ಸೋನಿಯಾ ಇಂದು ಗುಲ್ಬರ್ಗಾಕ್ಕೆ

0
34
loading...

ಬೆಂಗಳೂರು, ಜ.31- ಸಂವಿಧಾನದಕ್ಕೆ

ತಿದ್ದಪಡಿಯಾಗಿ ವಿಶೇಷ ಸ್ಥಾನ ನೀಡಬೇಕು

ಎಂಬ ನಲವತ್ತು ವರ್ಷಗಳ ಬೇಡಿಕೆ

ಈಡೇರಿದ್ದರಿಂದ ಹೈದರಾಬಾದ್-ಕರ್ನಾಟಕ

ಭಾಗದ ಜನ ಇಂದು ಹಬ್ಬ ಆಚರಿಸುತ್ತಿದ್ದಾರೆ,

ಹಬ್ಬಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ

ಅತಿಥಿಯಾಗಿ ಆಗಮಿಸುತ್ತಿದ್ದಾರೆ.

ಇಂದು ಗುಲ್ಬರ್ಗದ ಎನ್.ವಿ.

ಕ್ರೀಡಾಂಗಣದಲ್ಲಿ ನಡೆಯುವ ಬೃಹತ್

ಸಮಾವೇಶದಲ್ಲಿ ಲಕ್ಷಕ್ಕೂ ಹೆಚ್ಚು ಜನ

ಸೇರುವ ನೀರೀಕ್ಷೆಯಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ

ದೆಹಲಿಯಿಂದ ಬೀದರ್ಗೆ ವಿಶಇಂಷಂ ವಿಮಾನ

ನಿಲ್ದಾಣದಲ್ಲಿ ಆಗಮಿಸಿ, ಅಲ್ಲಿಂದ ಗುಲ್ಬರ್ಗಕ್ಕೆ

ಹೆಲಿಕಾಫ್ಟರ್ನಲ್ಲಿ ಬರಲಿದ್ದಾರೆ.

ಗುಲ್ಬರ್ಗದಲ್ಲಿ ಇಎಸ್ಐ

ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯನ್ನು

ಉದ್ಘಾಟಿಸಲಿದ್ದಾರೆ. ನಂತರ

ಎನ್.ವಿ.ಮೈದಾನದಲ್ಲಿ ನಡೆಯುವ

ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ

ಕೆಪಿಸಿಸಿಯ ಅಭಿನಂದನೆ ಸ್ವೀಕರಿಸಲಿದ್ದಾರೆ.

ಬಿಜೆಪಿ ಸರ್ಕಾರ ತಿರಸ್ಕರಿಸಿದ್ದ 371

ಕಲಂ ತಿದ್ದಪಡಿಯನ್ನು ಕಾಂಗ್ರೆಸ್ ನೇತೃತ್ವದ

ಯುಪಿಎ-2 ಸರ್ಕಾರ ಸಾಕಾರಗೊಳಿಸಿದೆ.

ಈ ಮೂಲಕ ಬೀದರ್, ಕೊಪ್ಪಳ,

ರಾಯಚೂರು, ಯಾದಗಿರಿ, ಗುಲ್ಬರ್ಗ ಸೇರಿ

ಆರು ಜಿಲ್ಲೆಗಳ ನಲವತ್ತು ವರ್ಷಗಳ

ಬೇಡಿಕೆ ಈಡೇರಿದೆ. ಲೋಕಸಭೆ ಚುನಾವಣೆ

ಸಮೀಪಿಸುತ್ತಿರುವ ಸಂದರ್ಭದಲ್ಲಿ ಇದರ

ಲಾಭ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ.

ಹೀಗಾಗಿ ಇದಕ್ಕೆ ಕಾರಣರಾದ

ಸೋನಿಯಾ ಗಾಂಧಿಯವರ ಅಭಿನಂದನಾ

ಸಮಾರಂಭ ಮಹತ್ವದ ಮೈಲಿಗಲ್ಲಾಗಿದೆ.

ಸೋನಿಯಾ ಗಾಂಧಿಯವರ ಭೇಟಿ

ಕಾಂಗ್ರೆಸ್ನಲ್ಲಿ ಸಂಚಲನ ಸೃಷ್ಠಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ

ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ

ಕಾಂಗ್ರೆಸ್ನ ಎಲ್ಲಾ ಮುಖಂಡರು

ಗುಲ್ಬರ್ಗದಲ್ಲಿ ಬೀಡು ಬಿಟ್ಟಿದ್ದಾರೆ, ಸಂಪುಟದ

ಎಲ್ಲಾ ಸಚಿವರು ಕಾರ್ಯಕ್ರಮದ ಯಶಸ್ವಿಗೆ

ಟೊಂಕ ಕಟ್ಟಿ ಶ್ರಮಿಸುತ್ತಿದ್ದಾರೆ.

