ಹೊಸ ವರ್ಷಕ್ಕೆ ಅರ್ಥಪೂರ್ಣ ಸ್ವಾಗತ

0
37
loading...

ಖಾನಾಪುರ:4 ಪಟ್ಟಣದ ಬೇಂದ್ರೆ ವೃತ್ತದಲ್ಲಿ ಭುವನೇಶ್ವರಿ ಗೆಳೆಯರ ಬಳಗದ ವತಿಯಿಂದ 2014ರ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿಪಿಐ ಮಹಾಂತೇಶ್ವರ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷದ ಸಂಭ್ರಮಾಚರಣೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಸ್ಬಿಐನ ನಿವೃತ್ತ ಅಧಿಕಾರಿ ಜಯಪ್ರಕಾಶ ಬಾಳಕಟ್ಟಿ, ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಹೊಸ ವರ್ಷವಾದರೂ ವಾಣಿಜ್ಯ ಹಾಗೂ ವ್ಯವಹಾರಿಕ ದೃಷ್ಟಿಯಿಂದ ಜನೇವರಿ 1ನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ. ಇಂದಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಇಂಗ್ಲಿಷ್ ಕ್ಯಾಲೆಂಡರ್ಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುತ್ತಾರೆ ಆದರೆ ಹಿಂದೂ ಸಂಪ್ರದಾಯದ ಮಾಸಗಳು, ಋುತುಗಳು ಹಾಗೂ ತಿಥಿಗಳ ಬಗ್ಗೆ ಜ್ಞಾನ ಹೊಂದಿರುವುದಿಲ್ಲ. ಜೊತೆಗೆ ಇವುಗಳ ಬಗ್ಗೆ ವಿದ್ಯಾಸಂಸ್ಥೆಗಳಲ್ಲಿಯೂ ಹೇಳಿಕೊಡುವುದಿಲ್ಲ. ನಮ್ಮ ದೇಶದಲ್ಲಿ ಹಿಂದೂ ಸಂಪ್ರದಾಯದ ಪಂಚಾಂಗವನ್ನು ಅಷ್ಟೊಂದು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಪ್ರಯತ್ನಗಳು ನಡೆದಿಲ್ಲ. ಹೀಗಾಗಿ ಅನಿವಾರ್ಯವಾಗಿ ಇಂಗ್ಲಿಷ್ ಸಂಸ್ಕ್ಕತಿಯ ಪಂಚಾಂಗವನ್ನು ಭಾರತೀಯರು ಒಪ್ಪಿಕೊಂಡಿದ್ದಾರೆ.

ಇದನ್ನು ಹಿಂದೂ ವಿರೋಧಿ ಎಂದು ಭಾವಿಸದೇ ನಮಗೆ ಒದಗಿಬಂದ ಎರಡೂ ವರ್ಷಾಚರಣೆಗಳ ಅವಕಾಶವನ್ನು ಒಂದೇ ದೃಷ್ಟಿಯಿಂದ ಸ್ವೀಕರಿಸಲು ಕರೆ ನೀಡಿದರು.

ಪಟ್ಟಣ ಪಂಚಾಯತ ಸದಸ್ಯ ಅಪ್ಪಯ್ಯ ಕೊಡೋಳಿ, ಪಿಎಸ್ಐಗಳಾದ ಪ್ರಮೋದ ಯಲಿಗಾರ ಮತ್ತು ಶ್ರೀಧರ ಸಾತಾರೆ, ಉದ್ಯಮಿ ಚಂದ್ರಶೇಖರ ಹೊಸಮನಿ, ರಾಜು ಹೊರಕೇರಿ, ಶಿಕ್ಷಕ ಪ್ರಭುದೇವ ಹಿರೇಮಠ, ಬಸವರಾಜ ಶೆಂಡೂರಿ, ಶರೀಫ್, ಉಮೇಶ್, ಬಸವರಾಜ ಹಿರೇಮಠ, ಸುಭಾಸ ಸತ್ತಿಗೇರಿ, ವೀರಭದ್ರ ಜವಳಿ ಮತ್ತಿತರರು ಹಾಗೂ ಭುವನೇಶ್ವರಿ ಗೆಳೆಯರ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹೊಸ ವರ್ಷಕ್ಕೆ ಶುಭ ಕೋರಿದರು. ಕಾರ್ಯಕ್ರಮದ ನಂತರ ಪಟ್ಟಣದ ವಿವಿಧ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಕೇಕ್ ವಿತರಿಸಿ ಶುಭ ಕೋರಲಾಯಿತು.

ಪಟ್ಟಣದ ಚುರಮರಕರ ಗಲ್ಲಿಯ ನ್ಯೂ ಅಯ್ಯಂಗಾರ್ ಬೇಕರಿ ಮತ್ತು ಸ್ವೀಟ್ಸ್ನ ಮಾಲೀಕ ಶ್ರೀನಿವಾಸ್ ಕೆ,.ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಗರಿಕರಿಗೆ ಸಿಹಿ ವಿತರಣೆಯನ್ನು ಮಾಡಿದರು. ಸ್ಪೂರ್ತಿ ಮೆಡಿಕಲ್ಸ್, ಬಸವರಾಜ ಡಿಜಿಟಲ್ ಸ್ಟುಡಿಯೋ ಹಾಗೂ ಕುಲಕರ್ಣಿ ಪಬ್ಲಿಸಿಟಿ ಹೊಸ ವರ್ಷಾಚರಣೆ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಿದ್ದವು

loading...

LEAVE A REPLY

Please enter your comment!
Please enter your name here