ವೃದ್ದಾಪ್ಯ ಮತ್ತು ಸಂದ್ಯಾ ಸುರಕ್ಷಾ ವೇತನ 2000 ರೂ. ನೀಡುವಂತೆ ಒತ್ತಾಯ

0
101
loading...

ಹುಬ್ಬಳ್ಳಿ ,ಫೆ.12 : ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಂಗವಿಕಲರಿಗೆ, ವೃದ್ದಾಪ್ಯ ಹಾಗೂ ಸಂದ್ಯಾ ಸುರಕ್ಷಾ ವೇತನ 2000 ರೂ. ನೀಡುವಂತೆ ಆಗ್ರಹಿಸಿ, ಜೈ ಭೀಮ ಸೇನಾ ಸಂಘಟನೆ ತಹಸಿಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ತಹಸಿಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿದರು.

ಬುಧವಾರ ತಹಸಿಲ್ದಾರ ಕಚೇರಿ ಮುಂದೆ ಜೈ ಭೀಮ ಸೇನಾ ಶಹರ ಘಟಕ ಅಧ್ಯಕ್ಷ ಸುಭಾಸ ಮುತ್ತಗಿ ಅವರ ನೇತೃತ್ವದಲ್ಲಿ ಶಹರ ಘಟಕದ ವಿವಿಧ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು ನೊಂದ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರಕಾರದ ವಿರುದ್ಧ ತಮ್ಮ ಆಕ್ರೌಶ ವ್ಯಕ್ತ ಪಡಿಸಿದರು.

ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಅಂಗವಿಕಲರಿಗೆ, ವೃದ್ಧರಿಗೆ ಮತ್ತು ಸಂದ್ಯಾ ಸುರಕ್ಷಾ ವೇತನ 400 ರೂ. ನೀಡುತ್ತ ಬಂದಿದ್ದು, ಕಳೆದ ವರ್ಷದಿಂದ 500 ರೂ ನೀಡುತ್ತಿದೆ. ಆದರೇ ಇಂದಿನ ದಿನಗಳಲ್ಲಿ 500 ರೂ. ಗೆ ಎನು ಬರುತ್ತದೆ. ಅದರಿಂದ ಒಂದು ತಿಂಗಳು ಅವರು ಜೀವನ ಸಾಗಿಸುವುದು ದುಸ್ತರವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳು, ನೌಕರಸ್ತರು, ಸಂಸ್ಥೆಯವರು, ರೈತರು, ರಾಜಕಾರಣಿಗಳು, ಮಠಾಧೀಶರು ತಮ್ಮ ಅನುಕೂಲಕ್ಕಾಗಿ ಸರಕಾರದ ವಿರುದ್ದ ಘೋಷಣೆ ಕೂಗುತ್ತ ಪ್ರತಿಭಟನೆ ಮಾಡಿ, ತಮ್ಮ ಬೇಡಿಕೆಗಳನ್ನು ಇಡೇರಿಸಿಕೊಳ್ಳುತ್ತಾರೆ. ಮುಗ್ದ ಅಂಗವಿಕಲ, ವೃದ್ಧರು ಹಾಗೂ ಸಂದ್ಯಾ ಸುರಕ್ಷಾ ಅಡಿಯಲ್ಲಿ ಬರುವವರು ಯಾರನ್ನು ಕೇಳಬೇಕು? ತಮ್ಮ ಅಳಲನ್ನು ಯಾರಿಗೆ ಹೇಳಬೇಕು? ಅಧಿಕಾರಿಗಳಿಗೆ, ಪ್ರಜಾಪ್ರತಿನಿಧಿಗಳಿಗೆ ಇವರ ಗೋಳು ಕೇಳುವವರ್ಯಾರು? ಸರಕಾರಕ್ಕೆ ಇವರ ಸಂಕಷ್ಟ ಕಾಣುತ್ತಿಲ್ಲವೆ? ಎಂದು ಆರೋಪಿಸಿದ ಪ್ರತಿಭಟನಾಕಾರರು, ಮುಖ್ಯಮಂತ್ರಿಗಳು ಕೂಡಲೇ ಜಾರಿಗೆ ತರುವಂತೆ ಆಗ್ರಹಿಸಿದರು.

ದೇವರ ಅವಕೃಪೆಗೆ ಕಾರಣರಾದ ಅಂಗವಿಲರು, ವೃದ್ದಾಪ್ಯದಲ್ಲಿ ಜೀವನ ಸಾಗಿಸುವದೇ ದುಸ್ತರವಾಗಿರುವ ಈ ದಿನಗಳಲ್ಲಿ 500 ರೂ. ಸಾಲದು, ಆಹಾರ ಪದಾರ್ಥಗಳ ಬೆಲೆ ಗಗನಕ್ಕೆರಿದ್ದು, ಮುಖ್ಯಮಂತ್ರಿಗಳು ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದು ಕೂಡಲೇ ಕ್ರಮ ಕೈಗೊಂಡು, 2000 ರೂ ವೇತನ ಜಾರಿಗೆ ತಂದು ನೊಂದವರ ಬದುಕಿಗೆ ಆಶಾಕಿರಣವಾಗಲಿ ಎಂದು ಜೈ ಭೀಮ ಸೇನಾ ಸಂಘಟನೆ ಮನವಿಯಲ್ಲಿ ಕೋರಿದೆ.

ಜೈ ಭೀಮ ಸೇನಾ ಶಹರ ಘಟಕ ಅಧ್ಯಕ್ಷ ಸುಭಾಸ ಮುತ್ತಗಿ ಅವರ ನೇತೃತ್ವದಲ್ಲಿ ಬಡವರ, ದೀನ ದಲಿತರ, ದುರ್ಬಲರ ದ್ವನಿಯಾಗಿ, ಸತತ 11 ವರ್ಷಗಳಿಂದ ಭ್ರಷ್ಟರ ವಿರುದ್ದ, ವಿವಿಧ ದುರಾವಸ್ಥೆ ವಿರುದ್ದ, ದುರಾಡಳಿತದ ವಿರುದ್ದ ಜೈ ಭೀಮ ಸೇನಾ ಹೋರಾಟ ಮಾಡುತ್ತ ಬಂದಿದ್ದು, ಮುಖ್ಯಮಂತ್ರಿಗಳು ಬೇಡಿಕೆಗಳನ್ನು ತಕ್ಷಣ ತರುವಂತೆ ಆಗ್ರಹಿಸಿದ್ದು, ಕ್ರಮ ಕೈಗೊಳ್ಳದಿದ್ದರೇ ರಾಜ್ಯದ್ಯಂತ ಹೋರಾಟ ಮಾಡುವುದಾಗಿ ಸರಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ಪ್ರತಿಭಟನಾಕಾರರು ನೀಡಿದ್ದಾರೆ.

ರವಿ ಹನುಮಸಾಗರ, ದ್ಯಾಮಣ್ಣ ಡೊಂಗಿ, ನಿಜಾಮುದ್ದೀನ ಮನಿಯಾರ, ರಾಮು ಸೇಲಂ, ಕಿರಣ ಕಮತರ, ನಿಜಾಮುದ್ದೀನ ಮುಲ್ಲಾ, ದಾವಲಸಾಬ ಅಂಗಡಿ, ಭಾರತಿ ಮುತ್ತಗಿ, ಪುಷ್ಪಾ ರೀತ್ಯ, ಗಂಗಮ್ಮ ವಾಲ್ಮೀಕಿ, ನಿರ್ಲಲಾ ಮಳಗೌಡ್ರ, ಹಾಗೂ ಕಾರ್ಯಕರ್ತರು, ಮಹಿಳೆಯರು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here