ಹೆಣ್ಣು-ಗಂಡು ಸಮಾನವಾಗಿ ಕಂಡರೆ ಭ್ರೂಣ ಹತ್ಯೆ ನಿವಾರಣೆ : ನ್ಯಾ.ನಿಂಗೇಗೌಡ

0
140
loading...

ವಿಜಾಪುರ,ಜ.4-ಇತ್ತೀಚಿನ ದಿನಗಳಲ್ಲಿ ಪಂಂರಂಂಷಂ

ಮತ್ತು ಮಹಿಳೆಯರ ಅನುಪಾತದಲ್ಲಿ ಅಂತರ

ಹೆಚ್ಚಾಗುತ್ತಲಿದ್ದು, ಇದು ಆಂತಕಕಾರಿ ವಿಷಂಂಂಂವಾಗಿದೆ.

ಜನರು ಗಂಡು ಹೆಣ್ಣಿನ ಜನನದ ಬಗ್ಗೆ ತಾರತಮ್ಯ

ಮಾಡದೇ, ಸಮನಾಗಿ ಕಾಣುವುದರ ಮೂಲಕ ಹೆಣ್ಣು

ಬ್ರೂಣ ಹತ್ಯೆ ತಡೆಯಬಹುದಾಗಿದೆ ಎಂದು ಪ್ರಧಾನ

ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ನಿಂಗೇಗೌಡ ಅಭಿಪ್ರಾಯ

ಪಟ್ಟರು.

ಇಂದು ನಗರದ ಜಿಲ್ಲಾ ಆರೋಗ್ಯ ಇಲಾಖೆಯ

ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ

ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ,

ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಹೆಣ್ಣು ಬ್ರೂಣ

ಹತ್ಯೆ ತಡೆ ಕಾಯ್ದೆ ಕುರಿತಂತೆ ಹಮ್ಮಿಕೊಂಡ ಒಂದು

ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು

ಮಾತನಾಡಿದರು.

ಮಕ್ಕಳ ಅರೋಗ್ಯದ ದೃಷ್ಟಿಯಿಂದ ಅಲಾ್ತ್ರ ಸೌಂಡ

ಯಂತ್ರದ ಸಹಾಯದೊಂದಿಗೆ ತಾಯಿ ಗರ್ಭದ ಹಂತದಲ್ಲೆ

ಲಿಂಗ ಪತ್ತೆ ಮಾಡಬಹುದು. ಆದರೆ ಈ ಕಾಯ್ದೆಯ

ಅನ್ವಯ ಸೂಚಿಸಿರುವ ಉದ್ದೇಶಿತ ಕಾರಣಗಳನ್ನು ಬಿಟ್ಟು

ಬೇರೆ ಕಾರಣಗಳಿಗಾಗಿ ಭ್ರೂಣ ಲಿಂಗ ಪತ್ರೆ ಮಾಡುವುದು

ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ.

ಹೆಣ್ಣು ಭ್ರೂಣ ಎಂದು ತಿಳಿದಾಗ ನಾಶ ಪಡಿಸುವ ಹೇಯ

ಕೃತ್ಯ ಸಮಾಜದಲ್ಲಿ ಜರುಗುತ್ತಿರುವುದು, ವಿಷಾದನೀಯ.

ಇದರಿಂದಾಗಿ ಹೆಣ್ಣು ಸಂತತಿ ಇಳಿಮುಖವಾಗಿ ಭವಿಷಂಚಿದಂ

ಸಮಾಜದಲ್ಲಿ ಲಿಂಗ ಅನುಪಾತದಲ್ಲಿ ವ್ಯತ್ಯಯವಾಗಿ

ಸಮಾಜದ ಮೇಲೆ ದುಷ್ಪರಿಣಾಮಗಳು ಬೀರುತ್ತವೆ

ಎಂದು ಅವರು ಹೇಳಿದರು.

