ಸಂಭಾಜಿ ರಕ್ಷಣೆ :ಏನಿದು ಕಾಂಗ್ರೆಸ್ ಹುನ್ನಾರ

0
23
loading...

ಬೆಳಗಾವಿ ಕ್ಷೇತ್ರದಲ್ಲಿ 1.50 ಲಕ್ಷ ಮರಾಠಿ

ಮತಗಳ ಮೇಲೆ ಕಾಂಗ್ರೆಸ್ ಕಣ್ಣು

ಅಪರಾಧಿ ಮನೋವೃತ್ತಿಯ ಸಂಬಾಜಿ

ಮೇಲೆ ಕ್ರಮಕ್ಕೆ ಹಿಂದೇಟು

ಶತಾಯಗತಾಯ ಬೆಳಗಾವಿ ಕ್ಷೇತ್ರದಲ್ಲಿ

ಕಾಂಗ್ರೆಸ್ ಗೆಲ್ಲಿಸಲು ಸಚಿವರನ್ನೊಳಗೊಂಡು

ತಂತ್ರಗಾರಿಕೆ

ಮರಾಠಿ ಮತಗಳ ವಿಭಜನೆಗೆ ಸಂಬಾಜಿ

ರಕ್ಷಣೆ

ನಾಡ ವಿರೋಧಿ ಎಂಇಎಸ್ ಶಾಸಕರು ಭಾಷಾ

ಸಾಮರಸ್ಯ ಕೆಡಿಸುವದರ ಜೊತೆಗೆ ಜೂಜು,

ಮಟಕಾ ಎನ್ನುವಂತಹ ಸಾಮಾಜಿಕ

ಪಿಡಗುಗಳನ್ನು ಬೆಳೆಸುತ್ತಿರುವದು

ಖಂಡನಾರ್ಹವಾಗಿದೆ. ಒಬ್ಬ ಶಾಸಕನಾಗಿ

ಇಂಥ ಕಾನೂನು ಬಾಹಿರ ಚಟುವಟಿಕೆಯಲ್ಲಿ

ತೊಡಗಿಕೊಂಡಿರುವದು ಕ್ಷೇತ್ರ ಮತ್ತು

ಜಿಲ್ಲೆಯ ಜನತೆ ತಲೆತಗ್ಗಿಸುವಂತಾಗಿದೆ.

ರಾಜ್ಯ ಸರಕಾರ ಭಂಷಇ ಸಮಸ್ಯೆಯನ್ನು

ಬದಿಗಿಟ್ಟು ಕಾನೂನು ಬಾಹಿರ ಮಟಕಾ,

ಜೂಜು ದಂಧೆಗಳನ್ನು ನಡೆಸಿ ಜನರನ್ನು

ಬೀದಿಗೆ ತರುತ್ತಿರುವ ಆರೋಪದಲ್ಲಾದರೂ

ಶಾಸಕ ಸಂಬಾಜಿ ಪಾಟೀಲ ಮೇಲೆ ಕ್ರಮ ಕೈಗೊಳ್ಳಲಿ

ಎಂಬುವದು ಜನರ ಆಶಯ.

ಚೇತನ ಹೊಳೆಪ್ಪಗೋಳ

ಬೆಳಗಾವಿ,ಜ.31: ನಾಡ ವಿರೋಧಿ ಎಂಇಎಸ್ ಶಾಸಕ

ಸಂಭಾಜಿ ಪಾಟೀಲ ಅವರು ದಿನಕ್ಕೊಂದು

ಕ್ಯಾತೆ ಮಾಡುತ್ತಿದ್ದರೂ ಅವರ ಮೇಲೆ ಕ್ರಮ

ತೆಗೆದುಕೊಳ್ಳಲು ಧೈರ್ಯ ತೋರದ ರಾಜ್ಯ

ಕಾಂಗ್ರೆಸ್ ಸರಕಾರ ಮುಂಬರುವ ಲೋಕಸಭಾ

ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು

ಜಾಣ ಕುರುಡತನ ಮೆರೆಯುತ್ತಿದೆ.

