ಸೌಲಭ್ಯಗಳು ನಿಜವಾದ ಅಂಗವಿಕಲರಿಗೆ ತಲುಪಲಿ

0
91
loading...

ರಾಮದುರ್ಗ : 28. ಅಂಗವಿಕಲರಿಗೆ ಇರುವ

ಸೌಲಭ್ಯಗಳು ನಿಜವಾದ ಅಂಗವಿಕಲರಿಗೆ ತಲುಪುವಂತೆ

ಸ್ವಯಂ ಸೇವಾ ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನ

ಮಾಡಬೇಕು ಎಂದು ಸರ್ಕಾರದ ಮುಖ್ಯ ಸಚೇತಕ

ಅಶೋಕ ಪಟ್ಟಣ ಹೇಳಿದರು.

ನಗರದ ಶಿವಮೂರ್ತೇಶ್ವರ ಸಭಾ ಭವನದಲ್ಲಿ

ಮಹಿಳಾ ಮತ್ತು ಅಂಗವಿಕಲರ ಅಭಿವೃದ್ದಿ ಸಂಸ್ಥೆಯ

ಆಶ್ರಯದಲ್ಲಿ ನಡೆದ ತಾಲೂಕಾ ಅಂಗವಿಕಲರ

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ವಿಕಲಚೇತನರಿಗೆ ಮನೆ ನಿರ್ಮಾಣಕ್ಕಾಗಿ ಮೀಸಲಿರುವ

ಸಹಾಯಧನವನ್ನು ಹಂತಹಂತವಾಗಿ ಎಲ್ಲರಿಗೂ

ದೊರಕುವಂತೆ ಕ್ರಮಕೈಗೊಳ್ಳಲಾಗುವುದು ಎಂದು

ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ತ್ರೀಯ

ಬಸವದಳದ ಗೌರವಾಧ್ಯಕ್ಷ ಆನಂದ ಚೋಪ್ರಾ

ಮಾತನಾಡಿ ಅಂಗವಿಕಲತೆ ಶಾಪವೂ ಅಲ್ಲ ಪಾಪವೂ

ಅಲ್ಲ ಅದೊಂದು ಆಕಸ್ಮಿಕ ಅದಕ್ಕಾಗಿ ಎದೆಗುಂದದೆ

ಆತ್ಮಸ್ಥೆರ್ಯದಿಂದ ಸಾಧನೆಮಾಡಿ ಸಮಾಜದಲ್ಲಿ

ಗೌರವಯುತವಾಗಿ ಬಾಳಬೆಕು ಎಂದು ಹೇಳಿದ

ಅವರು ಅನೇಕ ವಿಕಲಚೇತನರು ಸಾಧನೆಗಳನ್ನು ಮಾಡಿ

ದೇಶಕ್ಕೆ ಕೀರ್ತಿತಂದಿದ್ದಾರೆ. ಪಂಚಾಕ್ಷರಿ ಗವಾಯಿಗಳು

ಪುಟ್ಟರಾಜ ಗವಾಯಿಗಳು, ಬಸವಾನಂದ ಸ್ವಾಮಿಗಳು

ಸಾಧಕರಾಗಿ ಮೇರೆದಂತೆ ನೀವು ಸಾಧನೆ ಮಾಡಬೇಕು

ಎಂದು ಹೇಳಿದರು.

ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯರು,

ರಾಮದುರ್ಗದ ಶಾಂತವೀರ ಮಹಾಸ್ವಾಮಿಗಳು

ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ನ್ಯಾಯವಾದಿ ಎಂ. ಎಂ. ಹಿರಿಲಿಂಗನವರ, ಹಾಸ್ಯ

ಕಲಾವಿದ ರಾಜು ಬದಾಮಿ , ಎಸ್. ಜಿ. ಕಡೆಮನಿ,

ಎನ್. ಜಿ. ರಾಯನಗೌಡ್ರ, ಸಚೀನ ಯಾದವಾಡ, ಗೀತಾ

ಅಬ್ಬಿಗೇರಿ, ರೇಖಾ ಬೆಳಗಲಿ, ಪರಶುರಾಮ ಮೋಹಿತೆ

ಉಪಸ್ಥೀತರಿದ್ದರು.

ಇಂದಿರಾ ಸೊರಟಿ ಸ್ವಾಗತಿಸಿದರು, ಎಸ್. ವಿ.

ಕಲ್ಯಾಣಶೆಟ್ಟಿ ನಿರೂಪಿಸಿದರು, ಎಸ್. ಎಂ. ಸೊರಟಿ

ಪ್ರಾಸ್ಥಾವಿಕವಾಗಿ ಮಾತನಾಡಿದರು ರಮೇಶ ಮೂಲಿಮನಿ

ವಂದಿಸಿದರು.

loading...

LEAVE A REPLY

Please enter your comment!
Please enter your name here