ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನ ಮಾಲಿಕೆ ಪ್ರಾರಂಭ

0
78
loading...

ಹರಗುರು ಶ್ರೀಗಳ ಶ್ರೀಕಾರ; ಪ್ರವಚನಕ್ಕೆ ಜನ ಸಾಗರ

ಕಾರಟಗಿ: ನಗರದಲ್ಲಿ ಇದೆ ದಿನಾಂಕ 27ನೇ ಜನೇವರಿ 2014 ರ  ಸೋಮವಾರ ದಂದು ನಾಡಿನಾದ್ಯಾಂತಹ ವಿಶಿಷ್ಠಿ ಪ್ರವಚನಕ್ಕೆ ಹೆಸರಾದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ಪ್ರವಚನ ಕಾರ್ಯಕ್ರಮ ಇಲ್ಲಿನ ಸರಕಾರಿ ಪ್ರೌಢಶಾಲೆ ಬೃಹತ್ ಮೈದಾನದಲ್ಲಿ ಸೋಮವಾರ ಸೂರ್ಯ ಉದಯಕ್ಕೊ ಮುಂಚೆ ಜಿಲ್ಲೆಯ ಹರಗುರು ಚರಮೂರ್ತಿಗಳು ತಿಂಗಳ ಕಾಲ ನಡೆಯುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಧ್ಯಾತ್ಮಿಕ ಬೆಳಕು ಚೆಲ್ಲುವ ಪ್ರವಚನ ಕಾರ್ಯಕ್ರಮ ಪ್ರಾರಂಭಕ್ಕೆ ಅಧಿಕೃತವಾಗಿ ಶ್ರೀಕಾರ ಹಾಕಿದರು. ನೆರೆದಿದ್ದ ಅಪಾರ ಜನಸ್ತೌಮದ ನಡುವೆ ಇದ್ದ ಹರಗುರು ಚರಮೂರ್ತಿಗಳೆಲ್ಲ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಡಿನಲ್ಲಿ ಅತ್ಯಂತ ಹೆಚ್ಚು ಮತ್ತು ಅತ್ಯುತ್ತಮ ತಳಿಯ ಭತ್ತವನ್ನು ಬೆಳೆಯುವ ಕೊಪ್ಪಳ-ರಾಯಚೂರು ಜಿಲ್ಲೆಯ ತುಂಗಭದ್ರೆಯ ಈ ನೆಲ ಭತ್ತದ ಕಣಿಜ. ಈಗ ಈ ನೆಲದಲ್ಲಿ ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನ ನಡೆಯುವ ಮೂಲಕ ಈ ನೆಲದಲ್ಲಿ ಬತ್ತದ ಜೊತೆಗೆ ಈಗ ಭಕ್ತಿ ಬೆಳೆಯಬೇಕಾಗಿದೆ ಎಂದರು.

ಬಿಸಿಲ ನಾಡು ಬತ್ತ ಬೆಳೆಯುವ ಈ ಭೂಮಿಯಲ್ಲಿ ತುಂಗೆ ಹರಿದು ತಂಪು ನೀಡಿದ್ದಾಳೆ. ಈಗ ಜ್ಞಾನಗಂಗೆ ಹರಿದು ಮನುಷ್ಯರ ಮನಸ್ಸು ವಿಕಸನವಾಗಬೇಕಾಗಿದೆ ಎಂದರು. ಭರತ ಭೂಮಿಯಲ್ಲಿ ಹರಗುರುಗಳು, ಋುಷಿಗಳು, ಸಂತರು ಶರಣರೆಲ್ಲ ಪ್ರಯತ್ನ, ತಪಸ್ಸು ಮಾಡಿದ್ದು ಮನುಷ್ಯ ವಿಕಸನವಾಗಲಿ ಎಂದು. ಈಗ ಮಾನವ ವಿಕಾಸಗೊಳ್ಳಬೇಕಾಗಿದೆ. ಜಗತ್ತಿಗೆ ಸೂರ್ಯನ ಕಿರಣ, ನೀರು ಬೆಳಕು ಬೇಕು ಹಾಗೆಯೇ ಮನುಷ್ಯನಿಗೆ ಜ್ಞಾನದ ಬೆಳಕು, ಜ್ಞಾನದ ನೀರು ಬೇಕಾಗಿದೆ. ಮಾನವ ವಿಕಸವಾಗಲು ಈಗ ಕಾಲಪಕ್ವಗೊಂಡಿದೆ.

