ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಬಲವಂತ ಪಡಿಸಬೇಡಿ

0
30
loading...

ಬೀಳಗಿ 19- ಪಾಲಕರು ಮಕ್ಕಳಿಗೆ ತಮ್ಮಂತಾಗಲು ಬಲವಂತ

ಪಡಿಸದೆ, ಅವರಂತಾಗಲು ಅವರ ಪಾಡಿಗೆ ಅವರನ್ನು ಬಿಟ್ಟು

ಬಿಡಬಿಡಿ. ಮಕ್ಕಳಿಗೆ ಸನ್ನಡತೆ, ಸದ್ಗುಣಗಳನ್ನು, ಸಂಸ್ಕಾರವನ್ನು

ಕಲಿಸಿ ಕೊಡುವುದು ಪಾಲಕರ ಕರ್ತವ್ಯವಾಗಿದೆ. ಮಕ್ಕಳ

ನಗುಮುಖದ ಮಂದಹಾಸದಲ್ಲಿ ದೇವರನ್ನು ಕಾಣಬೇಕು. ಮಕ್ಕಳ

ಕುರಿತು ಕಾಳಜಿ ವಹಿಸಬೇಕೆ ಹೊರತು ಅವರ ಮೇಲೆ

ಬಲವಂತವಾಗಿ ಏನನ್ನು ಹೇರಬಾರದು ಎಂದು ವಿಶ್ರಾಂತ

ಮುಖ್ಯಗುರುಗಳಾದ ಡಿ ಪಿ ಅಮಲಝರಿ ಹೇಳಿದರು.

ಅವರು ತಾಲೂಕಿನ ಅರಕೇರಿ ಗ್ರಾಮದ ಶ್ರೀಮತಿ ಎಂ ಎಂ

ಸಾವಕಾರ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ 8, 9 ಮತ್ತು

10 ನೇ ತರಗತಿ ಮಕ್ಕಳಿಗೆ ನೈತಿಕ ಮೌಲ್ಯ ಶಿಕ್ಷಣ ಕಾರ್ಯಾಗಾರದಲ್ಲಿ

ವಿಶೇಷ ಉಪನ್ಯಾಸಕರಾಗಿ ಮಾತನಾಡಿ, ಒತ್ತಾಯದಿಂದ

ಮಗುವಿನಲ್ಲಿ ಬದಲಾವಣೆಯಾಗದು. ಒತ್ತಾಯದಿಂದ ತನ್ನ

ಸ್ವಂತಿಕೆಯನ್ನು ಕಳೆದುಕೊಳ್ಳುತ್ತದೆ, ಮಕ್ಕಳು ಜೀವಂತ

ಬಾಣಗಳಿದ್ದಂತೆ. ಆದ್ದರಿಂದ ಚಿಮ್ಮಲು ಗುರುಗಳು, ಪಾಲಕರು

ಸಹಾಯವಾಗಬಹುದೆಂದು ಹೇಳಿದರು.

ಕೆರೂರಿನ ಸಂಗಾತಿ ಸಹಾಯವಾಣಿ ಸ್ವ ಸಹಾಯ ಸೇವಾ

ಸಂಸ್ಥೆಯ ಅಧ್ಯಕ್ಷ ಕೆ ಜಿ ದೇಸಾಯಿ ಮಾತನಾಡಿ, ಮಾಧ್ಯಮಗಳ

ಭರಾಟೆಯಿಂದ ಇಂದು ಓದು ಕಡಿಮೆಯಾಗಿ ವೀಕ್ಷಣೆ ಹೆಚ್ಚಾಗಿದೆ.

ಇದರಿಂದ ಭಾವನೆಗಳು ಕೆರಳಿ ತನ್ನ ಮೇಲೆ ತಾನೆ ಹಿಡಿತವನ್ನು

ಕಳೆದುಕೊಂಡು ದುರ್ನಡತೆಯತ್ತ ಸಾಗುತ್ತಿದ್ದಾರೆ. ಹುಚ್ಚು

ಹವ್ಯಾಸಗಳಿಗೆ ಮಾರು ಹೋಗಿ ಬದುಕನ್ನೇ ಹಾಳು

ಮಾಡಿಕೊಳ್ಳುತ್ತಿದ್ದಾರೆಂದು ವಿಷಾಧಿಸಿದರು.

ಮಕ್ಕಳು ಪಾಠವನ್ನು ಕಂಠಪಾಠ ಮಾಡದೆ, ನಸುಕಿನ ನಾಲ್ಕು

ಗಂಟೆಗೆ ಎದ್ದು 45 ನಿಮಿಷ ಓದಿ, 15 ನಿಮಿಷ ಅದರ ಕುರಿತು

ಮನನ ಮಾಡಿಕೊಂಡರೆ ಒಳ್ಳೆಯದು. ವಿದ್ಯಾರ್ಥಿ ಜೀವನದಲ್ಲಿ

ಆತ್ಮ ವಿಶ್ವಾಸ ಇದ್ದರೆ ಏನೆಲ್ಲಾ ಸಾಧಿಸಬಹುದು. ಆದರೆ ಇಂದು

ಓದು ಕಡಿಮೆಯಾಗಿದ್ದರಿಂದ ಆತ್ಮ ವಿಶ್ವಾಸ ಕಡಿಮೆಯಾಗಿದೆ

ಎಂದು ಹೇಳಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರೂ

ಹಾಗೂ ಪತ್ರಕರ್ತರಾದ ಡಿ ಎಂ ಸಾಹುಕಾರ ಅತಿಥಿಯಾಗಿ

ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರು

ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಓದಿದರೆ ಖಂಡಿತ

ವಾಗಿಯೂ ಯಶಸ್ವಿಯಾಗಲು ಸಾಧ್ಯ. ಮೊಬೈಲ್ನಲ್ಲಿ ಆಟ

ಆಡುವುದು, ಧಾರವಾಹಿಗಳನ್ನು ನೋಡಿ ಹೊತ್ತುಕಳೆಯದೆ ತಾವು

ಅಂದು ಕೊಂಡ ಗುರಿಮುಟ್ಟುವ ವರೆಗೆ ವಿಶ್ರಮಿಸದೆ

ಮುನ್ನುಗ್ಗಬೇಕೆಂದು ಕಿವಿ ಮಾತು ಹೇಳಿದರಲ್ಲದೇ, ನೈತಿಕ ಶಿಕ್ಷಣ,

ಜ್ಞಾನ ಇದ್ದರೆ ಬದುಕು ಸುಂದರವಾಗಲು ಸಾಧ್ಯವೆಂದು ಅಭಿ

ಪ್ರಾಯಪಟ್ಟರು. ಮುಖ್ಯಗುರು ಎಸ್ ಎಂ ಬಸನಗೌಡ್ರ

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಮಾತನಾಡಿದರು. ಶಿಕ್ಷಕರಾದ ವಿ

ಆರ್ ಹಿರೇನಿಂಗಪ್ಪನವರ, ಎಸ್ ಡಿ ಓಂಕಾರೆಪ್ಪಗೋಳ, ಎಂ ಸಿ

ಸಾಲಿ, ಎಸ್ ಎಸ್ ಉಳ್ಳೇಗಡ್ಡಿ ವೇದಿಕೆ ಮೇಲಿದ್ದರು

loading...

LEAVE A REPLY

Please enter your comment!
Please enter your name here