ಸಂಪಾ ಬಂಧಿಸುವಂತೆ ಪ್ರತಿಭಟನೆ

0
27

ಸರಕಾರದ ವಿಳಂಬ ನೀತಿ ಖಂಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಲ್ಲು

loading...

ಬೆಳಗಾವಿ: 30, ನಾಡ ವಿರೋಧಿ ಎಮ್ಇಎಸ್ ಶಾಸಕ

ಸಂಭಾಜಿ ಪಾಟೀಲ ಅವರು ಕಾನೂನು ಬಾಹಿರ ಮಟ್ಕಾ ಮತ್ತು

ಜೂಜು ದಂಧೆಗಳನ್ನು ತಮ್ಮ ಫಾರ್ಮಹೌಸ್ನಲ್ಲಿ ನಡೆಸುತ್ತಿದ್ದು

ಅವರ ಮೇಲೆ ಕ್ರಮಕೈಗೊಳ್ಳಲು ವಿಳಂಬ ನೀತಿ ಅನುಸರಿಸುತ್ತಿರುವ

ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಮನವಿ ನೀಡಲು ಬಂದ

ಕರವೆ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ

ಕಚೇರಿಗೆ ಕಲ್ಲು ತೂರಾಟ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಸಂಭಾಜಿ ಪಾಟೀಲ ಅವರನ್ನು ಗಡಿಪಾರು ಮಾಡಬೇಕೆಂದು

ಒತ್ತಾಯಿಸಿ ಕಳೆದ 15 ದಿನಗಳಿಂದ ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ

ಮನವಿ ಸಲ್ಲಿಸಿದರೂ ಕ್ರಮಕೈಗೊಂಡಿಲ್ಲ ಎಂದು ಆಕ್ರೌಶ

ವ್ಯಕ್ತಪಡಿಸಿದ ಕರವೆ ಕಾರ್ಯಕರ್ತರು ಏಕಾಏಕಿ

ಜಿಲ್ಲಾಧಿಕಾರಿ ಕಚೇರಿಗೆ ಕಲ್ಲು ತೂರಿದಾಗ ಕೆಲ

ಕಾಲ ಉದ್ವಿಗ್ನ ವಾತಾವರಣ ಜಿಲ್ಲಾಧಿಕಾರಿ ಕಚೇರಿ

ಆವರಣದಲ್ಲಿ ನಿರ್ಮಾಣವಾಗಿತ್ತು.

ತಕ್ಷಣ ಸ್ಥಳಕ್ಕಾಗಮಿಸಿದ ಮಾರ್ಕೇಟ್ ಪೊಲೀಸರು

ಆಕ್ರೌಶಿತ ಕಾರ್ಯಕರ್ತರನ್ನು ತಮ್ಮ ವಶಕ್ಕೆ

ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ

ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು

ಸಂಪಾ ಅವರನ್ನು ಗಡಿಪಾರು ಮಾಡುವಂತೆ ಹಲವು ಕನ್ನಡ

ಪರ ಸಂಘಟನೆಗಳು ಹೋರಾಟ ಮಾಡಿದರೂ ಶಾಸಕರ

ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಡಳಿತ ಕಣ್ಣುಮುಚ್ಚಿ

ಕುಳತ್ತಿದೆ ಎಂದು ಆರೋಪಿಸಿದರು. ಸಾಮಾನ್ಯ ವ್ಯಕ್ತಿ ಜೂಜು

ಆಡುವಾಗ ಸಿಕ್ಕಿಬಿದ್ದರೆ ಆತನ ಮೇಲೆ ಕ್ರಮ ಕೈಗೊಳ್ಳುವ

ಪೊಲೀಸರು ಎಮ್ಇಎಸ್ ಶಾಸಕನ ವಿರುದ್ದ ದಾಖಲೆ ಇದ್ದರೂ

ಸಹಿತ ಅವರ ಮೇಲೆ ಯಾವುದೇ

ಕ್ರಮ ಕೈಗೊಳ್ಳದೆ ಇದದ್ದು ಕನ್ನಡಿಗರಿಗೆ

ಅವಮಾನ ಮಾಡಿದಂತೆ ಇದರ

ಪರಿಣಾಮವನ್ನು ಮುಂದಿನ ದಿನಗಳಲ್ಲಿ

ಕರವೆಯಿಂದ ಕಾಂಗ್ರೆಸ್ ಸರಕಾರದ ಶವ ಯಾತ್ರೆ

ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರವೆ ಕಾರ್ಯಕರ್ತರಾದ ಜಿಲ್ಲಾಧ್ಯಕ್ಷ

ಮಹಾಂತೇಶ ರಣಗಟ್ಟಿಮಠ, ಆರ್. ಅಭಿಲಾಷ, ಪಾಂಡುರಂಗ

ನಾಯಕ, ವಿಶ್ವನಾಥ ಉಳ್ಳಾಗಡ್ಡಿ, ಲಕ್ಷ್ಮಣ ಲಮಾಣಿ, ಪ್ರಕಾಶ

ಕೆಳಗಿನಮನಿ ಮೊದಲಾದವರು ಉಪಸ್ತಿತರಿದರು. ಬಾಕಿ ಇರುವ

ಬೋಧಕೇತರ ಹುದ್ದೆಗಳನ್ನು ಮರು ಪ್ರಾರಂಭಿಸಲು ಒತ್ತಾಯ

loading...

LEAVE A REPLY

Please enter your comment!
Please enter your name here