ಬೋಧಕೇತರ ಹುದ್ದೆಗಳ ನೇಮಕಾತಿಗೆ ಆಗ್ರಹ

0
14
loading...

ಬೆಳಗಾವಿ:31 ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಖಾಲಿ ಇರುವ

ಬೋಧಕೇತರ ಹುದ್ದೆಗಳ ನೇಮಕಾತಿಯ ಪುನಃ ಪ್ರಾರಂಭಿಸುವಂತೆ

ಒತ್ತಾಯಿಸಿ ಶುಕ್ರವಾರ ರಾಣಿ ಚನ್ನಮ್ಮ ವಿವಿಯ ಬೋಧಕೇತರ

ಹುದ್ದೆಗಳ ಅಭ್ಯರ್ಥಿಗಳ ಒಕ್ಕೂಟದಿಂದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ

ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಕಳೆದ ವರ್ಷ

ಅರ್ಹತಾ ಪರೀಕ್ಷೆಯನ್ನು ನಡೆಸಿ ಉತ್ತಿರ್ಣರಾದ ಅಭ್ಯರ್ಥಿಗಳಿಗೆ

ಜೂನ ತಿಂಗಳಲ್ಲಿ ಸಂದರ್ಶನ ನಡೆಸುವುದಾಗಿ ಹೇಳಿ ಸರಕಾರದ

ಆದೇಶದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು ನೇಮಕಾತಿಯನ್ನು

ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸಂದರ್ಶನಕ್ಕೆಂದು

ಹೊದ ಅಭ್ಯರ್ಥಿಗಳನ್ನು ಮರಳಿ ಕಳಿಸಿದ್ದಾರೆ ಇದರ ಬಗ್ಗೆ ಮಾನ್ಯ

ಮುಖ್ಯಮಂತ್ರಿ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು

ಇಲ್ಲಿಯವರೆಗೂ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ಮನವಿಯಲ್ಲಿ

ಆರೋಪಿಸಿದ್ದಾರೆ.

ಇದರ ಪ್ರಯುಕ್ತ ಶಿಕ್ಷಣ ಸಚಿವರು ಹಾಗೂ ಉನ್ನತ ಶಿಕ್ಷಣ

ಇಲಾಖೆಯ ಸಚಿವರಿಗೆ ಹಾಗೂ ಉಸ್ತುವಾರಿ ಸಚಿವರುಗಳಿಗೆ ಮನವಿ

ಸಲ್ಲಿಸಿದ್ದರೂ ವಿಶ್ವವಿದ್ಯಾಲಯ ಇದುವರೆಗೆ ನೇಮಕಾತಿ ಪ್ರಕ್ರಿಯೆಯನ್ನು

ಪ್ರಾರಂಭಿಸಿಲ್ಲ ಆದಷ್ಟು ಬೇಗ ಈ ವಿಷಯವನ್ನು ಸರಕಾರದ

ಗಮನಕ್ಕೆ ತಂದು ಪ್ರತಿಭಾವಂತ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ

ಕೊಡಬೇಕೆಂದು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

loading...

LEAVE A REPLY

Please enter your comment!
Please enter your name here