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಸಂಬಾಜಿ

ಪಾಟೀಲ ಪಾರ್ಮ ಹೌಸ್ನಲ್ಲಿ ಮಟಕಾ ಮತ್ತು

ಜೂಜು ದಂಧೆ ನಡೆಸುತ್ತಿರುವದನ್ನು ಖಾಸಗಿ

ವಾಹಿನಿಯೊಂದು ಕುಟುಕು ಕಾರ್ಯಾಚರಣೆಯ

ಮೂಲಕ ಬಹಿರಂಗಪಡಿಸಿದ ನಂತರ ಶಾಸಕನನ್ನು

ಬಂಧಿಸಿ ಕ್ರಮ ಕೈಗೊಳ್ಳುವಂತೆ ಕನ್ನಡಪರ ಸಂಘಟನೆಗಳ

ಪ್ರತಿಭಟನೆಗಳ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸರಕಾರ

ಕಣ್ಣುಮುಚ್ಚಿ ಕುಳಿತಿರುವದು ನಾಚಿಕೆಗೇಡಿನ

ವಿಷಂಂಂಂ.

ಕಳೆದ ಬೆಳಗಾವಿ ವಿಧಾನಸಭೆ

ಅಧಿವೇಶನದಲ್ಲಿ 4 ಜನ ಎಂಇಎಸ್

ಶಾಸಕರಿದ್ದರೇ ಸರಕಾರದ ಶವಯಾತ್ರೆ

ಹೊರಡಿಸುತ್ತೇವೆ ಎಂಬ ಉದ್ಧಟತನದ

ಮಾತುಗಳನ್ನು ಹೇಳಿದ್ದರೂ ಶಾಸಕರ ಮೇಲೆ

ಕ್ರಮ ಕೈಗೊಳ್ಳದಿರುವದರ ಹಿಂದೆ ಕಾಂಗ್ರೆಸ್

ಸರಕಾರದ ದೊಡ್ಡ ಷಂಡಂಚಿಂತಂಚಿವೇ ಅಡಗಿದೆ.

ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ

ಸ್ವಾರ್ಥಕ್ಕೆ ಕನ್ನಡಿಗರ ಹಿತಾಸಕ್ತಿಯನ್ನು ಬಲಿ

ಕೊಡುತ್ತಿರುವದು ಕನ್ನಡಿಗರ ಕೆಂಗಣ್ಣಿಗೆ

ಗುರಿಯಾಗಿದೆ.

ಸಂಭಾಜಿ ಪಾಟೀಲ ಅವರ ಮೇಲೆ

ಕ್ರಮ ಕೈಗೊಂಡರೆ ಬರುವ ಲೋಕಸಭಾ

ಚುನಾವಣೆಯಲ್ಲಿ ಮರಾಠಿ ಮತಗಳ

ಮೇಲೆ ಭಾರಿ ಪರಿಣಾಮ ಬೀರಲಿದೆ

ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್

ಮಾಡಿಕೊಂಡಿರುವಂತೆ ಕಾಣಿಸುತ್ತಿದೆ.

ಮುಂಬರುವ ಲೋಕಸಭಾ

ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ

ಎರಡೂ ಕ್ಷೇತ್ರಗಳಲ್ಲಿ ಶತಾಯ ಗತಾಯ

ಗೆಲ್ಲುವದು ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ

ಅನಿವಾರ್ಯವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು

ತಮ್ಮ ಸಿಎಂ ಕುರ್ಚಿಯಲ್ಲಿ ಮುಂದುವರೆಯ

ಬೇಕೆಂದರೆ ಜಿಲ್ಲೆಯ ಎರಡೂ ಲೋಕಸಭಾ

ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಬೇಕಿದೆ.

