ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ

0
7
loading...

ಖಾನಾಪುರ:28 ಸ್ಥಳೀಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ

ಸಂಸ್ಥೆಯ ಘಟಕದಲ್ಲಿ ಇತ್ತೀಚೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ,

ಪೊಲೀಸ್ ಹಾಗೂ ಸಾರಿಗೆ ಇಲಾಖೆಗಳು ಜಂಟಿಯಾಗಿ ಆಯೋಜಿಸಿದ್ದ

ರಸ್ತೆ ಸುರಕ್ಷತಾ ಸಪ್ತಾಹವನ್ನು ಖಾನಾಪುರ ಪೊಲೀಸ್ ಠಾಣೆಯ ಪಿಎಸ್ಐ

ಪ್ರಮೋದ ಯಲಿಗಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಸ್ ಚಾಲಕರು

ಹಾಗೂ ನಿರ್ವಾಹಕರನ್ನುದ್ದೇಶಿಸಿ ಮಾತನಾಡಿದ ಅವರು, ಸಮೂಹ ಸಾರಿಗೆ

ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬಸ್ ಚಾಲಕರು ಚಾಲನೆಯನ್ನು

ಮಾಡುವಾಗ ಮೊಬೈಲ್ನಲ್ಲಿ ಮಾತನಾಡುವುದು, ಸಹ ಪ್ರಯಾಣಿಕರೊಂದಿಗೆ

ಹರಟುವುದು ಸೇರಿದಂತೆ ವಾಹನ ಚಾಲನೆಯ ಜೊತೆಗೆ ಇತರೆ ಸಂಗತಿಗಳ

ಕಡೆಗೆ ಗಮನ ಹರಿಸುವುದರಿಂದ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ

ಸಂಭವಿಸುತ್ತಿವೆ. ಹೀಗಾಗಿ ಇವುಗಳನ್ನು ಸಂಪೂರ್ಣ ನಿಷೇಧಿಸಿ ಸುರಕ್ಷಿತ

ಚಾಲನೆಗೆ ಒತ್ತು ನೀಡಲು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು

ಬೆಳಗಾವಿ ವಿಭಾಗದ ವಿಭಾಗೀಯ ಸಾರಿಗೆ ಅಧಿಕಾರಿ ಕೆ.ಎಲ್ ಗುಡೆಣ್ಣವರ

ವಹಿಸಿದ್ದರು. ಖಾನಾಪುರ ಘಟಕದ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್ಗಳು

ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು. ಘಟಕ ವ್ಯವಸ್ಥಾಪಕಿ ಎಸ್.ಎಂ

ಮುಲ್ಲಾ ಸ್ವಾಗತಿಸಿದರು. ಜಗದೀಶ ನಿರೂಪಿಸಿ ವಂದಿಸಿದರು

loading...

LEAVE A REPLY

Please enter your comment!
Please enter your name here