಬರವಣಿಗೆಯಲ್ಲಿ ತೊಡಗಿಕೊಳ್ಳುವ ಮೂಲಕ ಕಳೆದ ಒಂದೂವರೆ ವರ್ಷದಿಂದ ತನ್ನ ಸಂಪಾದಕತ್ವದಲ್ಲಿಯೇ ಕೆಲವು ಗ್ರಾಮೀಣ ಯುವಕನ್ನು ಒಟ್ಟು ಗೂಡಿಸಿಕೊಂಡು ‘ಭಾವ ಚೇತನ’ ಇ-ಮೇಲ್ ಪತ್ರಿಕೆಯೊಂದನ್ನು ಮೇಲ್ ಮುಖಾಂತರ ಸಾವಿರಾರು ಓದುಗರಿಗೆ ತಲುಪಿಸುತಿದ್ದು, ಪ್ರಸ್ತುತ  ‘ಭಾವ ಚೇತನ’ ಇ-ಮೇಲ್ ಪತ್ರಿಕೆಯು ‘ಭಾವ ಚೇತನ’  ಬ್ಲಾಗ್ ಆಗಿ ಪರಿವರ್ತನೆಯಾಗಿ ಕಾರ್ಯ ನಿರ್ವಹಿಸುವ ಮೂಲಕ ಓದುಗರ ಸ್ನೇಹ, ಪ್ರೀತಿಗಳಿಸಿದೆ.     ಪ್ರಾಥಮಿಕ-ಪ್ರೌಢಶಾಲೆಯ ಹಂತದಲ್ಲಿ ಹಲವಾರು ಭಾರಿ “ಪ್ರತಿಭಾ ಕಾರಂಜಿ” ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆ ಬಹುಮಾನ, ಧಾರವವಾಡದ ಚಿಲಿಪಿಲಿ ಗುಬ್ಬಚ್ಚಿಗೂಡು ಬಳಗ ಆಯೋಜಿಸಿದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ “ಚಿಣ್ಣರ ಚಿನ್ನ” ಪ್ರಶಸ್ತಿ, ಕನ್ನಡ ಅಂತರ್ಜಾಲ ಮಾಹಿತಿಕೋಶ ‘ಕಣಜ’ ನಡೆಸುವ ರಾಜ್ಯ ಮಟ್ಟದ ‘ಕದಿರು’ ಲೇಖನ ಸ್ಪರ್ಧೆಯಲ್ಲಿ “ಡಂಬಳದಲ್ಲೊಂದು ರೊಟ್ಟಿ ಊಟದ ಜಾತೆ”್ರ ಗುಣಾತ್ಮಕ ಲೇಖನಕ್ಕೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಖಂಜರ ನುಡಿಸುತ್ತಾ ಜನಪದ, ತತ್ವಪದ, ಲಾವಣಿ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಜನಮನ ಗೆದ್ದಿದ್ದಾರೆ. 7 ಕ್ಕೂ ಹೆಚ್ಚು ರೇಡಿಯೋ ಪಾಠಗಳಿಗೆ ದ್ವನಿ ನೀಡಿದ್ದು, ಮಕ್ಕಳಿಗೆ ಹಾಗೂ ಯುವ ಸಾಂಸ್ಕ್ಕತಿಕ ತಂಡಗಳಿಗೆ ಸ್ವತಹ ಗೀತೆಗಳನ್ನು ರಚಿಸಿ ಅವುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ನಲಿಯುವ ಚಿಣ್ಣರು ನಾವು ದ್ವನಿ ಸುರುಳಿಗೆ ಹಾಡಿದ್ದಾರೆ.