ಸೋನಿಯಾ ಗಾಂಧಿ ಭೇಟಿ

ಕಾಂಗ್ರೆಸ್ನಲ್ಲಿ ಹಬ್ಬದ ವಾತಾವರಣ

ನಿರ್ಮಿಸಿದೆ.

ಈ ನಡುವೆ ಸಂಪುಟದಲ್ಲಿ ಸ್ಥಾನ

ವಂಚಿತರು ದೂರು ಹೇಳಿಕೊಳ್ಳಲು ನಡೆಸಿದ

ಪ್ರಯತ್ನಕ್ಕೆ ತಣ್ಣಿರು ಎರಚಲಾಗಿದೆ.

ಯಾವುದೇ ಮುಖಂಡರು ವೈಯಕ್ತಿಕ

ಸಮಸ್ಯೆ ಹೇಳಿಕೊಳ್ಳಲು ಅವಕಾಶವಿಲ್ಲ

ಎಂದು ಹೇಳುವ ಮೂಲಕ ಅಧಿನಾಯಕಿಯ

ಭೇಟಿಗೆ ರಾಜ್ಯ ನಾಯಕರಿಗೆ ಅವಕಾಶ

ನಿರಾಕರಿಸಲಾಗಿದೆ.

ಇದು ಪಕ್ಷದಲ್ಲಿ ಇನ್ನಷ್ಟು

ಅಸಮಾಧಾನನ್ನು ಹೆಚ್ಚಿಸಿದೆ.

ಕೇಂದ್ರ ಸಚಿವ ಮಲ್ಲಿಕಾರ್ಜುನ

ಖರ್ಗೆಯವರ ಆಸಕ್ತಿಯ ಫಲವಾಗಿ

ಗುಲ್ಬರ್ಗದಲ್ಲಿ 500 ಹಾಸಿಗೆಗಳ ಸೂಪರ್

ಸ್ಪೆಷಾಲಿಟಿ ಆಸ್ಪತ್ರೆ 1200 ಕೋಟಿ

ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ಬೆಂಗಳೂರು ಹೊರತು ಪಡಿಸಿ

ಎರಡನೆಯದಾಗಿ ಗುಲ್ಬರ್ಗದಲ್ಲಿ

ವೈದ್ಯಕೀಯ, ದಂತ ವೈದ್ಯಕೀಯ, ಅರೆ

ವೈದ್ಯಕೀಯ, ನರ್ಸಿಂಗ್ ಸೇರಿಂದಂತೆ

ವೈದ್ಯಕೀಯ ಕ್ಷೇತ್ರದ ಎಲ್ಲಾ ಶಿಕ್ಷಣ ನೀಡುವ

ಬೃಹತ್ ಸಂಸ್ಥೆ ಸ್ಪಾಪನೆಗೊಂಡಿದೆ.

ಇದರ ಉದ್ಘಾಟನೆಗಾಗಿ 12 ಗಂಟೆಗೆ

ಆಗಮಿಸುವ ಸೋನಿಯಾ ಗಾಂಧಿಯವರು,

ಮಧ್ಯಾಹ್ನ 12.30ಕ್ಕೆ ಬಹಿರಂಗ

ಸಮಾರಂಭದಲ್ಲಿ ಭಾಗವಹಿಸಿ ಅಭಿನಂದನೆ

ಸ್ವೀಕರಿಸಲಿದ್ದಾರೆ. ನಂತರ ಬೀದರ್ಗೆ

ತೆರಳಿ ವಿಶಇಂಷಂ ವಿಮಾನದಲ್ಲಿ ದೆಹಲಿಗೆ

ಮರಳಲಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ

ದಿಗ್ವಿಜಯ್ ಸಿಂಗ್, ಕೇಂದ್ರ ಸಚಿವ

ಮಲ್ಲಿಕಾರ್ಜುನ ಖರ್ಗೆ, ಮಾಜಿ

ಮುಖ್ಯಮಂತ್ರಿ ಧರ್ಮಸಿಂಗ್ ಸೇರಿದಂತೆ

ಮತ್ತಿತರರು ಕಾರ್ಯಕ್ರಮದಲ್ಲಿ

ಭಾಗವಹಿಸಲಿದ್ದಾರೆ.

 

loading...

LEAVE A REPLY

Please enter your comment!
Please enter your name here