ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಅಪಾರ

0
61
loading...

ಹಾರೂಗೇರಿ :6 ತಾಯಿ ಮಕ್ಕಳ ಪಾಲಿಗೆ ಆಕರ್ಷಕವಾಗಿದ್ದರೆ ಅಷ್ಟೇ ಸಾಲದು ಮನೆಯೇ ಮೊದಲ ಪಾಠಶಾಲೆ ಜನನಿಯೇ ಮೊದಲ ಗುರು ಎಂಬುವುದನ್ನು ಅರಿತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತಾಯಿಯಾದವರು ಶ್ರಮಿಸಬೇಕು ತಾಯಿ ಮನಕುಲ ಬೆಳಗುವ ಮಹಾಮಾತೆ ಇದ್ದಂತೆ ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಅಪಾರವೆಂದು ಮಹಿಳಾ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಗೀತಾ ಚಿಕ್ಕಮಠ ಅಭಿಮತ ವ್ಯಕ್ತಪಡಿಸಿದರು.

ಅವರು ಸ್ಥಳೀಯ ಕಾಳಿಕಾ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ರಾಯಬಾಗ ಮಹಿಳಾ ಜ್ಞಾನ ವಿಕಾಸ ಕೇಂದ್ರ ರಾಯಬಾಗ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಜ್ಞಾನವಿಕಾಸ ಕೇಂದ್ರದ ಉದ್ಟಾಟನಾ ಸಮಾರಂಭ ಹಾಗೂ ಸಂಸ್ಕ್ಕತಿ ಮತ್ತು ಸಂಸಾರ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಿಸಿದ ಪ್ರತಿ ಮಗುವಿನ ಪಾಲಿಗೆ ತಾಯಿ ದೇವರ ಇದ್ದಂತೆ ತಾಯಿಯಾದವರು ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಾಧ್ಯಮದಲ್ಲಿ ಬರುವ ಧಾರಾವಾಹಿ ಸಿನಿಮಾ ಹಾಗೂ ಇನ್ನಿತರ ಮನರಂಜನೆಗಳಲ್ಲಿ ಕಾಲಕಳೆಯದೇ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಾ ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವ ಆಚಾರ ವಿಚಾರಗಳನ್ನು ಬೆಳೆಸಬೇಕೆಂದು ತಾಯಂದಿಯರಿಗೆ ಗೀತಾ ಚಿಕ್ಕಮಠ ಕರೆ ನೀಡಿದರು.

ಆಂಗ್ಲ ಮಾಧ್ಯಮ ಶಾಲೆಯ ಪ್ರಧಾನ ಗುರುಮಾತೆ ಸುಮಿತ್ರಾ ಪಾಟೀಲ ಮಾತನಾಡಿ ತಾಯಂದಿರು ವಿದೇಶಿ ಸಂಸ್ಕ್ಕತಿಯನ್ನು ಅನುಸರಿಸದೇ ತಾಯಿ ಮಾನವ ಜನಾಂಗದ ಮೊದಲ ಶಿಕ್ಷಕಿ ಎಂಬ ವಿಚಾರವನ್ನು ಅರಿತುಕೊಂಡು ಮಕ್ಕಳ ಉಜ್ವಲ ಭವಿಷ್ಯಕ್ಕೆ ಶ್ರಮಿಸಬೇಕೆಂದು ತಾಯಂದಿರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಮಹಿಳಾ ಒಕ್ಕೂಟಗಳ ಅದ್ಯಕ್ಷ್ಯೆ ಜಯಶ್ರೀ ಸಾರಾಪೂರೆ ಸ್ವಾಗತಿಸಿದರು, ಹಾರೂಗೇರಿ ವಲಯದ ಎಸ್.ಪಿ ಮಾಹಾನಂದಾ ದನವಾಡೆ ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here