ಮೂಲಭೂತ ಸೌಕರ್ಯಕ್ಕೆ ಮುಂದುವರಿದ ಪೀರನವಾಡಿ ದಲಿತರ ಮುಷ್ಕರ

0
23
loading...

ಬೆಳಗಾವಿ,10-ತಾಲೂಕಿನ ಪೀರನವಾಡಿ ಗ್ರಾಮದ ದಲಿತರ ವಸತಿಗೆ ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಗುರುವಾರದಿಂದ ಇಲ್ಲಿನ ಗ್ರಾಪಂ ಎದುರು ಗ್ರಾಮದ ದಲಿತ ಮುಖಂಡ ಗುಂಡು ತಳವಾರ ನೇತೃತ್ವದಲ್ಲಿ ಶುಕ್ರವಾರ ಕೂಡ ಪ್ರತಿಭಟನೆ ಮುಂದುವರೆದಿದೆ.

ಗ್ರಾಪಂ ಪಿಡಿಓ ಉಷಾ .ಎಸ್. ಹಾಗೂ ಗ್ರಾಪಂ ಸದಸ್ಯರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಹಲವಾರು ಬಾರಿ ದಲಿತ ವಸತಿಗೆ ಅಗತ್ಯ ರಸ್ತೆ, ಕುಡಿಯುವ ನೀರು, ಚರಂಡಿ, ದಾರೀದೀಪ ಮುಂತಾದ ವ್ಯವಸ್ಥೆಗಳಿಗೆ ಒತ್ತಾಯಿಸಿದರೂ ಗಮನ ಹರಿಸಲಾಗಿಲ್ಲ. ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಅವಶ್ಯಕತೆಯಿದ್ದು ತಕ್ಷಣ ಭೂಮಿ ಕೊಡಬೇಕು ಎಂದು ಒತ್ತಾಯಿಸಿದರು.

ದಲಿತ ವಿರೋಧಿ ಉಷಾ ಅವರನ್ನು ತಕ್ಷಣ ಬೇರೆಡೆ ವರ್ಗಾಯಿಸಬೇಕು ಇಲ್ಲವೇ ಅಮಾನತುಗೊಳಿಸಬೇಕೆಂದು ಪ್ರತಿಭಟನೆ ನಡೆಸಲಾಗುತ್ತಿದೆ. ಪೀರನವಾಡಿ ಗ್ರಾಪಂ ಎದುರು ಧರಣಿ ಮುಂದುವರೆಸಿರುವ ದಲಿತರು ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸದಿದ್ದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದೆ.

loading...

LEAVE A REPLY

Please enter your comment!
Please enter your name here