ಈ ನಿಟ್ಟಿನಲ್ಲಿ ಸಿಎಂ ಆಪ್ತರು ತಮ್ಮ ಚಾಣಾಕ್ಷ

ನಡೆಯಲ್ಲಿ ಕನ್ನಡವನ್ನು ಮರೆಯುತ್ತಿರುವದು

ದುರಂತವೇ ಸರಿ.

ಬಿಜೆಪಿ ನಂಬಿಕೊಂಡಿರುವ ಮರಾಠಿ

ವೋಟಗಳ ಮೇಲೆ ಕಾಂಗ್ರೆಸ್ ಕಣ್ಣು ಹಾಕಿದೆ.

ಈ ಷಂಡಂಚಿಂತಂಚಿದಂನ್ಲಿ ಎಂಇಎಸ್ ಮತಗಳನ್ನು

ವಿಂಗಡಿಸಲು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ

ಎಂಇಎಸ್ನ ಬಲಿಷಂಪ ವ್ಯಕ್ತಿಯೊಬ್ಬರನ್ನು

ಕಣಕ್ಕಿಳಿಸಲು ತೀರ್ಮಾನಿಸಿದೆ.

ಈ ಎಂಇಎಸ್ ಅಥವಾ ಮರಾಠಿ

ಭಾಷಿಕರ ಮುಖಂಡರಿಗೆ ಮುಂಬರುವ

ಲೋಕಸಭೆ ಚುನಾವಣೆ ಎದುರಿಸುವ ಎಲ್ಲ

ರೀತಿಯ ಸಹಕಾರ ಮತ್ತು ಸಹಾಯವನ್ನು

ಕಾಂಗ್ರಸ್ ಪಕ್ಷವೇ ಮಾಡಲಿದೆ ಎಂಬ

ಮಾತುಗಳು ಕಾಂಗ್ರಸ್ ಮೂಲಗಳಿಂದ ಕೇಳಿ

ಬರುತ್ತಿವೆ.

ಈ ತಂತ್ರದಿಂದ ಎಂಇಎಸ್ನ ಬಹುತೇಕ

ಮತಗಳು ಬಿಜೆಪಿಗೆ ಹೋಗುವ ಬದಲು

ಎಂಇಎಸ್ ಪಕ್ಷದತ್ತ ವಾಲಲಿವೆ. ಬಿಜೆಪಿಯ

ವೋಟ್ಬ್ಯಾಂಕ್ಗೆ ಬ್ರೆಕ್ ಹಾಕಬಹುದಾಗಿದೆ.

ಈ ತಂತ್ರದಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ

ಲಾಭವಾಗಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್

ಪಕ್ಷದ್ದಾಗಿದೆ.

ಹಿಂದೊಮ್ಮೆ ಎಂಇಎಸ್ ತನ್ನ ಗಟ್ಟಿ

ಮತಗಳನ್ನು ನಂಬಿಕೊಂಡು ಆನಂದ ಗೋಗಟೆ

ಅವರನ್ನು ಲೋಕಸಭೆ ಚುನಾವಣೆಯ ಕಣಕ್ಕೆ

ಇಳಿಸಿತ್ತು.ಆದರೆ ಗೋಗಟೆ ಕೇವಲ 41 ಸಾವಿರ

ಮತಗಳನ್ನು ಗಳಿಸಿ ಎಂಇಎಸ್ ತಾಕತ್ತು ಏನು

ಇಲ್ಲ ಎಂಬುವದನ್ನು ಸಾಬೀತುಪಡಿಸಿದ್ದರು.

