ವಿವಿಧ ದೇವಸ್ಥಾನಗಳಿಗೆ ಸಚಿವ ಹುಕ್ಕೇರಿಯಿಂದ ಚೆಕ್ ವಿತರಣೆ

0
29
loading...

ಚಿಕ್ಕೌಡಿ 15: ತಾಲೂಕಿನ ವಿವಿಧ ದೇವಸ್ಥಾನಗಳಿಗೆ

ಮುಜರಾಯಿ ಮತ್ತು ಬಿಸಿಎಂ ಇಲಾಖೆಯಿಂದ

ಮಂಜೂರಾಗಿರುವ ಚೆಕ್ ಹಾಗೂ ಆದೇಶ ಪತ್ರಗಳನ್ನು

ಮುಜರಾಯಿ,ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವ ಪ್ರಕಾಶ

ಹುಕ್ಕೇರಿ ವಿತರಿಸಿದರು.

ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಿವಿಧ

ದೇವಸ್ಥಾನಗಳ ಅಭಿವೃದ್ದಿಗೆ 146.13 ಲಕ್ಷಗಳ ರೂ ಗಳ ಚೆಕ್

ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿ ಯೋಜನೆಯಡಿ

ಮಂಜೂರಾಗಿರುವ ಪರಿಹಾರ ಧನ ರೂ 52 ಸಾವಿರ

ಚೆಕಗಳನ್ನು ಪಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು

ಮಂಜೂರಾಗಿರುವ ಅನುಧಾನವನ್ನು ಸರಿಯಾಗಿ ಬಳಸಿಕೊಂಡು

ಉತ್ತಮ ಕಟ್ಟಡಗಳ ಕಟ್ಟುವಂತೆ ಸೂಚಿಸಿದರು.

