ಕನಿಷ್ಠ ಕೂಲಿ ವೇತನ ಆಗ್ರಹಿಸಿ ಅಂಗನವಾಡಿ ನೌಕರರಿಂದ ಮನವಿ

0
27
loading...

 

ಭಟ್ಕಳ : ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿ ಎಸಿ ಆಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ಅಂಗನವಾಡಿ ನೌಕರರನ್ನು ಖಾಯಂಗೊಳಿಸಬೇಕು. ಬೇರೆಯವರಿಗೆ ಕೆಲಸವನ್ನು ವರ್ಗಾಯಿಸಬಾರದು. ಕನಿಷ್ಟ ಕೂಲಿ ವೇತನ ಜ್ಯಾರಿಗೊಳಿಸಬೇಕು. ಎಲ್ಲಾ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ ಶಿಶುವಿಹಾರ ಕೇಂದ್ರವನ್ನಾಗಿ ಮಾಡಬೇಕು. ಎಲ್ಲಾ ನೌಕರರಿಗೆ ರಜಾ ಸೌಲಭ್ಯವನ್ನು ನಿಡಬೇಕು. ವಿವಿಧ ಇಲಾಖಾ ನೇಮಖಾತಿಯಲ್ಲಿ ಅಂಗನವಾಡಿ ನೌಕರರನ್ನು ಪರಿಗಣಿಸಬೇಕು. ಸಹಾಯಕಿಯರಿಗೆ ತರಬೇತಿ ಮತ್ತು ಮಾಸಿಕ ಸಭೆ ನಡೆಸಬೇಕು. ಮರಣ ಮತ್ತು ಕಾಯಿಲೆಗಳಿಗೆ ನೀಡುತ್ತಿರುವ ಹಣವನ್ನು ಹೆಚ್ಚಿಸಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗಿದೆ. ಮನವಿ ಸ್ವೀಕರಿಸಿದ ಸಹಾಯಕ ಕಮೀಷನರ್ ಕೂರ್ಮರಾವ್ ಮತ್ತು ತಹಶೀಲ್ದಾರ ಜಿ ಎಂ ಬೋರ್ಕರ್ ಬೇಡಿಕೆ ಪಟ್ಟಿಯನ್ನು ಸರಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಸುಭಾಸ್ ಕೊಪ್ಪಿಕರ ಮಾತನಾಡಿ ಸರಕಾರ ಅಂಗನವಾಡಿ ನೌಕರರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸುಧಾ ಭಟ್ಟ, ಗೀತಾ ನಾಯ್ಕ, ಪುಷ್ಪಾವತಿ ನಾಯ್ಕ, ಮಾಸ್ತಿ ನಾಯ್ಕ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ವ್ಯೆದ್ಯಕೀಯ ಲೋಕಕ್ಕೆ ಸವಾಲಾದ ಖಾಯಿಲೆ

ಹಾಸಿಗೆ ಹಿಡಿದ 9ವರ್ಷದ ಬಾಲಕಿ ಹಾಸಿಗೆ ಪಾಲು

(ನಾಗರಾಜ ಧೈವಜ್ಞ )

