ಜೂಜುಕೋರರ ಬಂಧನ ಕರ್ತವ್ಯ ಲೋಪ ಎಸಗಿದ ಸಿಪಿಐ ಅಮಾನತು

0
28
loading...

ಅಥಣಿ : 31 ಪಟ್ಟಣದ ಹೊರವಲಯದ ಚಮಕೇರಿ ರಸ್ತೆಯ

ತೋಟದಲ್ಲಿ ಜೂಜಾಟ ನಡೆಸುತ್ತಿರುವ ಸ್ಥಳಕ್ಕೆ ಬೆಳಗಾವಿ ಗುಪ್ತಚರ

ಪೊಲೀಸರು ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿರುವ 32 ಜನರನ್ನು

ಬಂಧಿಸಿದ ಘಟನೆ ಶುಕ್ರವಾರ ಸಾಂಯಕಾಲ ಜರುಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ

ಸ್ಥಳೀಯ ಪಿ.ಎಸ್.ಐ ಶ್ರೀಶೈಲ ಕೌಜಲಗಿಯವರನ್ನು ಜಿಲ್ಲಾ ಪೊಲೀಸ್

ವರಿಷ್ಠಾಧಿಕಾರಿ ಅಮಾನತ್ತುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ

ಈ ಪ್ರಕರಣದಲ್ಲಿ 25 ದ್ವಿಚಕ್ರ ವಾಹನ, ಎರಡು ಕಾರುಗಳು, 60

ಕ್ಕಿಂತ ಹೆಚ್ಚು ಮೊಬೈಲ್ ಸೇರಿದಂತೆ ಸುಮಾರು ಲಕ್ಷಾಂತರ ರೂ ನಗದು

ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಪೊಲೀಸರು ತಮ್ಮ ವಶಕ್ಕೆ

ತೆಗೆದುಕೊಂಡು ಅಥಣಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು

ಬೆಳಗಾವಿಯಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ

loading...

LEAVE A REPLY

Please enter your comment!
Please enter your name here