ಬಿಸಿಎಂ ಇಲಾಖೆಯಿಂದ ತಾಲೂಕಿನ ವಡಗೋಲ

ಬಿರೇಶ್ವರ ದೇವಸ್ಥಾನ ಟ್ರಸ್ಟ್ಗೆ 5 ಲಕ್ಷ, ಕಲ್ಲೌಳದ ಗಂಗಾಮಾತಾ

ಕೋಳಿ ಸಮಾಜಕ್ಕೆ 1 ಲಕ್ಷ, ಖಡಕಲಾಟದ ಗೊಂಧಲಿ ಸಮಾಜ

ಸಂಘಟನೆ 1 ಲಕ್ಷ, ಶಮನೇವಾಡಿಯ ನಂದಿ ಜೈನ ದೇವಸ್ಥಾನಕ್ಕೆ

50 ಸಾವಿರ ಹಾಗೂ ಮುಜರಾಯಿ ಇಲಾಖೆಯಿಂದ ತಾಲೂಕಿನ

ಅಪ್ಪಾಚಿವಾಡಿಯ ಹಾಲಸಿದ್ದನಾಥ ದೇವಾಲಯಕ್ಕೆ 50ಲಕ್ಷ,

ಕುರಲಿಯ ಹಾಲಸಿದ್ದದೇವ ದೇವಸ್ಥಾನಕ್ಕೆ 12.50 ಲಕ್ಷ,

ಇಂಗಳಿಯ ಬಸವೇಶ್ವರ

ದೇವಸ್ಥಾನಕ್ಕೆ 12.50 ಲಕ್ಷ,

ಹುನ್ನರಗಿಯ ಲಕ್ಷ್ಮೀ

ನಾರಾಯಣ ದೇವಸ್ಥಾನಕ್ಕೆ

10.50 ಲಕ್ಷ, ಕಾಗವಾಡದ

ಅಂಬಾಬಾಯಿ ದೇವಸ್ಥಾನಕ್ಕೆ

10 ಲಕ್ಷ, ಇಂಗಳಿಯ

ಬಿರದೇವ ಮತ್ತು

ಮರಗುಬಾಯಿ ದೇವಸ್ಥಾನಕ್ಕೆ

10 ಲಕ್ಷ, ಯಾದ್ಯಾನವಾಡಿಯ

ಗುರುಸಿದ್ದೇಶ್ವರ ದೇವಸ್ಥಾನಕ್ಕೆ

5.30 ಲಕ್ಷ, ಗಣೇಶ

ದೇವಾಲಯಕ್ಕೆ 3 ಲಕ್ಷ, ಮಹಾಲಕ್ಷ್ಮೀ ದೇವಾಲಯ ಕಮಿಟಿಗೆ

4.25 ಲಕ್ಷ, ಎಕ್ಸಂಭಾದ ಹುಲಿಕವ್ವಾ ದೇವಸ್ಥಾನಕ್ಕೆ 15.25 ಲಕ್ಷ,

ನೇಜದ ರೇಣುಕಾ ದೇವಸ್ಥಾನಕ್ಕೆ 5 ಲಕ್ಷ, ಜನವಾಡದ

ರೇಣೂಕಾದೇವಿ ದೇವಾಲಯಕ್ಕೆ 1.33 ಲಕ್ಷ, ಯಡೂರಿನ

ರೇಣುಕಾದೇವಿ ದೇವಾಲಯಕ್ಕೆ 2 ಲಕ್ಷ, ಹಾಗೂ ಮಾಂಜರಿಯ

ವಿಠ್ಠಲ ರುಕ್ಮೀಣಿ ದೇವಾಲಯಕ್ಕೆ 2 ಲಕ್ಷ ಹಾಗೇ ಮುಖ್ಯಮಂತ್ರಿಗಳ

ಪರಿಹಾರ ನಿಧಿಯಿಂದ ಮಂಜೂರಾಗಿರುವ ಶ್ರೀಮತಿ

ಗೋಧಾಬಾಯಿ

ಬಾಡಕರ 30 ಸಾವಿರ, ರಾಹುಲ ನಾನಾವರೆ 12 ಸಾವಿರ

ಹಾಗೂ ಸಾಹೇಬಲಾಲ ಶೇಖ ಅವರಿಗೆ 10 ಸಾವಿರ ಚೆಕ್ಗಳನ್ನು

ಸಚಿವ ಪ್ರಕಾಶ ಹುಕ್ಕೇರಿ ವಿತರಣೆ ಮಾಡಿದರು.

ವಿಧಾನ ಪರಿಷತ್ ಸದಸ್ಯ ವೀರಕುಮಾರ ಪಾಟೀಲ,

ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಪುರಸಭೆ ಅಧ್ಯಕ್ಷ

ನರೇಂದ್ರ ನೇರ್ಲಿಕರ, ಉಪಾಧ್ಯಕ್ಷ ಗುಲಾಭಹುಸೇನ ಬಾಗವಾನ,

ಸದಸ್ಯರಾದ ಶ್ಯಾಮ ರೆವಡೆ, ರವಿ ಪಾಟೀಲ, ರಣಜೀತ

ಸಂಗ್ರೌಳಿ, ಜಿ.ಪಂ ಮಾಜಿ ಸದಸ್ಯ ಎ.ಎಲ್.ಪಾಟೀಲ, ಜಿ.ಪಂ

ಸದಸ್ಯ ಅಪ್ಪಾಸಾಹೇಬ ನಾಯಿಕ, ಸತೀಶ ಕುಲಕರ್ಣಿ, ಪ್ರದೀಪ

ಜಾಧವ, ರವಿ ಮಿರಜೆ,

ಉಪವಿಭಾಗಾಧಿಕಾರಿ ಡಾ.ರುದ್ರೇಶ ಘಾಳಿ, ತಹಶಿಲ್ದಾರ

ರಾಜಶೇಖರ ಡಂಬಳ, ಪುರಸಭೆ ಮುಖ್ಯಾಧಿಕಾರಿ ಮಹಾವೀರ

ಬೋರನ್ನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು

ಜನಪ್ರತಿನಿಧಿಗಳು ಸಾರ್ವಜನಿಕರು ಈ ಸಂದರ್ಭದಲ್ಲಿ

ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here