ಹೆಂಡತಿ ನೀ ಕಾಡುತಿ

0
23
loading...

ಧಾರವಾಡ.ಜ.5: ಮನೆಗೆ ಬಾ ಎಂದು ಹೆಂಡತಿಯನ್ನು ಕರೆಯಲು ಹೆಂಡತಿಯ ತವರು ಮನಗೆ ತೆರಳಿದ್ದ ಪತಿರಾಯ ನೊಬ್ಬ ಹೆಂಡತಿ ಹಾಗೂ ಹೆಂಡತಿ ತಮ್ಮ, ತಾಯಿಯಿಂದ ಥಳಿಸಿಕೊಂಡು ಬಂದಿರುವ ವಿಚಿತ್ರ ಘಟನೆ ಶನಿವಾರ ಸಂಜೆ ಲಕ್ಷ್ಮೀಸಿಂಗನಕೇರಿಯಲ್ಲಿ ನಡೆದಿದೆ.
ರಾಜೀವಗಾಂಧಿ ನಗರದ ರಫೀಕ್ ಮಕ್ಬುಲ್ ಅವುರಂಗವಾಲೆ ಎಂಬುವವರೇ ಪತ್ನಿಯಿಂದ ಪೀಡನೆಗೆ ಒಳಗಾದವರು ಇವರು ಸುಮಾರು 5 ತಿಂಗಳ ಹಿಂದೆ ರುಕ್ಸಾನಾ ನೊಂದಿಗೆ ವಿವಾಹವಾಗಿದ್ದರು. ರುಕ್ಸಾನ ಮದುವೆಯಾದ ನಂತರ ತವರ ಮನೆಗೆ ಹೋಗಿದ್ದಳು. ಇವಳನ್ನು ಕರೆಯಲು ಶುಕ್ರವಾರ ಸಂಜೆ ರಫಿಕ್ ಹೋಗಿದ್ದಾಗ. ಗಂಡನಿಗೆ ಅವಾಚ್ಯವಾಗಿ ಬೈದಾಡಿದ ರುಕ್ಸಾನ ನೀನು ಹಣ ಮತ್ತು ಬಂಗಾರ ತೆಗೆದುಕೊಂಡು ಬಂದರೆ ಮಾತ್ರ ನಿನ್ನ ಸಂಗಡ ಬರುತ್ತೇನೆ ಎಂದು ಹೇಳಿದ್ದಲ್ಲದೆ. ಅವಳು ಮತ್ತು ಅವಳ ತಾಯಿ ಹಾಗೂ ತಮ್ಮ ಸೇರಿಕೊಂಡು ಚೆನ್ನಾಗಿ ಥಳಿಸಿದ್ದಾರೆ ಎಂದು ರಫಿಕ ಮಕ್ಬುಲ್ ಅವುರಂಗವಾಲೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ಮುಂದುವರೆದಿದೆ.

loading...

LEAVE A REPLY

Please enter your comment!
Please enter your name here