ಹೆಗ್ಗೌಡಿನ ನೀನಾಸಂನಲ್ಲಿ ಏರ್ಪಡಿಸುವ ಸಾಂಸ್ಕ್ಕತಿಕ ಶಿಬಿರದಲ್ಲಿ ಶಿಬಿರಾರ್ಥಿಯಾಗಿ, ಧಾರವಾಡ ವಿದ್ಯಾವರ್ಧಕ ಸಂಘದ ಯುವ ಕವಿಗೋಷ್ಠಿ, ಲಕ್ಕುಂಡಿ ಉತ್ಸವ, ಬೆಳಗಾವಿಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ, ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯ ಏರ್ಪಡಿಸಿದ್ದ ತ್ರಿಭಾಷಾ ಕವಿಗೋಷ್ಠಿ, ಧಾರವಾಡ-ಗದಗದ ಮಕ್ಕಳ ಸಾಹಿತ್ಯಸಮ್ಮೇಳನ, ಬೆಳ್ವಲನಾಡು ಸಂಘದ ಕವಿಗೋಷ್ಠಿ, ಕೊಪ್ಪಳದ ಕನ್ನಡ ಡಾಟ್ ನೆಟ್ನ ಕವಿಸಮಯ, ಕಸಾಪ ಗದಗ ಸಾಹಿತ್ಯ ಸಂಜೆ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಕವಿಗೋಷ್ಠಿಗಳಲ್ಲಿ ಸ್ವರಚಿತ ಕವನ ವಾಚನ ಮಾಡಿದ್ದಾರೆ. ಈ ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರಲ್ಲದೇ ನಾಡಿನ ಅನೇಕ ಶಿಬಿರಗಳಲ್ಲಿ, ಕಾವ್ಯ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಚಿಕ್ಕಂದಿನಿಂದಲೇ ಬರವಣಿಗೆಯ ಅಭಿರುಚಿ ಬೆಳೆಸಿಕೊಂಡಿರುವ ಇವರು ಪ್ರಸ್ತುತ  ಲಿಸಾಫ್ಟ್ ಜಗತ್ತಿನಲ್ಲಿ’ ಮೊದಲ ಕವನ ಸಂಕಲನವನ್ನು ಪ್ರಕಟಿಸಿ ಫೆಬ್ರವರಿ 2 ರಂದು ಗದಗ ನಗರದ ಜಿಲ್ಲಾ ವಾಣಿಜ್ಯ ಸಭಾ ಭವನದಲ್ಲಿ ಕೃತಿ

ಲೋಕಾರ್ಪಣೆಗೊಳಿಸಿ ಓದುಗರ ಕೈಗಿಡುತಿದ್ದಾರೆ, ಇದು ಜಿಲ್ಲೆಯಲ್ಲಿರುವ ಪತ್ರಿಯೊಬ್ಬರೂ ಸಂತೋಷ ಪಡುವ ವಿಷಯ ಏಕಂದರೆ ನಮ್ಮ ಊರಿನ ಹುಡುಗ ಇಂತ ಒಂದೋಳ್ಳೆ ಕವನ ಸಂಕಲನ ಕೃತಿ ರಚಿಸಿ ಲೋಕಾರ್ಪಣೆಗೊಳಿಸುತ್ತಿರುವುದು ಗದಗ ಜಿಲ್ಲೆಯ ಜನತೆ ಹರ್ಷ ವ್ಯಕ್ತ ಪಡಿಸುವ ಸಂದರ್ಭವಿದು.

ಮುಂದಿನ ದಿನಗಳಲ್ಲಿ ನಾವು ನೀವು ಮದುರ ಭಾವನೆಯಿಂದ ಹೊಸ ಚೇತನವಾಗಿ ಓದುವಂತ ಕೃತಿಗಳನ್ನು ರಚಿಸಲಿ ಈ ನಮ್ಮ ಚೇತನ್ ಸೊಲಗಿ ಎಂದು ಹಾರೈಸೋಣ.                                                               ಸಂತೋಷಕುಮಾರ ಮುರಡಿ                   

loading...

LEAVE A REPLY

Please enter your comment!
Please enter your name here