ಈ ನೆಲದ ಶ್ರೇಷ್ಠ ಪ್ರವಚನಕಾರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿ ವಿಶಿಷ್ಠಿತೆ, ವಿಶೇಷ ಪ್ರವಚನಗಳಿಂದ ಮನೆಮಾತಾಗಿದ್ದಾರೆ. ಅವರ ಪ್ರವಚನ ಮನುಷ್ಯನ ವಿಕಸನಗೊಳಿಸುತ್ತದೆ. ಅನ್ನ ಅಕ್ಷರ ದಾಸೋಹದ ಮೂಲಕ ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗಳ ಹೆಸರು ಮೊದಲಾದರೆ, ಪ್ರವಚನ ದಾಸೋಹದ ಮೂಲಕ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಮೊದಲಿಗರು. ಮಾನವ ಜ್ಞಾನ ಬಿತ್ತುವ ಶ್ರೀಗಳ ಪ್ರವಚನ ಎಲ್ಲರಿಗೂ ಇಂದು ಅತ್ಯವಶ್ಯಕ. ಬದುಕಿನ ಅನ್ವೇಷಣೆ ಸೃಷ್ಠಿ ಮಾಡುವ ಧರ್ಮ ಪ್ರವರ್ತಕರು ಇವರು ಎಂದು ಸಿದ್ದೇಶ್ವರ ಸ್ವಾಮೀಜಿಗಳ ಕುರಿತು ಗವಿಶ್ರೀಗಳು ಮಾತನಾಡಿದರು.

ಗಂಗಾವತಿಯ ಡಾ.ಕೊಟ್ಟೂರೇಶ್ವರ ಸ್ವಾಮೀಜಿ, ಕನಕಗಿರಿಯ ಡಾ.ಚೆನ್ನಮಲ್ಲ ಸ್ವಾಮೀಜಿ, ಹೆಬ್ಬಾಳದ ನಾಗಭೂಷಣ ಸ್ವಾಮೀಜಿ, ಮರಳಿಯ ಮಲ್ಲಿಕಾರ್ಜುನ ಸ್ವಾಮೀಜಿ, ಸೂಳೇಕಲ್ ಶ್ರೀ ಭುವನೇಶ್ವರಯ್ಯತಾತ, ಮಸ್ಕಿ ರುದ್ರಮುನಿ ಸ್ವಾಮೀಜಿ, ಮರಳಸಿದ್ದಯ್ಯಸ್ವಾಮೀ ಹಿರೇಮಠ, ಬಹ್ಮಕುಮಾರಿ ಡಾ.ರೇಖಾ ಅವರು ಮಾತನಾಡಿ ಮನುಷ್ಯನಿಗೆ ಜ್ಞಾನಾರ್ಜನೆ ಆಗಬೇಕಾಗಿದೆ. ಎಲ್ಲರಿಗೂ ಈಗ ಪ್ರಚವನ ಕೇಳುವ ಅಗತ್ಯತೆ ಇದೆ ಎಂದರು.

ಶ್ರೀ ಸಿದ್ದೇಶ್ವರ ಸ್ವಾಮೀಜಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಶ್ರೀಗಳು ಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನ ಆಲಿಸಲು ನೀವೆಲ್ಲ ಅದೃಷ್ಠವಂತರು ಎಂದು ನೆರದಿದ್ದ ಅಪಾರ ಜನಸ್ಥೌಮಕ್ಕೆ ಸಂದೇಶ ನೀಡಿದರು.

ನಿಗದಿ ಸಮಯ ಬೆಳಗ್ಗೆ 6ಕ್ಕೆ ಈ ಕಾರ್ಯಕ್ರಮ ನಡೆಯಿತು. ಸ್ಥಳೀಯ ಜ್ಞಾನ ದಾಸೋಹ ಸೇವಾ ಸಮಿತಿ ಬೃಹತ್ ಮೈದಾನದಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಿ ಜಿಲ್ಲೆಯ ವಿವಿಧಡೆಯಿಂದ ಪ್ರವಚನ ಕೇಳಲು ಆಗಮಿಸಿದ್ದ ನೂರಾರು ಜನರ ಪ್ರಸಂಶೆಗೆ ಪಾತ್ರವಾಯಿತು.

ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳಿ ಸೇರಿದಂತೆ ಕೊಪ್ಪಳದ ವಿವಿಧ ಇಲಾಖೆ ಅಧಿಕಾರಿಗಳು ಪ್ರವಚನ ಕೇಳಲು ಆಗಮಿಸಿದ್ದರು. ಈ ಪ್ರವಚನ ಮಾಲಿಕೆ ಸವಿನೆನಪಿಗಾಗಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಗಳೆಲ್ಲ ಸಸಿ ನೆಟ್ಟು ಇದು ಮರವಾಗಿ ಬೆಳೆಯಲಿ, ಪಟ್ಟಣದ ಕೀರ್ತಿ ಇನ್ನು ಎತ್ತರಕ್ಕೆ ಹಬ್ಬಲಿ ಎಂದು ಶುಭಕೋರಿದರು. ಅಮರೇಶ ಮೈಲಾಪೂರ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here