ಸರ್ವೆ ಜನಾ ಸುಖಿನೋ ಭವಂತು ಹೇಳಿದ್ದೇ ಹಿಂದು ಧರ್ಮ

0
53
loading...

(ಹುಕ್ಕೇರಿ ಕಾರ್ಯಾಲಯದಿಂದ)

ಹುಕ್ಕೇರಿ 13 :   ಸಂಸ್ಕಾರ, ಸಂಸ್ಕ್ಕತಿ, ಆಚಾರ ವಿಚಾರವುಳ್ಳ ಸಂಪ್ರದಾಯದ  ಭಾರತೀಯ ಸಂಸ್ಕ್ಕತಿ ಸಮೃದ್ದಿಯಾಗಿದೆ. ಈ ನಮ್ಮತನ್ನವನ್ನು  ಗೌರವಿಸಿ  ಉಳಿಸಿ ಕೊಳ್ಳಬೇಕಾಗಿರುವದು  ಪ್ರತಿಯೊಬ್ಬರ ಹೊಣೆಯಾ ಗಿದೆಯೆಂದು  ಶ್ರೀರಾಮಸೇನೆಯ  ರಾಷ್ಟ್ತ್ರೀಯ ಅಧ್ಯಕ್ಷ   ಪ್ರಮೋದಜಿ. ಮುತಾಲಿಕ ಹೇಳಿದರು.

ಅವರು ಶನಿವಾರ ಸಂಜೆ  ತಾಲೂಕಿನ ಬೆಣಿವಾಡ  ಗ್ರಾಮದಲ್ಲಿ   ಶ್ರೀರಾಮ ಸೇನಾ ಘಟಕ ಹಾಗೂ ಬೃಹತ ಹಿಂದೂ ಸಮಾವೇಶ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.    ಹಿಂದೂ ಧರ್ಮದ ಮೇಲೆ ಪರಕೀಯರ ದಾಳಿ  ದಿನ ದಿನಕ್ಕೆ  ಹೆಚ್ಚುತ್ತಿದೆ.  ಭಯೋತ್ಪಾದನೆ, ಬೃಷ್ಟಾಚಾರ  ಬಾಂಬ್ಗಳ ಸ್ಪೌಟ ಹೆಚ್ಚಾಗುತ್ತಿವೆ.  ಸರಾಯಿ ಲಾಬಿಗಳು ದಿನ ದಿನಕ್ಕೆ ಹೆಚ್ಚಾಗುತ್ತಿವೆ. ಭಾರತೀಯಗೆ ಒಂದೇ ಸಂವಿಧಾನವಿದ್ದರೂ ಕಾನೂನುಗಳನ್ನು ಎರಡು ಮಾಡಿ   ದೇಶದ ಸಂಸ್ಕ್ಕತಿಯನ್ನು ಹಾಳು ಮಾಡಲು  ಪ್ರಯತ್ನಿಸುತ್ತಿರುವರಿಗೆ  ಜನಪ್ರತಿನಿಧಿಗಳು  ಮತ ಬ್ಯಾಂಕಗೋಸ್ಕರ ಕುಮ್ಮಕ್ಕು ನೀಡುತ್ತಿದ್ದಾರೆ. .ನಾವು ಸಂಘಟಿತರಾಗಿ ಜಾಗ್ರತಗೊಂಡಲ್ಲಿ  ಮಾತ್ರ   ಪರಿವರ್ತನೆಯಾಗಲು ಸಾಧ್ಯವೆಂದರು.

66 ವರ್ಷವಾದರೂ ಮಹಿಳೆಯರ  ಮೇಲೆ  ಅನ್ಯಾಯ, ಅತ್ಯಾಚಾರ, ಲವ್ಜಿಹಾದ   ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ.   ನಮ್ಮ ದೇಶದಲ್ಲಿ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ ಆದರೆ ಸರಾಯಿ ಮಾತ್ರ ಲಭ್ಯ.  ದೇಶದಲ್ಲಿ ಎಲ್ಲ  ಸಂಪನ್ಮೂಲಗಳಿದ್ದರೂ ಅವುಗಳ ಸದುಪಯೋಗವಾಗುತ್ತಿಲ್ದಲವೆಂದು ಅರೋಪಿಸಿದರು.

ದುರ್ಗಾ ಸೇನೆಯ  ರಾಜ್ಯಾಧ್ಯಕ್ಷೆ ಕಮಲಕ್ಕಾ ಜೇಡರ ಮಾತನಾಡಿ ಇಂದು ಮಹಿಳೆಯರ ಮೇಲೆ ಅನ್ಯಾಯ ಅತ್ಯಾಚಾರ ಹೆಚ್ಚಾಗುತ್ತಿದೆ. ಮಹಿಳೆಯರು  ದುರ್ಗಾವತಾರ ತಾಳಿ ಸಂಘಟಿತರಾಗಬೇಕಾಗಿದೆಯೆಂದರು.

ಸೇನೆಯ ಜಿಲ್ಲಾಧ್ಯ್ಯಕ್ಷ ಬೆಳಗಾವಿಯ ರಮಾಕಾಂತ ಕೊಂಡುಸ್ಕರ ಛತ್ರಪತಿ ಶಿವಾಜಿ ಡಾ. ಅಂಬೇಡ್ಕರರ ತತ್ವಗಳನ್ನು ಮರೆತು  ಹೆಜ್ಜೆ ಇಡುತ್ತಿದ್ದೇವೆ.   ನಾವು ಎಚ್ಚೆತ್ತು ಕೊಳ್ಳಬೇಕಾಗಿದೆ. ಎಂದರು

ಹತ್ತರಗಿಯ ಕಾರಿಮಠದ ಗುರುಸಿಧ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ  ಭಾರತೀಯರು ಸಿಂಹಾವಲೋಕನ ಮಾಡಿಕೊಳ್ಳುವದು ಅವಶ್ಯವಾಗಿದೆ ಎಂದರು.

ಸತ್ಕಾರ :    ಪ್ರಮೋದ ಮುತಾಲಿಕ ಅವರ ಮಾತೋಶ್ರೀ ಸುಮತಿ ಮುತಾಲಿಕ  ಅವರು   ಸನ್ಮಾನಿಸಲಾಯಿತು.

ಗ್ರಾಮದ ಹಿರಿಯರಾದ ಶಿವಪ್ಪಾ ಸನದಿ. ಸುನಿಲ ಮುರಕಿಭಾವಿ ಮತ್ತಿತರರು   ಉಪಸ್ಥಿತರಿದ್ದರು. ಕುಮಾರಿ ರೇಖಾ ಬಂದಾಯಿ ಭಗವದ್ಗೀತೆ ಪಠಿಸಿದರು.

ಗೋಕಾಕದ   ರಾಜು ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಣಿವಾಡ ಶಾಖೆಯ ಕಾರ್ಯಕರ್ತರು  ಪ್ರಮೋದ ಮುತಾಲಿಕ ಅವರಿಗೆ ಖಡ್ಗ ನೀಡಿ ಸತ್ಕರಿಸಿದರು.

loading...

LEAVE A REPLY

Please enter your comment!
Please enter your name here