ಮೆರೆಗು ತಂದ ಮೆರೆವಣಿಗೆ

0
28
loading...

ಬೆಳಗಾವಿ,13-ಸಾರೋಟದಲ್ಲಿ ರಾಯಣ್ಣನ ಭಾವಚಿತ್ರ

ಅವನು ತಿರವಿದ ಲೋಡಗಳು, ರಾರಾಜಿಸಿದ ಭಾವುಟಗಳು ಕನ್ಮಣ

ಸೆಳೆದ ಕುದುರೆ, ನವಿಲು, ನೃತ್ಯ ಉರಿಯುವ ಬಿಸಿಲಿನಲ್ಲಿ ಮನ

ತಣಿಸಿದ ಕಲಾ ತಂಡಗಳ ಪ್ರದರ್ಶನ ಕುಣಿದು ಕುಪ್ಳಳಿಸಿದ ಜನತೆ

ಇದು ಸಂಗೊಳ್ಳಿ ರಾಯಣ್ಣನ ಉತ್ಸವದ ಅಂಗವಾಗಿ ನಡೆದ

ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಾನಪದ ಕಲಾ ವಾಹಿನಿ

ಮೆರೆವಣಿಗೆಯಲ್ಲಿ ಕಂಡು ಬಂದ ದೃಶ್ಯ. ವಿಧಾನ ಪರಿಷತ್ ಸದಸ್ಯ

ಮಹಾಂತೇಶ ಕೌಜಲಗಿ ಹಾಗೂ ಜಿಲ್ಲಾಧಿಕಾರಿ ಎನ್,ಜಯರಾಂ

ತಾಪಂ ಅಧ್ಯಕ್ಷ ದಿನೇಶ ವಳಸಂಗ ಸಮ್ಮುಖದಲ್ಲಿ ಬೈಲಹೊಂಗಲ

ಶಾಸಕ ವಿಶ್ವನಾಥ ಪಾಟೀಲ, ಚಾಲನೆ ನೀಡಿದರು.

ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದ ಪಕ್ಕದಲ್ಲಿ ಇರುವ

ರಾಯಣ್ಣನ ಪುತ್ಥಳಿಯಿಂದ ಪ್ರಾರಂಭವಾದ ಮೆರೆವಣಿಗೆಯಲ್ಲಿ

25 ಕ್ಕೂ ಹೆಚ್ಚು ಕಲಾ ತಂಡಗಳು, ನೂರಾರು ಜನ ಕುಂಭ ಹೊತ್ತ

ಸುಮಂಗಲೆಯರು, ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.

ಮನ ತಣಿಸಿದ ಕಲಾ ಪ್ರದರ್ಶನ ರಾಜ್ಯದ ವಿವಿಧ ಕಡೆಗಳಿಂದ

ಆಗಮಿಸಿದ ಕಲಾ ತಂಡಗಳು ನೀಡಿದ ಪ್ರದರ್ಶನ ಮೆರೆವಣಿಗೆಯ

ಮೆರಗನ್ನು ಹಿಮ್ಮಡಿಗೊಳಿಸಿತ್ತು. ಧಟ್ಟಿ ಕುಣಿತ, ಕಥಕಲಿ ಗೊಂಬೆ

ಕುಣಿತ, ವೀರ ಗಾಸೆ, ಕರಡಿಮಜಲು, ಡೊಳ್ಳು ಕುಣಿತ,

ಕೋಲಾಟ, ಲೆಜಿಮ್, ಜಾಂಜ್ ಪಥಕ, ಹೆಜ್ಜೆ ಮೆಳಾ ಜಾನಪದ

ಶೈಲಿಯ ನೃತ್ಯಗಳು, ಕಲಾಸಕ್ತರನ್ನು ರಂಜಿಸಿದವು. ಮೆರೆವಣಿಗೆಯ

ಮಾರ್ಗದುದ್ದಕ್ಕೂ ಪ್ರತಿ ಮನೆಯ ಮುಂದೆ ಹಾಕಿದ ರಂಗೋಲಿ

ಚಿತ್ತಾರಗಳು ರಾಯಣ್ಣನ ಮೆಲೆ ಇಟ್ಟ ಶ್ರದ್ದೆ, ಭಕ್ತಿ, ಅಭಿಮಾನದ

ಸಂಕೇತದಂತೆ ರಾರಾಜಿಸುತ್ತಿದ್ದವು.

ಅಲ್ಲಲ್ಲಿ ಮನೆಗಳ ಮುಂದೆ ಕುಡಿಯುವ ನೀರಿನ ವ್ಯವಸ್ಥೆ

ಮಾಡಿ ಆಥಿತ್ಯ ಮೆರೆದರು. ಮನೆಯ ಮುಂದೆ ನಿಂತು

ಮಹಿಳೆಯರು ಮತ್ತು ಮಕ್ಕಳು ಮೆರೆವಣಿಯನ್ನು ನೋಡಿ ಸಂತಸ

ಪಟ್ಟರು.

loading...

LEAVE A REPLY

Please enter your comment!
Please enter your name here