ಉಚಿತ ಸಾಮೂಹಿಕ ವಿವಾಹ

0
15
loading...

ಧಾರವಾಡ : 25 ಇಲ್ಲಿಯ ಭಾವಸಾರ ವಿಜನ್ ಇಂಡಿಯಾ ಹಾಗೂ ಕೆ.ಟಿ. ಬೋರ್ಡಿಂಗ್ ಜಿಂಟಿಯಾಗಿ ಭಾವಸಾರ ಮಂಗಲ ಕಾರ್ಯಾಲಯದಲ್ಲಿ ಉಚಿತವಾಗಿ ಆರು ಜೋಡಿ ಸಾಮೂಹಿಕ ವಿವಾಹ ನಡೆಸಿದವು.
ವಧು-ವರರಿಗೆ ಬಟ್ಟೆ, ಪಾತ್ರೆ, ಮಾಂಗಲ್ಯ ಹಾಗೂ ಸೀರೆಗಳನ್ನು ಭಾವಸಾರ ಕ್ಷತ್ರೀಯ ಸಮಾಜದ ದಾನಿಗಳಿಂದ ವಿತರಿಸಲಾಯಿತು. ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಅವರಿಗೆ ಸಮಾಜದ ಅಭಿವ?ದ್ದಿಗೆ ಕೆಲ ಬೇಡಿಕೆಗಳ ಮನವಿಯನ್ನು ಇದೇ ಸಂದಭ9ದಲ್ಲಿ ಸಲ್ಲಿಸಲಾಯಿತು. ಭಾವಸಾರ ಮಂಗಲ ಕಾಯಾ9ಲಯ ಹಾಗೂ ನವನಗರದಲ್ಲಿ ನಿರ್ಮಾಣವಾಗುತ್ತಿರುವ ಸಮಾಜದ ಕಟ್ಟಡಕ್ಕೆ ಶಾಸಕರ ನಿಧಿಯಿಂದ ಅನುದಾನ ಕೊಡಿಸುವ ಭರವಸೆಯನ್ನು ಶಾಸಕರು ನೀಡಿದರು.
ಭಾವಸಾರ ವಿಜನ್ ಸಂಸ್ಥಾಪಕ ನಾರಾಯಣರಾವ್ ತಾತುಸ್ಕರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕೆ.ಜಿ. ಟಿಕಾರೆ, ಪ್ರಕಾಶ ತಿರುಮಲೆ, ಟಿ.ವೈ. ಕರ್ಣೆ ಭಾಗವಹಿಸಿದ್ದರು.
ವಿವಾಹ ಸಮಿತಿ ಅಧ್ಯಕ್ಷ ಎಂ.ಎಂ. ದಾಮೋದರ, ಭಾವಸಾರ ವಿಜನ್ ಇಂಡಿಯಾ ಅಧ್ಯಕ್ಷ ಮಾರುತಿ ಸೋನಗೋಜಿ, ಮುಖಂಡರಾದ ವೆಂಕಟೇಶ ಜಾಧವ, ರಾಮಚಂದ್ರ ಧೋಂಗಡೆ, ಸುಧಾ ನವಲೆ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here