ಅಕ್ರಮ ಮರಳು ಸಾಗಾಟ ತಡೆಗೆ ಸಿಸಿ ಕ್ಯಾಮೆರಾ

0
18
loading...

ಕಾಗವಾಡ(ತಾ;ಅಥಣಿ): 31 ಕರ್ನಾಟಕದಿಂದ ಮಹಾರಾಷ್ಟ್ತ್ರ ರಾಜ್ಯದಲ್ಲಿ

ಅನಧಿಕೃತವಾಗಿ ಮರಳು ಸಾಗಾಟವಾಗುತ್ತಿದ್ದು, ಇದನ್ನು ತಡೆಗಟ್ಟಲು ಜಿಲ್ಲೆಯ

ಜಿಲ್ಲಾಧಿಕಾರಿಗಳು ಜಿಲ್ಲಾ ಪೋಲಿಸ್ ಪ್ರಮುಖರು ಅವರ ಸಿಬ್ಬಂದಿಯೊಂದಿಗೆ

ಕಾಗವಾಡದಲ್ಲಿ ಶುಕ್ರವಾರ ಸಂಜೆ ಭೇಟಿ ನೀಡಿ ಇಲ್ಲಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ

ಸಿಸಿ ಕ್ಯಾಮೆರಾ ಅಳವಡಿಸಿ ಕ್ರಮ ಜರುಗಿಸುವುದಾಗಿ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಎನ್.

ಜಯರಾಮ ಹೇಳಿದರು.

ಶುಕ್ರವಾರ ಸಂಜೆ ಕಾಗವಾಡದ ಗಣೇಶವಾಡಿ ರಸ್ತೆಯಲ್ಲಿ ಸಿಸಿ ಕ್ಯಾಮೆರಾ

ಅಳವಡಿಸಲು ಸ್ಥಳ ನಿಚ್ಛಿತಗೊಳಿಸಲಾಯಿತು. ಜಿಲ್ಲಾ ಪೋಲಿಸ್ ಪ್ರಮುಖರಾದ

ಡಾ.ಚಂದ್ರಗುಪ್ತ ಇವರು ಸ್ಥಳೀಯ ನಾಗರಿಕರನ್ನು ಅನಧಿಕೃತ ಮರಳು ಬಗ್ಗೆ

ಚರ್ಚಿಸಿ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷ ನಾಥಗೌಡ ಪಾಟೀಲ ಇವರನ್ನು

ವಿಚಾರಿಸಿದರು.ಕಳೆದ ಅನೇಕ ವರ್ಷಗಳಿಂದ ಹೆಚ್ಚಿನ ಭಾರದ ಮರಳು ಲಾರಿಗಳು

ಇದೇ ಮಾರ್ಗದಿಂದ ಮಹಾರಾಷ್ಟ್ತ್ರಕ್ಕೆ ಚಲಿಸುತ್ತಿವೆ. ಇದರಿಂದ ಸುಮಾರು 2 ಕೋಟಿ

ರೂ. ಶಾಸಕ ರಾಜು ಕಾಗೆ ಅವರ ಅನುದಾನದಿಂದ ರಸ್ತೆ ನಿರ್ಮಿಸಲಾಗಿದೆ. ಆದರೆ

ಸದರಿ ರಸ್ತೆ ಹದಗೆಟ್ಟು ಹೋಗಿದೆ. ಇದರ ಬಗ್ಗೆ ಎಲ್ಲ ಮಾಹಿತಿ ಅಧಿಕಾರಿಗಳಿಗೆ ಇದೆ

ಎಂದರು. ಕೆಲ ನಾಗರಿಕರು ಅನಧಿಕೃತ ಮರಳು ಸಾಗಾಟ ಬಗ್ಗೆ ಅಧಿಕಾರಿಗಳಿಗೆ

ಪ್ರಶ್ನಿಸಿ ಕಾಗವಾಡಕ್ಕೆ ಮರಳು ಬರುವಾಗ ಮೊದಲು ಅಥಣಿಯಿಂದ ಬರುತ್ತದೆ.

ಅಲ್ಲಿಯ ಅಧಿಕಾರಿಗಳಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದರು. ಇದರಲ್ಲಿ ಕೆಲ

ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದಾರೆಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ

ಪೋಲಿಸ್ ಪ್ರಮುಖರಿಗೆ ಹೇಳಿದರು. ಭಾರಿ ತೂಕದ ವಾಹನಗಳು ಪ್ರತಿದಿನ 100

ಲಾರಿಗಳು ಮರಳು ಸಾಗಾಟ ಮಾಡುತ್ತಿವೆ. ಇದು ಆರ್ಟಿಓ ಅಧಿಕಾರಿಗಳ ಗಮನಕ್ಕೆ

ಇಲ್ಲವೋ ಏನೋ ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದರು. ಕೆಲವರು ಅಧಿಕಾರಿಗಳಿಗೆ

ಮಂತ್ಲಿ ಮುಟ್ಟುತ್ತಿದೆ ಎಂದರು. ಇದೇನು ಇಲ್ಲ ಈ ಮುಂದೆ ಸಿಸಿ ಕ್ಯಾಮೆರಾ

ಅಳವಡಿಸಿ ಕರ್ನಾಟಕದಿಂದ ಮಹಾರಾಷ್ಟ್ತ್ರಕ್ಕೆ ಒಂದು ಮರಳಿನ ಹರಳು ಹೋಗಲು

ಬಿಡುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಅನಧಿಕೃತವಾಗಿ ಮರಳು ಸಾಗಾಟ ಮಾಡಲು ಮುಂದಾದರೆ ಅಂಥವರ ಮೇಲೆ

ಗುಂಡಾ ಕಾಯ್ದೆ ಪ್ರಕಾರ ಕ್ರಮ ಜರುಗಿಸುತ್ತಿದೆಂದು ಜಿಲ್ಲಾ ಪ್ರಮುಖ ಪೋಲಿಸ್

ಡಾ.ಚಂದ್ರಗುಪ್ತ ಹೇಳಿದರು. ಈ ವೇಳೆ ಅಥಣಿ ತಹಶೀಲ್ದಾರ ಅರ್ಪಣಾ ಪಾವಟೆ,

ಲೋಕೋಪಯೋಗಿ ಇಲಾಖೆ ಅಧಿಕಾರಿ ಜಿ.ಎಸ್.ಬುರ್ಲಿ, ತಾಪಂ ಅಧಿಕಾರಿ

ಎಂ.ಆರ್.ಖಾನಾಪೂರೆ ಮತ್ತಿತರರ ಅಧಿಕಾರಿಗಳಿಗೆ ಆದೇಶಿಸಿ ಇಂದು ಸಂಜೆಯಿಂದ

ಹಗಲು ರಾತ್ರಿ ಎಲ್ಲ ಇಲಾಖೆ ಅಧಿಕಾರಿಗಳು ಅಕ್ರಮ ಮರಳು ತಡೆ ಹಿಡಿಯಲು

ಅಧಿಕಾರಿಗಳ ತಂಡ ರಚಿಸಲು ಆದೇಶಿಸಿದರು.

loading...

LEAVE A REPLY

Please enter your comment!
Please enter your name here