38 ಅನಧಿಕೃತ ಬಡಾವಣೆಯಲ್ಲಿ ಬುಡಾದಿಂದ ಬಿತ್ತಿಫಲಕ

0
30
loading...

ಕಠಿಣ ಕ್ರಮದ ಎಚ್ಚರಿಕೆ ಮೋಸ ಹೋಗದಂತೆ ಜನರಲ್ಲಿ ಜಾಗೃತಿ

ಬೆಳಗಾವಿ ನಗರಾಭಿವೃದ್ದಿ ಪ್ರದೇಶದ ವ್ಯಾಪ್ತಿಯಲ್ಲಿ ನಿರ್ಮಿಸಿರುವ 38

ಅನಧಿಕೃತ ನಿವೇಶನಗಳಲ್ಲಿ ಸದರಿ ಜಾಗೆಯನ್ನು ಅನಧಿಕೃತ ಬಡಾವಣೆ ವಿನ್ಯಾಸ

ತಯಾರಿಸಿದ್ದು ಸಾರ್ವಜನಿಕರು ಈ ನಿವೇಶನಗಳನ್ನು ಖರೀಧಿಸಬಾರದೆಂಬ

ಬಿತ್ತಿ ಫಲಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವದರ ಜೊತೆಗೆ

ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದಕೊಳ್ಳಲು ಬುಡಾ ಮುಂದಾಗಿದೆ.

ಚೇತನ ಹೊಳೆಪ್ಪಗೋಳ

ಬೆಳಗಾವಿ,ಜ.31: ನಗರದಲ್ಲಿ ಬೆಳಗಾವಿ ನಗರರಾಭಿವೃದ್ದಿ ಪ್ರಾಧಿಕಾರ (ಬುಡಾ)

ಅನುಮತಿ ಪಡೆಯದೇ ನಿರ್ಮಾಣ ಮಾಡಿರುವ 38 ಬಡಾವಣೆ ಮಾಲೀಕರ

ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬುಡಾ ತೀರ್ಮಾನಿಸಿದೆ.

ನಗರದಲ್ಲಿ ನಿರ್ಮಿಸಿರುವ 38 ಅನಧಿಕೃತ ನಿವೇಶನಗಳಲ್ಲಿ ಸದರಿ ಜಾಗೆಯನ್ನು

ಅನಧಿಕೃತ ಬಡಾವಣೆ ವಿನ್ಯಾಸ ತಯಾರಿಸಿದ್ದು ಸಾರ್ವಜನಿಕರು ಈ ನಿವೇಶನಗಳನ್ನು

ಖರೀಧಿಸಬಾರದೆಂಬ ಬಿತ್ತಿ ಫಲಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವದರ

ಜೊತೆಗೆ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದಕೊಳ್ಳಲು ಬುಡಾ ಮುಂದಾಗಿದೆ.

ಬುಡಾ ಇಂಥ ಅನುಮತಿ ಪಡೆಯದ 38 ಅನಧಿಕೃತ ಬಡಾವಣೆಗಳ

ಪಟ್ಟಿಯನ್ನು ಮಾಡಿಕೊಂಡು ಬಡಾವಣೆ ಮಾಲೀಕರಿಗೆ ನೊಟೀಸ್ ರವಾನಿಸಿತ್ತು.

ನೊಟಿಸ್ನಲ್ಲಿ ಜ.30 ಮತ್ತು 31 ರಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿತ್ತು.

ಆದರೆ ಅನಧಿಕೃತ 38 ಬಡಾವಣೆಗಳ ಮಾಲೀಕರಲ್ಲಿ ಯಾರೊಬ್ಬರು ವಿಚಾರಣೆಗೆ

ಬಾರದಿರುವದು ಮತ್ತು ಬುಡಾ ಪೋಸ್ಟ್ ಮುಖಾಂತರ ಕಳಿಸಿದ್ದ ನೊಟೀಸ್ಗಳಲ್ಲಿ

ಕೇವಲ 15 ಜನರಿಗೆ ಮಾತ್ರ ತಲುಪಿದ್ದು 23 ಜನರ ನೊಟೀಸ್ಗಳು ಮಾಲೀಕರಿಗೆ

ತಲುಪದೆ ಮರಳಿ ಬುಡಾ ಕಚೇರಿಗೆ ಬಂದಿರುವದು ಅಧಿಕಾರಿಗಳ ಕೋಪಕ್ಕೆ

ಕಾರಣವಾಗಿದೆ.

ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬಡಾವಣೆಗಳನ್ನು

ನಿರ್ಮಿಸಬೇಕೆಂದರೆ ಬುಡಾ ಅನುಮತಿ ಕಡ್ಡಾಯ. ಆದರೆ ಬಹುತೇಕ ಬಡಾವಣೆ

ನಿರ್ಮಿಸುವ ಮಾಲೀಕರು ಕೇವಲ ಕೃಷಿಯೇತರ ಭೂಮಿ ಎಂಬುವ ಅನುಮತಿ

ಪಡೆದು, ಬುಡಾ ಅನುಮತಿ ಪಡಿಯದೇ ಮುಗ್ಧ ಜನರಿಗೆ ಟೋಪಿ ಹಾಕುತ್ತಿದ್ದಾರೆ.

ಇದರ ವಿರುದ್ಧ ಎಚ್ಚೆತ್ತುಕೊಂಡಿರುವ ಬುಡಾ ಅಧಿಕಾರಿಗಳು ಮೊದಲ ಹಂತದ

ಸರ್ವೇ ನಡೆಸಿ ಅನಧಿಕೃತ 38 ನಿವೇಶನಗಳ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿದ್ದರು.

ಈ ಕುರಿತು ಬುಡಾ ಆಯುಕ್ತ ರವೀಂದ್ರ ಅವರನ್ನು ಕನ್ನಡಮ್ಮ ಮಾತನಾಡಿಸಿದಾಗ

ಈಗಾಗಲೇ ಬುಡಾ ಅನುಮತಿ ಪಡೆಯದ ಅನಧಿಕೃತ 38 ಬಡಾವಣೆ ಮಾಲೀಕರಿಗೆ

ನೊಟೀಸ್ ಕಳಿಸಲಾಗಿತ್ತು. ಶನಿವಾರ ವಿಚಾರಣೆಗೆ ಕೊನೆಯ ದಿನವಾದರೂ

ಅನಧಿಕೃತ ಬಡಾವಣೆ ಮಾಲೀಕರು ಬಂದಿಲ್ಲ. ಇಂಥ ಮಾಲೀಕರ ವಿರುದ್ಧ

ಕಠಿಣ ಕ್ರಮ ಕೈಗೊಳ್ಳವುದರ ಜೊತೆಗೆ ಈ ಎಲ್ಲ 38 ಅನಧಿಕೃತ ಬಡಾವಣೆಗಳಲ್ಲಿ

ಬಿತ್ತಿ ಫಲಕಗಳನ್ನು ಅಳವಡಿಸಿ ಸಾರ್ವಜನಿಕರು ಮೋಸ ಹೋಗದಂತೆ ಜಾಗೃತಿ

ಮೂಡಿಸಲಾಗುವದು ಎಂದು ತಿಳಿಸಿದರು.

ನಗರದ ಮೊದಲ ಹಂತದಲ್ಲಿನ ಸರ್ವೇಯಲ್ಲಿ ಬುಡಾ 38 ಅನಧಿಕೃತ

ಬಡಾವಣೆಗಳ ಪಟ್ಟಿಯನ್ನು ಮಾಡಿಕೊಂಡಿದೆ. ಶೀಘ್ರದಲ್ಲಿ ಎರಡನೇ ಹಂತದ

ಸರ್ವೇ ನಡೆಸಿ ನಗರದ ಎಲ್ಲ ಕೃಷಿ ಮತ್ತು ಕೃಷಿಯೇತರ ಜಮೀನಿನಲ್ಲಿ ಬುಡಾ

ಅನುಮತಿ ಪಡಿಯದೇ ಬಡಾವಣೆ ನಿರ್ಮಿಸಿ ಜನರಿಗೆ ಮೋಸ ಮಾಡುತ್ತಿರುವವರ

ವಿರುದ್ಧ ಕ್ರಮ ತೆಗೆದುಕೊಳ್ಳು ಬೆಳಗಾವಿ ನಗರ ಅಭಿವೃದ್ದಿ ಪ್ರಾಧಿಕಾರಿ ಅಧಿಕಾರಿಗಳು

ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

loading...

LEAVE A REPLY

Please enter your comment!
Please enter your name here