ಹ್ಯಾಂಡ್ಲೂಮ್ ರಿಜರ್ರೆವೆಷನ್ ಕಾಯ್ದೆ ನೇಕಾರರಿಂದ ಖಂಡನೆ

0
19
loading...

ಬೆಳಗಾವಿ:31 ರಂಗಕರ್ಮಿ ಪ್ರಸನ್ನ ಅವರು

1985ರ ಹ್ಯಾಂಡ ಲೂಮ್ ರಿಜರ್ರೆವೆಷನ್

ಕಾಯ್ದೆಯನ್ನು ಅನುಷ್ಠಾನಗೊಳಿಸಲು ಹೊರಟಿರುವ

ರಾಜ್ಯ ಸರಕಾರದ ಕ್ರಮವನ್ನು ಉ.ಕದ ನೇಕಾರರಿಂದ

ಖಂಡಿಸಲಾಗುವದು ಎಂದು ಅಧ್ಯಕ್ಷ ರವಿ ಬಾಡಗಿ

ಇಂದಿಲ್ಲಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸಾಹಿತ್ಯ ಭವನದಲ್ಲಿ

ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ

ಅವರು,ಭಾರತ ಸರಕಾರವು ಹ್ಯಾಂಡಲೂಮ್

ರಿಜರ್ರೆವೆಷನ್ ಕಾಯ್ದೆಯನ್ನು ರಾಜ್ಯ ಮತ್ತು ದೇಶದ

ನೇಕಾರರ ಗಮನದಲ್ಲಿಟ್ಟುಕೊಂಡು ಕಳೆದ ವರ್ಷ

ಕೇಂದ್ರ ಸರಕಾರ ಈ ಕಾಯ್ದೆಯನ್ನು ತಿರಸ್ಕರಿಸಿದೆ

ಆದರೆ ಪ್ರಸನ್ನ ಅವರು ಈ ಕಾಯ್ದೆಯನ್ನು ಅನುಷ್ಠಾನ

ಗೋಳಿಸಿ ಎಂದು ಹೋರಾಟ ಮಾಡುತ್ತಿರುವುದನ್ನು

ನೇಕಾರರು ವಿರೋಧಿಸುತ್ತೆವೆ ಎಂದು ಹೇಳಿದರು.

ನೇಕಾರರ ಬಗ್ಗೆ ಕಾಳಜಿ ಇವರಿಗಿದ್ದರೆ ಕೈಮಗ್ಗ

ನೇಕಾರರು, ವಿದ್ಯುತ್ ನೇಕಾರರೆಂದು ಬೇರ್ಪಡಿಸದೇ

ಸಮಸ್ತ ನೇಕಾರರಿಗೆ ನ್ಯಾಯ ವದಗಿಸಿಕೊಡಬೇಕು

ಅದನ್ನು ಬಿಟ್ಟು ಆಗದ ಕೆಲಸವನ್ನು ಸರಕಾರಕ್ಕೆ

ಒತ್ತಾಯ ಪೂರ್ವಕವಾಗಿ ಅನುಷ್ಠಾನಗೊಳಿಸಿ

ಎನ್ನುವದು ಸರಿಯಲ್ಲ. ಪ್ರಸನ್ನ ಇವರಲ್ಲಿ ರಾಜ್ಯ

ನೇಕಾರರ ಬಗ್ಗೆ ಸಂಪೂರ್ಣವಾಗಿ ಅಧ್ಯಯನ

ಮಾಡಿ ಹೇಳಿಕೆ ನೀಡಲಿ ಈ ವಿಷಯವಾಗಿ ನಾವು

ಇವರನ್ನು ಬೆಳಗಾವಿಗೆ ಬಂದು ಬಹಿರಂಗವಾಗಿ

ನೇಕಾರರೊಡನೆ ಚರ್ಚಿಸಲಿ ಎಂದು ಈ

ಸಂದರ್ಭದಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನೇಕಾರ ವೇಧಿಕೆ ಅಧ್ಯಕ್ಷ

ಭುಜಂಗ ಬಂಢಾರೆ, ಕಾರ್ಯದರ್ಶಿ ಪರಶುರಾಮ

ಢಗೆ, ನೀಲಕಂಠ, ನಾರಾಯಣ ಬಡಗೂರ

ಮುಂತಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here