ಮುಂಡಗೋಡ: ಶಾಸಕರ ಮಾದರಿ ಹಿ.ಪ್ರಾ.ಶಾಲೆಯಲ್ಲಿ ಫರವ್ಹೀನ ಕಾಫೀರ ದರ್ಗಾವಾಲೆ 9ವ 4ನೇಯ ತರಗತಿಯಲ್ಲಿ ಕಲಿಯುತ್ತಿದ್ದಳು.ತಂದೆ ಕಾಫೀರ ದರ್ಗಾವಾಲೆ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದು,ತಾಯಿ ಹಾಫೀಜಾ ಮನೆನಿತ್ಯ ಕೆಲಸದಲ್ಲಿ ತೋಡಗಿದ್ದವಳು.ಇವರಿಗೆ ನಾಲ್ಕು ಮಕ್ಕಳಿದ್ದು ಅವರಲ್ಲಿ ಒಬ್ಬ ಮಗಳಿಗೆ ತಿಳಿಯಲಾರದ ಕಾಯಿಲೆ ವ್ಯಾಪಿಸಿಕೋಂಡಿದೆ. ಅವಳು ಹುಟ್ಟಿದಾಗಿನಿಂದ ಚಲೋನ ಇದ್ದಳರ್ರಿ ಹಿಂಗ್ಯಾಕ ಆಗಾಕುಂತೈತಿ,ಏನು ಮಾಡಬೇಕಂತ ನಮಗೂ ಗೊತ್ತಾಗವಲ್ಲರಿ, ಆ ದೇವರು ಹಿಂಗ ಕಾಯಿಲೆ ಇರೋ ಮಗಳಿಗೆ ನಮ್ಮ ಮಡಿಲಿಗೆ ಹಾಕ್ಯಾನ ನೋಡ್ರಿ ಎಂಬ ಮಾತುಗಳು ತಾಯಿಯ ಬಾಯಿಂದ ಬಂದಾಗ  ಯಾರ ಕರಳು ಹಿಂಡಲಾರದು. ಮುಂಡಗೋಡ ಪಟ್ಟಣದಲ್ಲಿ ಶೀಬಾ ಮತ್ತು ವಸಂತ ರಾಠೋಡವರ ಮಗ ಹೇಮಂತ 9ವ) ಸಪ್ಟಂಬರ್ 2008 ರಲ್ಲಿ  ಹಾಸಿಗೆ ಪಾಲಾಗಿದ್ದಾ ಸದ್ಯ ದೈಹಿಕವಾಗಿ ಚೇತರಿಸಿಕೋಂಡಿದ್ದಾನೆ. ಆದರೆ ಮಾನಸಿಕವಾಗಿ ಚೇತರಿಸಿಕೋಳ್ಳಬೆಕಾಗಿದೆ. ಹೇಮಂತ ಪ್ರಾರಂಬದ ಹಂತದಲ್ಲಿ ಕಾಣಿಸಿಕೋಂಡ ರೋಗ ಲಕ್ಷಣಗಳು ಈಗ ಫರವ್ಹೀನಳಿಗೆ  ಕಾಣಿಸಿಕೊಂಡಿರುತ್ತದೆ. ವೈದ್ಯರಿಂದ ಅರಿಯಲಾಗದ ವೈದ್ತಕೀಯ ಲೋಕಕ್ಕೆ  ಸವಾಲಾದ ಕಾಯಿಲೆಯಿಂದ ಬಳಲುತ್ತಿರುವ ಬಾಲಕ ಹೇಮಂತ ರಾಠೋಡ,ಬಾಲಕಿ ಫರವ್ಹೀನ ದರ್ಗಾವಾಲೆ ನತದೃಷ್ಟ ಮಕ್ಕಳು.ನಾಲ್ಕು ತಿಂಗಳಿಂದ  ಬಾಲಕಿಯ ಶರೀರದ ಭಾಗಗಳು ಸ್ವಾಧೀನ ಕಳೆದುಕೋಂಡು ಸ್ಥಿತಿಯಲ್ಲಿ ಜೀವಿಸುತ್ತಿದ್ದಾಳೆ.ತಂದೆ ತಾಯಿಯ ಮುದ್ದಿನ ಮಗಳು ನರಕಯಾತನೆ ಅನುಭವಿಸುತ್ತಿರುವ ಮುಗ್ದ ಮಗಳು ಕ್ಷಣಕ್ಷಣಕೋಮ್ಮೆ ಮೂರ್ಛೆ ಹೋದಂತೆ ,ಇಡೀ ದೇಹವನ್ನು ರಬ್ಬರಂತೆ ಎಳೆಯುತ್ತಿರುತ್ತಾಳೆ. ಕತ್ತಿನ ಹಾಗೂ ಸೋಂಟದ ಸ್ವಾಧೀನ ಕಳೆದುಕೊಂಡಂತ್ತಾಗಿದೆ ಗಾಬರಿಗೊಂಡ ಪಾಲಕರು ಪ್ರತಿಷ್ಟವಾದ ವೈದ್ಯರ ಬಳಿ ತೋರಿಸಿ ಇಡೀ ದೇಹ ಸ್ಕ್ಯಾನ ಮಾಡಿಸಿದರೂ ಯಾವದೆ ದೋಷ ಕಂಡುಬಂದಿಲ್ಲಾ ಎನ್ನಲಾಗಿದೆ. ಕೆಲ ವೈದ್ಯರು ಮೆದುಳಿನ ಸಮಸ್ಯ, ಇನ್ನು ಕೆಲ ವೈದ್ಯರು ನರದೋಷ ಹಾಗೂ ವೈರಸ್ನಿಂದ ಹೀಗಾಗಿದೆ ಎಂದು ಶಂಕೆ ವ್ಯಕ್ತ ಪಡಿಸಿ ಚಿಕಿತ್ಸೆ ನೀಡಿದ್ದಾರೆ.ಆದರೆ ಯಾವ ಚಿಕಿತ್ಸೆಯೂ ಫಲಕಾರಿಯಾಗಿಲ್ಲ. ಸದ್ಯ ಮಾತನಾಡುವದನ್ನು,ಗುರುತಿಸುವದನ್ನು ಮರೆತ್ತಿದ್ದಾಳೆ.ದಿನದಿಂದ ದಿನಕ್ಕೆ ಶರೀರ ಕ್ಷೀಣಿಸುತ್ತಾ ಹೊಗುತ್ತಿದೆ. ನಾಟಿ ವೈದ್ಯರ  ಮೊರೆ ಹೊದರೂ ಗುಣವಾಗಲಿಲ್ಲಾ. ಹೀಗಾಗಿ ಅಸಹಾಯಕತೆಯಿಂದ ಕೈ ಚೆಲ್ಲಿರುವ ಪಾಲಕರು ಹೇಗಾದರೂ ಮಾಡಿ ಮಗಳನ್ನು ಗುಣಪಡಿಸುವಂತೆ ದೇವರಲ್ಲಿ ಮೋರೆ ಹೊಗಿದ್ದಾರೆ ಇದಕೆ ಪರಿಹಾರ ಕಂಡುಕೋಂಡು ಮಕ್ಕಳಿಗೆ ಜೀವದಾನ ನೀಡಲಿಚ್ಛಿಸುವರು ವೈದ್ಯರು ಮುಂದೆ ಬರಬೇಕಿದೆ ಫರವ್ಹೀನಳ ಪಾಲಕರು ಕಡುಬಡತನದವರಾಗಿದ್ದು ಜೀವನ ದೂಗಿಸುವದೆ ಕಷ್ಟ ಇಂತಹದರಲ್ಲಿ ತಮ್ಮ ಮಗಳ ಖರ್ಚುಗಳನ್ನು ಯಾರು ಬರಿಸುವರು ಎಂಬ ನೋವು- ಚಿಂತೆ ಕಾಡುತ್ತಿದೆ. ನೆರವು ನೀಡಲಿಚ್ಛಿಸುವರು 9880853146 ಅಥವಾ 9483939694.

loading...

LEAVE A REPLY

Please enter your comment!
Please enter your name here