ನಂತರ ಮಾಜಿ ಸಂಸದ ಅಮರಸಿಂಗ ಪಾಟೀಲ

ಅವರು ಮತ್ತೊಂದು ಚುನಾವಣೆಯಲ್ಲಿ

ಎಂಇಎಸ್ ಮತಗಳನ್ನು ಒಡೆದು ಹಾಕಲು

ಭಾರಿ ತಂತ್ರವನ್ನೇ ಮಾಡಿದ್ದರು ಆದರೆ ಅದರಲ್ಲಿ

ಅವರು ಯಶಸ್ವಿಯಾಗಲಿಲ್ಲ.

ಕಾಲ ಕಳೆದಂತೆ ಬೆಳಗಾವಿ ಮತಕ್ಷೇತ್ರದಲ್ಲಿ

ಮರಾಠಿ ಮತದಾರರ ಸಂಖ್ಯೆ ಬೆಳೆಯುತ್ತ

ಬಿಜೆಪಿಯ ಅದೃಷ್ಟಕ್ಕೆ ಬೆಂಬಲವಾಗಿ ನಿಂತಿದೆ.

ಬಿಜೆಪಿ ಇಲ್ಲಿ ಜಯ ಸಾಧಿಸಲು ಒಂದೂವರೆ ಲಕ್ಷ

ಇರುವಷ್ಟು ಮರಾಠಿ ಮತದಾರರನ್ನು, ಕ್ಷೇತ್ರದ

ತುಂಬಿರುವ ಲಿಂಗಾಯತ ಮತದಾರರನ್ನು

ಅವಲಂಬಿಸಿದೆ.

ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಪಕ್ಷವನ್ನು

ಸೋಲಿಸುವದು ಅನಿವಾರ್ಯವಾಗಿದೆ. ಅದಕ್ಕಾಗಿ

ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಅವರ

ಉದ್ಧಟತನವನ್ನು ಸಹಿಸಿಕೊಂಡು ಕನ್ನಡಿಗರನ್ನು

ಬಲಿಕೊಟ್ಟು ಮರಾಠಿ ಮತಗಳನ್ನು ಛಿದ್ರ

ಮಾಡುವ ಆಲೋಚನೆಯಿಂದ ರಾಜಕೀಯ

ಮಾಡಲು ಮುಂದಾಗಿದೆ.

ಕಾಂಗ್ರೆಸ್ ಪಕ್ಷದ ಈ ನಡೆ ಕನ್ನಡಿಗರ

ಆಕ್ರೌಶಕ್ಕೆ ಕಾರಣವಾಗಿದೆ. ತಮ್ಮ ರಾಜಕೀಯ

ಏನಾದರೂ ಇರಲಿ, ಮರಾಠಿ ಮತಗಳನ್ನು

ಪಡೆಯುವ ಅಥವಾ ಒಡೆದು ಹಾಕುವ

ಆತುರದಲ್ಲಿ ಬೆಳಗಾವಿಯ ಕನ್ನಡಿಗರನ್ನು ಮತ್ತು

ಕಾನೂನು ಸುವ್ಯವಸ್ಥೆಯನ್ನು ತೊಂದರೆಗೀಡು

ಮಾಡುವದು ಬೇಡ.

ತಕ್ಷಣವೇ ಸದ್ಯದ ರಾಜಕೀಯವನ್ನು

ಬದಿಗಿಟ್ಟು ಕರ್ನಾಟಕ ಸರಕಾರ ಕನ್ನಡಿಗರ

ಹಿತರಕ್ಷಣೆಗಾಗಿ ಸಂಭಾಜಿ ಪಾಟೀಲ ವಿರುದ್ಧ

ಕ್ರಮ ಕೈಗೊಳ್ಳುವದು ಅನಿವಾರ್ಯವಾಗಿದೆ.

ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ

ಕಡೆಗಣ್ಣಿನಿಂದ ನೋಡುತ್ತಿರುವದು ಬೇಡ

ತಕ್ಷಣದ ಕ್ರಮಕ್ಕೆ ನಾಂದಿ ಹಾಡಲಿ.

loading...

LEAVE A REPLY

Please enter your comment!
Please enter your name here