ಬ್ರೂಣ ಹತ್ಯೆ ತಡೆಗೆ ಕಠಿಣ ಕಾಯ್ದೆ ಜಾರಿಯಲ್ಲಿದ್ದರು

ಕೇವಲ ಕಾಯ್ದೆಯಿಂದ ಸಮಾಜವನ್ನು ಬದಲಾವಣೆ

ಮಾಡಲು ಸಾಧ್ಯವಿಲ್ಲ, ಮಹಿಳೆಯರಿಲ್ಲದ ಭವಿಷಂಚಿದಂ

ಸಮಾಜದ ಬಗ್ಗೆ ಮನವರಿಕೆ ಮಾಡಿಕೊಡಬೇಕು, ಜನರ

ಮನ ಬದಲಾವಣೆಯಾಗಬೇಕು, ಹೆಣ್ಣು ಶಿಶುಗಳ ಬಗ್ಗೆ

ಸಮಾಜದಲ್ಲಿ ಗೌರವ ಹೆಚ್ಚಾಗಬೇಕು ಇದರಿಂದ ಹೆಣ್ಣು

ಬ್ರೂಣ ಹತ್ಯೆಯನ್ನು ತಡೆಯಬಹುದು. ಇದಕ್ಕೆ ವೈದ್ಯರು

ಸಮಾಜ ಸೇವಾ ಕಾರ್ಯಕರ್ತರು ಜನರಲ್ಲಿ ಜಾಗೃತಿ

ಮೂಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ

ರಿತ್ವಿಕ್ ಪಾಂಡೆ ಮಾತನಾಡಿ, ಮಹಿಳೆ ಮತ್ತು ಪಂಂರಂಂಷಂರಂ

ಅನುಪಾತದ ಅಸಮತೋಲನದಿಂದ ಮಹಿಳೆಯರ

ಮೇಲಿನ ಅತ್ಯಾಚಾರ ಹೆಚ್ಚಾಗುತ್ತದೆ. ಕುಟುಂಬದ ವ್ಯವಸ್ಥೆ

ಹದಗೆಡುತ್ತದೆ. ವಿವಾಹ ವಿಚ್ಛೇಧನ ಹೆಚ್ಚಾಗುತ್ತದೆ.

ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಸಾಮಾಜಿಕ

ಅಭದ್ರತೆಯಿಂದ ಅಪರಾಧಿಗಳಾಗುತ್ತಾರೆ. ಹೆಣ್ಣು ಮಕ್ಕಳ

ಸಂಖ್ಯೆ ಕಡಿಮೆಯಾದಲ್ಲಿ ಭವಿಷಂಚಿದಂಖಿನ್ಲಿ ಗಂಡು ಮಕ್ಕಳಿಗೆ

ವಧುಗಳ ಕೊರತೆಯುಂಟಾಗಬಹುದು. ಗರ್ಭಪೂರ್ವ

ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗಪತ್ತೆ ಶಾಸನ ಕುರಿತು

ವ್ಯಾಪಕವಾದ ಪ್ರಚಾರ, ಹೆಣ್ಣು ಮಗುವಿಗೆ ಉತ್ತಮ ಶಿಕ್ಷಣ

ನೀಡುವುದರ ಮೂಲಕ ಲಿಂಗಾನುಪಾತದ ಅಂತರ

ಕಡಿಮೆ ಮಾಡಲು ಸಾಧ್ಯ ಎಂದು ಹೇಳಿದರು.

ಗಂಡು ಮಗು ಬೇಕೆನ್ನುವ ಹಂಬಲ ಹಾಗೂ

ಮೂಢನಂಬಿಕೆಗಳಿಂದ ಭ್ರೂಣ ಹತ್ಯೆಗಳಾಗುತ್ತವೆ.ಭ್ರೂಣ

ಹತ್ಯೆ ತಡೆಗೆ ಕಠಿಣ ಕಾಯ್ದೆ ನಮ್ಮ ದೇಶದಲ್ಲಿ ಪೂರ್ಣ

ಪ್ರಮಾಣದಲ್ಲಿ ಜಾರಿಯಾಗಿಲ್ಲದಿದ್ದರೂ ಸಂಕಂಷಂಂಓ

ಪ್ರಮಾಣದಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ. ಜನರಲ್ಲಿ

ಗಂಡು ಹೆಣ್ಣಿನ ಬೇಧಭಾವವನ್ನು ತೊಡೆದುಹಾಕಬೇಕು

ಅಂದಾಗ ಮಾತ್ರ ಈ ಕಾಯ್ದೆ ಸಾರ್ಥಕತೆ

ಪಡೆದುಕೊಳ್ಳುತ್ತದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಮಹಿಳಾ ಅಧ್ಯಯನ ಕೇಂದ್ರದ

ನಿರ್ದೇಶಕಿ ಡಾ: ಆರ್.ಸುನಂದಮ್ಮ ಗರ್ಭಪೂರ್ವ

ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗಪತ್ತೆ ಶಾಸನ

ಕುರಿತು ಉಪನ್ಯಾಸ ನೀಡಿದರು. ಕಾನೂನು

ಸಲಹೆಗಾರರಾದ ಶ್ರೀಮತಿ ರಾಜೇಶ್ವರಿದೇವಿ, ಸ್ತ್ತ್ರೀರೋಗ್ಯ

ತಜ್ಞರಾದ ಡಾ: ಜ್ಯೌತಿ ಕೊರಬು, ಉಪನ್ಯಾಸಕಿ ಶ್ರೀಮತಿ

ಉಜ್ವಲಾ ಸರನಾಡಗೌಡ, ಜಿಲ್ಲಾ ಆರೋಗ್ಯ ಮತ್ತು

ಕುಟುಂಬ ಕಲ್ಯಾಣ ಅಧಿಕಾರಿ ಡಾ: ಗುಂಡಪ್ಪ, ಶಸ್ತ್ತ್ರ

ಚಿಕಿತ್ಸಕ ಆರ್.ಎಂ.ಸಜ್ಜನ, ಡಾ: ಸಿ.ವಿ.ಹಿರೇಮಠ, ವಿವಿಧ

ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.ಡಾ:

ಜಿ.ಬಿ.ಚವ್ಹಾಣ ಸ್ವಾಗತಿಸಿದರು. ಎಸ್.ಎಸ್.ಯರಗಲ್

ನಿರೂಪಿಸಿ, ವಂದಿಸಿದರು.

loading...

LEAVE A REPLY

Please enter your comment!
Please enter your name here