ಶಾಲಾ ಮೈದಾನ ಸಮತಟ್ಟು ಕಾರ್ಯಕ್ಕೆ ಭೂಮಿ ಪೂಜೆ

0
17
loading...

ಬೈಲಹೊಂಗಲ:29 ತಾಲೂಕಿನ ಅರವಳ್ಳಿ ಗ್ರಾಮದ ಸರಕಾರಿ ಗಂಡು

ಮಕ್ಕಳ ಪ್ರಾಥಮಿಕ ಶಾಲೆ ಶಾಲಾ ಆವರಣದಲ್ಲಿ ಕೆಂಗಾನೂರ ಗ್ರಾಮ

ಪಂಚಾಯಿತಿ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ತ್ರೀಯ ಗ್ರಾಮೀಣ

ಉದ್ಯೌಗ ಖಾತ್ರಿ ಯೋಜನೆಯಡಿ ಶಾಲಾ ಮೈದಾನ ಸಮತಟ್ಟು ಮಾಡುವ

ಕಾಮಗಾರಿಗೆ ಜಿ.ಪಂ.ಯೋಜನಾ ನಿರ್ದೇಶಕ ಟಿ.ಎಸ್.ಲೋಕೇಶ ಭೂಮಿ

ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳಲ್ಲಿ ಕ್ರೀಡಾ

ಮನೋಭಾವ ಬೆಳೆಯಬೇಕಾದರೆ ಕ್ರೀಡಾ ಮೈದಾನಗಳು ಚನ್ನಾಗಿರಬೇಕು.

ಕ್ರೀಡಾ ಮೈದಾನ ಕೂಡ ಮಕ್ಕಳಲ್ಲಿ ಹೆಚ್ಚಿನ ಸ್ಪೂರ್ತಿ ನೀಡಿ ಕ್ರೀಡಾ

ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.

ವ್ಯವಸ್ಥಿತರವಾಗಿ ಶಾಲಾ ಮೈದಾನವನ್ನು ಸಮತಟ್ಟು ಮಾಡುವಂತೆ ತಿಳಿಸಿದರು.

ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ.ಪಾಟೀಲ, ಸಹಾಯಕ

ಕಾರ್ಯಕಾರಿ ಅಭಿಯಂತರ ವಿ.ಎಸ್.ವಂಟಗೋಡಿ, ಗ್ರಾ.ಪಂ.ಅಧ್ಯಕ್ಷೆ

ಅಮೀರಾ ತಲ್ಲೂರ,ಉಪಾದ್ಯಕ್ಷ ಯಲ್ಲಪ್ಪಾ ಹುಲಗಣ್ಣವರ, ಪಿಡಿಒ ಕಾವೇರಿ

ಬಡಿಗೇರ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ, ಗಾ.ಪಂ ಸಿಬ್ಬಂದಿ, ಗ್ರಾಮಸ್ತರು

ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here